AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ

Skyroot Aerospace founder's inspirational journey: ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಇವತ್ತು ಭಾರತದ ಖಾಸಗಿ ವಲಯದ ಅತಿದೊಡ್ಡ ಬಾಹ್ಯಾಕಾಶ ಕಂಪನಿಯಾಗಿದೆ. ಭಾರತದ ಯೂನಿಕಾರ್ನ್ ಕಂಪನಿಯಾಗಿ ಬೆಳೆಯುತ್ತಿದೆ. ಇದರ ಸ್ಥಾಪಕ ಪವನ್ ಕುಮಾರ್ ಚಂದನಾ ಅವರು ಮಾಜಿ ಇಸ್ರೋ ವಿಜ್ಞಾನಿ. ಐಐಟಿಯಲ್ಲಿ ಕಲಿತವರು. ಶಾಲಾ ದಿನಗಳಲ್ಲಿ ಗಣಿತದಲ್ಲಿ ನೂರಕ್ಕೆ 51 ಅಂಕ ಗಳಿಸಿದ್ದ ಇವರು ದೃತಿಗೆಟ್ಟಿದ್ದರೆ ಇವತ್ತು ಸ್ಕೈರೂಟ್​ನಂತಹ ಕಂಪನಿ ಸ್ಥಾಪನೆಯಾಗುತ್ತಿರಲಿಲ್ಲ.

ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ
ಪವನ್ ಕುಮಾರ್ ಚಂದನಾImage Credit source: X @SkyrootA
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 17, 2026 | 9:09 PM

Share

ಬೆಂಗಳೂರು, ಜೂನ್ 17: ಒಬ್ಬ ವಿದ್ಯಾರ್ಥಿಯ ನೈಜ ಸಾಮರ್ಥ್ಯವನ್ನು ಪರೀಕ್ಷೆಯಲ್ಲಿ ಆತ ತೆಗೆದುಕೊಳ್ಳುವ ಅಂಕಗಳಿಂದ ಅಳೆಯಲಾಗದು. ಶಾಲೆಗೆ ಹೋಗದವರು, ಪರೀಕ್ಷೆಯಲ್ಲಿ ಫೇಲ್ ಆದವರು ಜೀವನದಲ್ಲಿ ಉನ್ನತ ಹಂತಕ್ಕೆ ಹೋದ ಲೆಕ್ಕವಿಲ್ಲದಷ್ಟು ನಿದರ್ಶನಗಳು ಸಿಗುತ್ತವೆ. ಅಂಥವರಲ್ಲಿ ಒಬ್ಬರು ‘ಸ್ಕೈರೂಟ್ ಏರೋಸ್ಪೇಸ್’ ಕಂಪನಿಯ ಸ್ಥಾಪಕ ಪವನ್ ಕುಮಾರ್ ಚಂದನಾ’. ಇವರು ಗಣಿತ ಪರೀಕ್ಷೆಯಲ್ಲಿ ನೂರಕ್ಕೆ 51 ಅಂಕ ಪಡೆದಿದ್ದರು. ಆದರೆ, ಇವತ್ತು ಗಣಿತವನ್ನೇ ಇವರು ತಮ್ಮ ಸಾಧನೆಯ ತಳಹದಿಯಾಗಿ ಮಾಡಿಕೊಂಡಿದ್ದಾರೆ. ಭಾರತದ ಬಾಹ್ಯಾಕಾಶ ರಂಗದಲ್ಲಿ ಕ್ರಾಂತಿ ಸೃಷ್ಟಿಸುತ್ತಿರುವ ಯುವ ಉದ್ಯಮಿ ಪವನ್ ಕುಮಾರ್ ಚಂದನಾ ಅವರದ್ದು ಸ್ಪೂರ್ತಿದಾಯಕ ಯಶೋಗಾಥೆ. ಭಾರತದ ಅತಿ ದೊಡ್ಡ ಖಾಸಗಿ ರಾಕೆಟ್ ಕಾರ್ಖಾನೆಯ ಮಾಲೀಕನಾಗಿ ಬೆಳೆದ ರೋಚಕ ಕಥೆ ಇದು.

ಗಣಿತದಲ್ಲಿ ಕಡಿಮೆ ಅಂಕದಿಂದ ಐಐಟಿ ಹಾದಿಯವರೆಗೆ

ಪವನ್ ಕುಮಾರ್ ಚಂದನಾ ಅವರ ಯಶಸ್ಸಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಶಾಲಾ ದಿನಗಳಲ್ಲಿ ಅವರು ಗಣಿತ ಪರೀಕ್ಷೆಯೊಂದರಲ್ಲಿ 100 ಕ್ಕೆ ಕೇವಲ 51 ಅಂಕಗಳನ್ನು ಪಡೆದಿದ್ದರು. ಸಾಮಾನ್ಯವಾಗಿ ಇಷ್ಟು ಕಡಿಮೆ ಅಂಕ ಬಂದಾಗ ಅನೇಕರು ಧೃತಿಗೆಡುತ್ತಾರೆ, ಆದರೆ ಪವನ್ ಅದನ್ನು ಸವಾಲಾಗಿ ಸ್ವೀಕರಿಸಿದರು. ಕಠಿಣ ಪರಿಶ್ರಮ ಪಟ್ಟ ಅವರು ಮುಂದೆ ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಐಐಟಿ ಖರಗ್‌ಪುರದಲ್ಲಿ (IIT Kharagpur) ಪ್ರವೇಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲಿ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಹಾಗೂ ಬಿಲ್ಡಿಂಗ್ ಟೆಕ್ನಾಲಜಿಯಲ್ಲಿ ದ್ವಿಪದವಿ (Dual Degree) ಪಡೆದರು.

ಇಸ್ರೋ (ISRO) ವಿಜ್ಞಾನಿಯಾಗಿ ಸೇವೆ

ಐಐಟಿ ಮುಗಿಸಿದ ನಂತರ ಪವನ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿದರು. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSC) ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ ಅವರು, ಭಾರತದ ಹೆಮ್ಮೆಯ ರಾಕೆಟ್‌ಗಳಾದ ಜಿಎಸ್‌ಎಲ್‌ವಿ ಎಂಕೆ-3 (GSLV Mk-III – ಈಗಿನ LVM3) ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಸ್ರೋದಲ್ಲಿ ಸಿಕ್ಕ ಅನುಭವ ಅವರಲ್ಲಿದ್ದ ಉದ್ಯಮಿಯಾಗುವ ಕನಸಿಗೆ ದೊಡ್ಡ ರೆಕ್ಕೆಗಳನ್ನು ನೀಡಿತು.

ಇದನ್ನೂ ಓದಿ: ಬೆಂಗಳೂರಿನ ಐಐಎಂ ಕ್ಯಾಂಪಸ್​ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್​ಗಳು ಆಫರ್; ಟಾಟಾ ಟ್ರಸ್ಟ್ಸ್​ನಿಂದ ಅನುದಾನ

ಇಸ್ರೋ ಕೆಲಸಕ್ಕೆ ರಿಸೈನ್: ‘ಸ್ಕೈರೂಟ್ ಏರೋಸ್ಪೇಸ್’ ಸ್ಥಾಪನೆ

ಭಾರತದ ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಅಪಾರ ಅವಕಾಶಗಳಿವೆ ಎಂಬುದನ್ನು ಮನಗಂಡ ಪವನ್, 2018 ರಲ್ಲಿ ತಮ್ಮ ಸುರಕ್ಷಿತ ಇಸ್ರೋ ವಿಜ್ಞಾನಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ತಮ್ಮ ಸಹೋದ್ಯೋಗಿ ನಾಗ ಭರತ್ ಡಾಕಾ ಅವರೊಂದಿಗೆ ಸೇರಿ ಹೈದರಾಬಾದ್‌ನಲ್ಲಿ ‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ಎಂಬ ಸ್ಟಾರ್ಟ್‌ಅಪ್ ಆರಂಭಿಸಿದರು.

ಭಾರತದ ಅತಿ ದೊಡ್ಡ ರಾಕೆಟ್ ಕಾರ್ಖಾನೆಯ ಸಾಧನೆಗಳು

  • ನವೆಂಬರ್ 2022 ರಲ್ಲಿ ಸ್ಕೈರೂಟ್ ಸಂಸ್ಥೆಯು ‘ವಿಕ್ರಮ್-ಎಸ್’ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಇದರೊಂದಿಗೆ ಬಾಹ್ಯಾಕಾಶಕ್ಕೆ ರಾಕೆಟ್ ಕಳುಹಿಸಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಈ ಸಂಸ್ಥೆ ಪಾತ್ರವಾಯಿತು.
  • ಹೈದರಾಬಾದ್‌ನ ಜಿಎಂಆರ್ ಏರೋಸ್ಪೇಸ್ ಪಾರ್ಕ್​ನಲ್ಲಿರುವ ಇವರ ಕಂಪನಿಯ ಮುಖ್ಯ ಕಚೇರಿಯಾದ MAX-Q ಕ್ಯಾಂಪಸ್​ನಲ್ಲಿರುವ ಇವರ ಕಾರ್ಖಾನೆಯು ಭಾರತದ ಅತ್ಯಂತ ದೊಡ್ಡ ಖಾಸಗಿ ರಾಕೆಟ್ ಉತ್ಪಾದನಾ ಸೌಲಭ್ಯವಾಗಿದೆ. ಇಲ್ಲಿ ಅತ್ಯಾಧುನಿಕ 3D ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ರಾಕೆಟ್ ಇಂಜಿನ್‌ಗಳನ್ನು ತಯಾರಿಸಲಾಗುತ್ತದೆ.
  • ಪವನ್ ಅವರ ಈ ಅಸಾಧಾರಣ ಸಾಧನೆಯನ್ನು ಗುರುತಿಸಿ ಪ್ರಸಿದ್ಧ ‘ಫೋರ್ಬ್ಸ್’ (Forbes) ಪತ್ರಿಕೆಯು ತನ್ನ “30 ಅಂಡರ್ 30” (30 ವರ್ಷದೊಳಗಿನ ಸಾಧಕರು) ಏಷ್ಯಾ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಿತ್ತು.
  • ಅಮೆರಿಕಕ್ಕೆ ಸ್ಪೇಸ್ ಎಕ್ಸ್ ಇದ್ದಂತೆ ಭಾರತಕ್ಕೆ ಸ್ಕೈರೂಟ್ ಎಂದು ಹೇಳುವವರು ಇದ್ದಾರೆ. ಆ ಮಟ್ಟಕ್ಕೆ ಪವನ್ ನೇತೃತ್ವದ ಈ ಕಂಪನಿ ಭರವಸೆ ಮೂಡಿಸಿದೆ.

ಇದನ್ನೂ ಓದಿ: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು

ಪರೀಕ್ಷೆಯ ಅಂಕಗಳು ಒಬ್ಬ ವ್ಯಕ್ತಿಯ ಸಂಪೂರ್ಣ ಭವಿಷ್ಯ ಅಥವಾ ಅವರ ಬುದ್ಧಿವಂತಿಕೆಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದಕ್ಕೆ ಪವನ್ ಕುಮಾರ್ ಚಂದನಾ ಅವರ ಜೀವನವೇ ಅತ್ಯುತ್ತಮ ಉದಾಹರಣೆ. ದೃಢ ಸಂಕಲ್ಪವಿದ್ದರೆ ಶಾಲಾ ದಿನಗಳಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದವರೂ ಜಗತ್ತೇ ಮೆಚ್ಚುವ ಸಾಧನೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!