AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ

Gold Overdraft loan facility: ಗೋಲ್ಡ್ ಲೋನ್​ನಲ್ಲಿ ಮಂಜೂರಾದ ಸಾಲದ ಹಣಕ್ಕೆ ತತ್​ಕ್ಷಣದಿಂದಲೇ ಬಡ್ಡಿ ಅನ್ವಯ ಆಗುತ್ತದೆ. ಆದರೆ, ಗೋಲ್ಡ್ ಓವರ್​ಡ್ರಾಫ್ಟ್ ಲೋನ್​ನಲ್ಲಿ ನಿಗದಿತ ಸಾಲವನ್ನು ಮಂಜೂರು ಮಾಡಲಾಗುತ್ತದೆ. ಅದರಲ್ಲಿ ಎಷ್ಟು ಹಣ ಉಪಯೋಗಿಸುತ್ತೀರೋ ಅಷ್ಟಕ್ಕೆ ಮಾತ್ರ ಬಡ್ಡಿ ಕಟ್ಟಬಹುದು. ಮನೆ ನಿರ್ಮಾಣದಂತೆ ಹಂತ ಹಂತವಾಗಿ ಖರ್ಚು ವೆಚ್ಚಗಳು ಇದ್ದ ಸಂದರ್ಭದಲ್ಲಿ ಓವರ್​ಡ್ರಾಫ್ಟ್ ಫೆಸಿಲಿಟಿ ಉಪಯುಕ್ತ ಎನಿಸುತ್ತದೆ.

ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ
ಗೋಲ್ಡ್ ಲೋನ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 06, 2026 | 9:36 PM

Share

ಬ್ಯಾಂಕ್ ಓವರ್​ಡ್ರಾಫ್ಟ್ ಅಥವಾ ಓ.ಡಿ. ಫೆಸಿಲಿಟಿ (Overdraft facility) ಬಗ್ಗೆ ಗೊತ್ತಿರಬಹುದು. ಅಂಥದ್ದೇ ರೀತಿ ಗೋಲ್ಡ್ ಓವರ್​ಡ್ರಾಫ್ಟ್ (Gold OD) ಸಾಲದ ಸೌಲಭ್ಯ ಇದೆ. ಬಹುತೇಕ ಎಲ್ಲಾ ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು ಈ ಗೋಲ್ಡ್ ಒ.ಡಿ. ಸೌಲಭ್ಯದ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತವೆ. ಚಿನ್ನ ಅಥವಾ ಒಡವೆ ಮೇಲೆ ಸಾಲ ಬಹಳ ಸುಲಭವಾಗಿ ಸಿಗುತ್ತದೆ. ಇದು ಬಹಳ ಜನಪ್ರಿಯವೂ ಹೌದು. ಆದರೆ, ಗೋಲ್ಡ್ ಓವರ್​ಡ್ರಾಫ್ಟ್ ಲೋನ್ ಇದಕ್ಕಿಂತಲೂ ಹೆಚ್ಚಿನ ಉಪಯುಕ್ತತೆ ಹೊಂದಿದೆ.

ಏನಿದು ಗೋಲ್ಡ್ ಓವರ್​ಡ್ರಾಫ್ಟ್ ಫೆಸಿಲಿಟಿ?

ಬ್ಯಾಂಕ್​ನಲ್ಲಿ ಕೆಲ ಸಾಲಗಳಿಗೆ ಓವರ್​ಡ್ರಾಫ್ಟ್ ಫೆಸಿಲಿಟಿ ಕೊಡಲಾಗುತ್ತದೆ. ಅನೇಕ ಹೋಮ್​ಲೋನ್​ಗಳಿಗೆ ಈ ಆಯ್ಕೆ ಇರುತ್ತದೆ. ಅಂದರೆ, ಗ್ರಾಹಕರಿಗೆ ನಿರ್ದಿಷ್ಟ ಮೊತ್ತದಷ್ಟು ಸಾಲವನ್ನು ಮಂಜೂರು ಮಾಡಲಾಗುತ್ತದೆ. ಇದರಲ್ಲಿ ಎಷ್ಟೆಷ್ಟು ಬೇಕೋ ಅಷ್ಟಷ್ಟು ಹಣವನ್ನು ವಿವಿಧ ಸಂದರ್ಭಗಳಲ್ಲಿ ಬಳಸಬಹುದು. ಎಷ್ಟು ಬಳಸುತ್ತೀರೋ ಅಷ್ಟಕ್ಕೆ ಮಾತ್ರ ಬಡ್ಡಿ ಕಟ್ಟುತ್ತೀರಿ.

ಇದನ್ನೂ ಓದಿ: ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್

ಗೋಲ್ಡ್ ಓವರ್​ಡ್ರಾಫ್ಟ್ ಲೋನ್ ಕೂಡ ಹೀಗೆಯೇ. ನಿಮಗೆ 10 ಲಕ್ಷ ರೂ ಸಾಲ ಮಂಜೂರು ಮಾಡಿದರೆ, ಅದರಲ್ಲಿ ನಿಮಗೆ ಬೇಕಾದಷ್ಟನ್ನು ಮಾತ್ರ ಬಳಸಬಹುದು. ಅಷ್ಟಕ್ಕೆ ಮಾತ್ರ ಬಡ್ಡಿ ಅನ್ವಯ ಆಗುತ್ತದೆ. ಈ ತಿಂಗಳು 2 ಲಕ್ಷ ಉಪಯೋಗಿಸುತ್ತೀರಿ. ಇನ್ನೆರಡು ತಿಂಗಳು ಬಿಟ್ಟು 1 ಲಕ್ಷ ಉಪಯೋಗಿಸುತ್ತೀರಿ. ನೀವು ಈ 3 ಲಕ್ಷ ರೂಗೆ ಮಾತ್ರ ಬಡ್ಡಿ ಕಟ್ಟುತ್ತೀರಿ. ಆದರೆ, ಇನ್ನೂ 7 ಲಕ್ಷ ನಿಮ್ಮ ಲೋನ್ ಅಕೌಂಟ್​ನಲ್ಲಿ ಉಳಿದಿರುತ್ತದೆ. ಅದಕ್ಕೆ ಬಡ್ಡಿ ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಮನೆ ಕಟ್ಟಿಸುತ್ತಿರುವವರಿಗೆ ಅಥವಾ ಅನಿಶ್ಚಿತ ಖರ್ಚು ವೆಚ್ಚಗಳ ಸಂದರ್ಭದಲ್ಲಿ ಇರುವವರಿಗೆ ಈ ಓವರ್​ಡ್ರಾಫ್ಟ್ ಫೆಸಿಲಿಟಿ ಬಹಳ ಉಪಯೋಗ ಆಗುತ್ತದೆ.

ಇದನ್ನೂ ಓದಿ: April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಇದಕ್ಕೆ ಪ್ರತಿಯಾಗಿ ಗೋಲ್ಡ್ ಲೋನ್​ನಲ್ಲಿ ನಿಮಗೆ ಒಮ್ಮೆಗೇ ಎಲ್ಲಾ ಲೋನ್ ಮೊತ್ತವನ್ನು ರಿಲೀಸ್ ಮಾಡಲಾಗುತ್ತದೆ. ಅಷ್ಟಕ್ಕೂ ತತ್​ಕ್ಷಣದಿಂದಲೇ ಬಡ್ಡಿ ಅನ್ವಯ ಆಗತೊಡಗುತ್ತದೆ. ಒಮ್ಮೆಗೇ ಎಲ್ಲಾ ಹಣ ವ್ಯಯಿಸಬೇಕಿದ್ದಲ್ಲಿ ಈ ಸಾಲ ಸರಿ. ವಿವಿಧ ಕಾಲದವರೆಗೆ ವೆಚ್ಚಗಳು ಇರುತ್ತವೆ ಎಂದಾದಲ್ಲಿ ಓವರ್​​ಡ್ರಾಫ್ಟ್ ಫೆಸಿಲಿಟಿ ಉಪಯುಕ್ತ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ!
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ಬಿಜೆಪಿಯಲ್ಲಿ ಸಂಚಲನ
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!
ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ!