ಬ್ಯಾಂಕೇತರ ಸಂಸ್ಥೆಗಳಿಗೆ ಹಂತ ಹಂತವಾಗಿ RTGS, NEFT ಕೇಂದ್ರೀಯ ಪಾವತಿ ವ್ಯವಸ್ಥೆ ಸಂಪರ್ಕಕ್ಕೆ ಅವಕಾಶ ನೀಡಲಿದೆ ಆರ್​ಬಿಐ

ಪಾವತಿ ವ್ಯವಸ್ಥೆಯನ್ನು (Payment System) ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಬ್ಯಾಂಕ್​ನಿಂದ ಡಿಜಿಟಲ್ ಪಾವತಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಪ್ರೀಪೇಯ್ಡ್ ಪಾವತಿ ವಿತರಕರು, ಕಾರ್ಡ್​ ನೆಟ್​ವರ್ಕ್​ಗಳು ಮತ್ತು ವೈಟ್​ಲೇಬಲ್ ಎಟಿಎಂ ಆಪರೇಟರ್​ಗಳು ಸೇರಿದಂತೆ ಅಂಗೀಕೃತವಾದ ನಾನ್- ಬ್ಯಾಂಕ್​ಗಳ ಪಾವತಿ ವ್ಯವಸ್ಥೆ ಒದಗಿಸುವವರು ಸಹ ಕೇಂದ್ರೀಯ ಪಾವತಿ ವ್ಯವಸ್ಥೆಗಳಾದ RTGS ಮತ್ತು NEFTನಲ್ಲಿ ಮೊದಲ ಹಂತದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ ಎಂದು ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾ ತಿಳಿಸಿದೆ. ಹೆಚ್ಚೆಚ್ಚು ಪಾವತಿ ವ್ಯವಸ್ಥೆಗೆ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವ ಮೂಲಕ ಕೇಂದ್ರ […]

ಬ್ಯಾಂಕೇತರ ಸಂಸ್ಥೆಗಳಿಗೆ ಹಂತ ಹಂತವಾಗಿ RTGS, NEFT ಕೇಂದ್ರೀಯ ಪಾವತಿ ವ್ಯವಸ್ಥೆ ಸಂಪರ್ಕಕ್ಕೆ ಅವಕಾಶ ನೀಡಲಿದೆ ಆರ್​ಬಿಐ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 29, 2021 | 2:07 PM

ಪಾವತಿ ವ್ಯವಸ್ಥೆಯನ್ನು (Payment System) ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಬ್ಯಾಂಕ್​ನಿಂದ ಡಿಜಿಟಲ್ ಪಾವತಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಪ್ರೀಪೇಯ್ಡ್ ಪಾವತಿ ವಿತರಕರು, ಕಾರ್ಡ್​ ನೆಟ್​ವರ್ಕ್​ಗಳು ಮತ್ತು ವೈಟ್​ಲೇಬಲ್ ಎಟಿಎಂ ಆಪರೇಟರ್​ಗಳು ಸೇರಿದಂತೆ ಅಂಗೀಕೃತವಾದ ನಾನ್- ಬ್ಯಾಂಕ್​ಗಳ ಪಾವತಿ ವ್ಯವಸ್ಥೆ ಒದಗಿಸುವವರು ಸಹ ಕೇಂದ್ರೀಯ ಪಾವತಿ ವ್ಯವಸ್ಥೆಗಳಾದ RTGS ಮತ್ತು NEFTನಲ್ಲಿ ಮೊದಲ ಹಂತದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ ಎಂದು ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾ ತಿಳಿಸಿದೆ. ಹೆಚ್ಚೆಚ್ಚು ಪಾವತಿ ವ್ಯವಸ್ಥೆಗೆ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವ ಮೂಲಕ ಕೇಂದ್ರ ಬ್ಯಾಂಕ್​ನಿಂದ ಉತ್ತೇಜನ ನೀಡಲಾಗುತ್ತಿದೆ.

ಆರ್​ಬಿಐ ಅಧಿಸೂಚನೆಯ ಪ್ರಕಾರ, ನಿಯಂತ್ರಕ ಸಂಸ್ಥೆಯ ಅಡಿಯಲ್ಲಿ ಅಂಗೀಕೃತ ಎನ್​ಬಿಎಫ್​ಸಿಗಳು, ಪಿಎಸ್​ಪಿಗಳು (ನಾನ್ ಬ್ಯಾಂಕ್ ಪೇಮೆಂಟ್ ಸಿಸ್ಟಮ್ ಪ್ರೊವೈಡರ್​ಗಳು), ಇತರ ನಿಯಂತ್ರಕಗಳಾದ ಪಿಎಫ್​ಆರ್​ಡಿಎ, ಐಆರ್​ಡಿಎಐ, SEBI ಅಡಿ ರೆಮಿಟ್ ಆಗುವಂಥದ್ದು ಕೇಂದ್ರೀಯ ಪಾವತಿ ವ್ಯವಸ್ಥೆಗೆ ಸಂಪರ್ಕಕ್ಕೆ ಅವಕಾಶ ಮಾಡಿಕೊಡುತ್ತದೆ. ಸದ್ಯಕ್ಕೆ ಬ್ಯಾಂಕ್​ಗಳು ಹೊರತುಪಡಿಸಿ, ಕೆಲವು ನಾನ್ ಬ್ಯಾಂಕ್​ಗಳಿಗೆ ಕೇಂದ್ರೀಯ ಪಾವತಿ ವ್ಯವಸ್ಥೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಬ್ಯಾಂಕ್​ಗಳು ನಾನ್​ ಬ್ಯಾಂಕ್​ಗಳ ಪಾವತಿ ಮತ್ತು ತೀರುವಳಿ ಅಗತ್ಯಗಳಿಗೆ ಸೇವೆಯನ್ನು ಒದಗಿಸುತ್ತವೆ.

ಕೇಂದ್ರೀಯ ಪಾವತಿ ವ್ಯವಸ್ಥೆಗೆ ನೇರವಾಗಿ ಬ್ಯಾಂಕೇತರ ಸಂಸ್ತೆಗಳಿಗೆ ಸಂಪರ್ಕಕ್ಕೆ ಅವಕಾಶ ಒದಗಿಸಿದರೆ ಪಾವತಿ ವ್ಯವಸ್ಥೆಯಲ್ಲಿ ಒಟ್ಟಾರೆ ಅಪಾಯವೇ ಕಡಿಮೆ ಆಗುತ್ತದೆ ಎಂದು ಆರ್​ಬಿಐ ತಿಳಿಸಿದೆ. ಇದರ ಜತೆಗೆ ನಾನ್​ ಬ್ಯಾಂಕ್​ಗಳಿಗೆ ಪಾವತಿ ವೆಚ್ಚವು ಕಡಿಮೆ ಆಗುತ್ತದೆ. ಬ್ಯಾಂಕ್​ಗಳ ಮೇಲೆ ಅವಲಂಬನೆ ಕಡಿಮೆ ಆಗಿ, ಸಮಯ ಉಳಿತಾಯ ಆಗುತ್ತದೆ. ಇನ್ನು ಕೇಂದ್ರ ಬ್ಯಾಂಕ್​ನ ಹಣದಲ್ಲಿ ತೀರುವಳಿ ಆಗುವುದರಿಂದ ಅಂತಿಮ ಪಾವತಿಯ ಅನಿಶ್ಚಿತತೆ ಇರುವುದಿಲ್ಲ.

ಬ್ಯಾಂಕೇತರ ಸಂಸ್ಥೆಗಳಿಗೆ ಕೇಂದ್ರೀಯ ಪಾವತಿ ವ್ಯವಸ್ಥೆಗೆ ಸಂಪರ್ಕ ದೊರಕಿಸಿಕೊಟ್ಟರೆ ಅದಕ್ಕಾಗಿ ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ಕೋಡ್​ (IFSC) ಪ್ರತ್ಯೇಕವಾಗಿ ನೀಡಲಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಕೋರ್ ಬ್ಯಾಂಕಿಂಗ್ ಸಿಸ್ಟಮ್ (ಇ-ಕುಬೇರ್)ನಲ್ಲಿ ಕರೆಂಟ್ ಅಕೌಂಟ್ ತೆರೆಯಬಹುದು. ಆರ್​ಬಿಐ ಬಳಿ ತೀರುವಳಿ ಖಾತೆ ನಿರ್ವಹಿಸಬಹುದು. ಇಂಡಿಯನ್ ಫೈನಾನ್ಷಿಯಲ್ ನೆಟ್​ವರ್ಕ್ (INFINET) ಸದಸ್ಯತ್ವ ಪಡೆಯಬಹುದು. ಕೇಂದ್ರೀಯ ಪಾವತಿ ವ್ಯವಸ್ಥೆ ಜತೆಗಿನ ಸಂವಹನಕ್ಕೆ ಸ್ಟ್ರಕ್ಚರ್ಡ್ ಫೈನಾನ್ಷಿಯಲ್ ಮೆಸೇಜಿಂಗ್ ಸಿಸ್ಟಮ್ (SFMS) ಬಳಸಬಹುದು.

ಅರ್ಹತಾ ಮಾನದಂಡಗಳು ಬ್ಯಾಂಕೇತರ ಪಿಎಸ್​ಪಿಗಳು ಕೇಂದ್ರೀಯ ಪಾವತಿ ವ್ಯವಸ್ಥೆಗೆ ಸಂಪರ್ಕ ಪಡೆಯಲು ಆರ್​ಬಿಐನಿಂದ ಸಿಂಧುವಾದ ಪ್ರಮಾಣಪತ್ರವನ್ನು ಪಡೆಯಬೇಕು. ಪೇಮೆಂಟ್ ಮತ್ತು ಸೆಟ್ಲ್​ಮೆಂಟ್ ಸಿಸ್ಟಮ್ ಆ್ಯಕ್ಟ್​, 2007 ಅಡಿಯಲ್ಲಿ ನಿವ್ವಳ ಮೌಲ್ಯ ಕನಿಷ್ಠ 25 ಕೋಟಿ ಇದ್ದು, ಭಾರತದಲ್ಲಿ ಇನ್​ಕಾರ್ಪೊರೇಟ್ ಆಗಿರಬೇಕು. ಇದರ ಜತೆಗೆ ಅಗತ್ಯ ತಾಂತ್ರಿಕ ಮತ್ತು ಸಿಸ್ಟಮ್​ ಸಿದ್ಧತೆ ಇರಬೇಕು. ಸ್ಥಳೀಯ ಡೇಟಾ ಸ್ಟೋರೇಜ್ ನಿಯಮಾವಳಿಗೆ ಬದ್ಧವಾಗಿದ್ದು, ಸೈಬರ್ ಭದ್ರತೆ ಒಳಗೊಂಡಿರಬೇಕು.

ಇದನ್ನೂ ಓದಿ: RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ

(RBI Will Allow Non Bank Firms To Access Central Payment System Phase By Phase)

Published On - 2:06 pm, Thu, 29 July 21