Closing Bell: ಸೆನ್ಸೆಕ್ಸ್, ನಿಫ್ಟಿ ಮೂರನೇ ಸೆಷನ್ ಏರಿಕೆ; ಇಂಡಸ್ಇಂಡ್ ಬ್ಯಾಂಕ್ ಷೇರು 53 ರೂಪಾಯಿ ಹೆಚ್ಚಳ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 2ನೇ ತಾರೀಕಿನಂದು ಸತತ ಮೂರನೇ ಸೆಷನ್ ಏರಿಕೆ ಆಗಿದೆ. ಇಂಡಸ್ಇಂಡ್ ಬ್ಯಾಂಕ್ ಷೇರು ರೂ. 53 ಹೆಚ್ಚಳವಾಗಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸತತ ಮೂರನೇ ಸೆಷನ್, ಬುಧವಾರ ಕೂಡ ಏರಿಕೆಯನ್ನು ದಾಖಲಿಸಿದೆ. ಫೆಬ್ರವರಿ 2ನೇ ತಾರೀಕಿನಂದು ತುಂಬ ಆರಾಮವಾಗಿ ನಿಫ್ಟಿ ಸೂಚ್ಯಂಕವು 17,700 ಪಾಯಿಂಟ್ಸ್ ದಾಟಿತು. ದಿನದ ಕೊನೆಗೆ ಸೆನ್ಸೆಕ್ಸ್ 695.76 ಪಾಯಿಂಟ್ಸ್ ಅಥವಾ ಶೇ 1.18ರಷ್ಟು ಮೇಲೇರಿ 59,558.33 ಪಾಯಿಂಟ್ಸ್ನಲ್ಲಿ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 203.20 ಪಾಯಿಂಟ್ಸ್ ಅಥವಾ ಶೇ 1.16ರಷ್ಟು ಏರಿಕೆ ಕಂಡು, 17,780 ಪಾಯಿಂಟ್ಸ್ನಲ್ಲಿ ದಿನಾಂತ್ಯದ ವ್ಯವಹಾರ ಕೊನೆಗೊಳಿಸಿದೆ. ಇಂದಿನ ವಹಿವಾಟಿನಲ್ಲಿ 2243 ಕಂಪೆನಿ ಷೇರುಗಳು ಏರಿಕೆ ದಾಖಲಿಸಿದರೆ, 1038 ಕಂಪೆನಿ ಷೇರುಗಳು ಇಳಿಕೆ ಕಂಡಿದ್ದರೆ ಹಾಗೂ 90 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎಲ್ಲ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯ ಕಂಡಿವೆ. ಬ್ಯಾಂಕ್, ರಿಯಾಲ್ಟಿ, ಫಾರ್ಮಾ, ಎಫ್ಎಂಸಿಜಿ, ಮಾಹಿತಿ ತಂತ್ರಜ್ಞಾನ ಹಾಗೂ ಪಿಎಸ್ಯು ಬ್ಯಾಂಕ್ ಸೂಚ್ಯಂಕಗಳು ಶೇ 1ರಿಂದ ಶೇ 3ರಷ್ಟು ಹೆಚ್ಚಳವಾಗಿದೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಶೇ 1ರಿಂದ ಶೇ 1.5ರಷ್ಟು ಹೆಚ್ಚಳವಾಗಿದೆ. ಇಂದಿನ ವಹಿವಾಟಿನಲ್ಲಿ ಏರಿಕೆ ಹಾಗೂ ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಇಂಡಸ್ಇಂಡ್ ಬ್ಯಾಂಕ್ ಶೇ 5.75
ಬಜಾಜ್ ಫಿನ್ಸರ್ವ್ ಶೇ 5.04
ಎಚ್ಸಿಎಲ್ ಟೆಕ್ ಶೇ 3.37
ಬಜಾಜ್ ಫೈನಾನ್ಸ್ ಶೇ 3.32
ಎಚ್ಡಿಎಫ್ಸಿ ಲೈಫ್ ಶೇ 3.25
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಟೆಕ್ ಮಹೀಂದ್ರಾ ಶೇ -1.51
ಅಲ್ಟ್ರಾ ಟೆಕ್ ಸಿಮೆಂಟ್ ಶೇ -1.00
ಬ್ರಿಟಾನಿಯಾ ಶೇ -0.97
ನೆಸ್ಟ್ಲೆ ಶೇ -0.92
ಹೀರೋ ಮೋಟೋಕಾರ್ಪ್ ಶೇ -0.89
ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ