ಬೆಲೆ ಕೇವಲ 8,999 ರೂ.: ಭಾರತದಲ್ಲಿ ರಿಯಲ್ ಮಿ C33 ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯ
ರಿಯಲ್ ಮಿ C33 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿತ್ತು. ಇದರ 3GB RAM + 32GB ಸ್ಟೋರೇಜ್ಗೆ 8,999 ರೂ. ನಿಗದಿ ಮಾಡಲಾಗಿದೆ. ರಿಯಲ್ ಮಿ C33 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿತ್ತು. ಇದರ 3GB RAM + 32GB ಸ್ಟೋರೇಜ್ಗೆ 8,999 ರೂ. ನಿಗದಿ ಮಾಡಲಾಗಿದೆ. ರಿಯಲ್ ಮಿ C33 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿತ್ತು. ಇದರ 3GB RAM + 32GB ಸ್ಟೋರೇಜ್ಗೆ 8,999 ರೂ. ನಿಗದಿ ಮಾಡಲಾಗಿದೆ.

ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಬಜೆಟ್ ಬೆಲೆಯ ಫೋನ್ಗಳು ಬಿಡುಗಡೆ ಆಗಿವೆ ಎಂದರೆ ತಪ್ಪಾಗಲಾರದು. ಕಡಿಮೆ ಎಂದರೂ ತಿಂಗಳಿಗೆ ಮೂರರಿಂದ ನಾಲ್ಕು ಮೊಬೈಲ್ಗಳು ರಿಲೀಸ್ ಆಗುತ್ತಿದ್ದು ಇದರಲ್ಲಿ ಬಹುತೇಕ ಫೋನುಗಳು ಕೈಗೆಟಕುವ ಬೆಲೆಯಲ್ಲೇ ಇರುತ್ತದೆ. ಅದರಲ್ಲೂ ಭಾರತದಲ್ಲಿ ರಿಯಲ್ ಮಿ ಕಂಪನಿಯ ಬಜೆಟ್ ಫೋನ್ಗಳಿಗೆ ಭರ್ಜರಿ ಬೇಡಿಕೆ ಇದೆ. ಇದಕ್ಕಾಗಿಯೆ ಕಂಪನಿ ಹೆಚ್ಚಾಗಿ 20,000 ರೂ. ಒಳಗೆ ಆಕರ್ಷಕ ಫೀಚರ್ಗಳ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡುತ್ತದೆ. ಈ ಸಾಲಿಗೆ ಇತ್ತೀಚೆಗಷ್ಟೆ ರಿಯಲ್ ಮಿ ಸಿ33 ಫೋನ್ ಕೂಡ ಸೇರಿತ್ತು. ಈ ಮೊಬೈಲ್ ಇದೀಗ ಖರೀದಿಗೆ ಸಿಗುತ್ತಿದೆ. ಈ ಫೋನ್ 10,000 ರೂ. ಒಳಗಡೆ ಬಿಡುಗಡೆ ಆಗಿದೆ. ಆದರೂ ಬರೋಬ್ಬರಿ 50 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ. ಈ ಫೋನಿನ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.
ರಿಯಲ್ ಮಿ C33 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿತ್ತು. ಇದರ 3GB RAM + 32GB ಸ್ಟೋರೇಜ್ಗೆ 8,999 ರೂ. ನಿಗದಿ ಮಾಡಲಾಗಿದೆ. 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 9,999 ರೂ. ಇದೆ. ಈ ಫೋನ್ ಅಕ್ವಾ ಬ್ಲೂ, ಸ್ಯಾಂಡಿ ಗೋಲ್ಡ್ ಹಾಗೂ ನೈಟ್ ಸಿಯಾ ಕಲರ್ನಲ್ಲಿ ಖರೀದಿಗೆ ಸಿಗುತ್ತದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿ ಅಧಿಕೃತ ವೆಬ್ಸೈಟ್ನಲ್ಲಿ ಈ ಫೋನ್ ಇದೀಗ ಮಾರಾಟ ಕಾಣುತ್ತಿದೆ.
ಈ ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 6.5 ಇಂಚಿನ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. 400 ನಿಟ್ಸ್ ಬ್ರೈಟ್ನೆಸ್ ಸಾಮರ್ಥ್ಯ ಪಡೆದುಕೊಂಡಿದೆ. Unisoc T612 ಪ್ರೊಸೆಸರ್ ಅಳವಡಿಸಲಾಗಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನ ರಿಯಲ್ ಮಿ UI S ಬೆಂಬಲವನ್ನು ಪಡೆದುಕೊಂಡಿದೆ.
ಈ ಸ್ಮಾರ್ಟ್ಫೋನ್ನಲ್ಲಿ ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ನೀಡಲಾಗಿದೆ. ಜೊತೆಗೆ LED ಫ್ಲ್ಯಾಸ್ ಕೂಡ ಇದೆ. ಎರಡನೇ ಕ್ಯಾಮೆರಾ 0.3 ಮೆಗಾಪಿಕ್ಸೆಲ್. ಇದರಲ್ಲಿರುವ ಮುಖ್ಯ ಕ್ಯಾಮೆರಾ ಹೆಚ್ಡಿಆರ್ ಮೋಡ್, ಪಾನೊರಮಿಕ್, ಪೋರ್ಟ್ಟ್ರೈಟ್ ಮೋಡ್, ಟೈಮ್ ಲಾಪ್ಸ್ ಸೇರಿದಂತೆ ಅನೇಕ ಫೀಚರ್ಗಳಿಂದ ಆವೃತ್ತವಾಗಿದೆ. ಮುಂಭಾಗ ಕೂಡ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ಸಾಮಾನ್ಯ ವೇಗದ ಚಾರ್ಜರ್ನೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ.
Published On - 6:45 am, Tue, 13 September 22




