AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SMFG India Creditನಿಂದ ಸಣ್ಣ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿಗೆ ಸುಲಭ ಸಾಲ; ಹೊಸ ಬ್ರ್ಯಾಂಡ್ ಫಿಲಂ ಬಿಡುಗಡೆ

SMFG India Credit ad video: ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲಗಳನ್ನು ನೀಡುವ ಎಸ್ಎಂಎಫ್​ಜಿ ಇಂಡಿಯಾ ಕ್ರೆಡಿಟ್ ಸಂಸ್ಥೆ ಕಳೆದ ವಾರಾಂತ್ಯದಲ್ಲಿ ಆಕರ್ಷಕ ಜಾಹೀರಾತು ವಿಡಿಯೋವೊಂದನ್ನು ಅನಾವರಣಗೊಳಿಸಿದೆ. ಸಣ್ಣ ವ್ಯಾಪಾರಿಗಳ ವ್ಯವಹಾರ ವೃದ್ಧಿಗೆ ಈ ಕಂಪನಿಯ ಸಾಲ ಹೇಗೆ ಸಹಾಯವಾಗುತ್ತದೆ ಎಂಬುದನ್ನು ಹಾಸ್ಯಮಿಶ್ರಿತ ಮತ್ತು ಆಕರ್ಷಕ ಮ್ಯೂಸಿಕ್​ನೊಂದಿಗೆ ಈ ವಿಡಿಯೋದಲ್ಲಿ ಚಿತ್ರಿಸಲಾಗಿದೆ.

SMFG India Creditನಿಂದ ಸಣ್ಣ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿಗೆ ಸುಲಭ ಸಾಲ; ಹೊಸ ಬ್ರ್ಯಾಂಡ್ ಫಿಲಂ ಬಿಡುಗಡೆ
ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 11, 2025 | 11:01 AM

ಎಸ್ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಸಂಸ್ಥೆ ಇತ್ತೀಚೆಗೆ ಹೊಸ ಬ್ರ್ಯಾಂಡ್ ಕಿರುಚಿತ್ರವೊಂದನ್ನು ಬಿಡುಗಡೆಗೊಳಿಸಿದೆ. ಸಣ್ಣ ಹಾಗು ಮಧ್ಯಮ ಮಟ್ಟದ ವ್ಯವಹಾರಗಳನ್ನು ಹೊಂದಿರುವ ವ್ಯಾಪಾರಿಗಳಿಗೆ ಉತ್ತಮ ದರದಲ್ಲಿ ಸುಲಭ ಸಾಲಗಳನ್ನು ನೀಡುವ ಸಂಸ್ಥೆಯ ಬದ್ಧತೆಯನ್ನು ಈ ಆ್ಯಡ್ ಫಿಲಂನಲ್ಲಿ ಕಾಣಬಹುದು. ಸಣ್ಣ ಉದ್ದಿಮೆಗಳನ್ನು ಸಬಲೀಕರಣಗೊಳಿಸುವ ಕಾರ್ಯವನ್ನು ಬಿಂಬಿಸಲಾಗಿರುವ ಈ ವಿಡಿಯೋ ಬಹಳ ಮನರಂಜಕವಾಗಿದೆ.

ಸುಮಾರು ಒಂದು ನಿಮಿಷಕ್ಕಿಂತ ತುಸು ಹೆಚ್ಚು ದೀರ್ಘ ಇರುವ ಈ ವಿಡಿಯೋ ವಿಶೇಷ ಮ್ಯೂಸಿಕ್ ಹಾಗೂ ಹಾಸ್ಯದಿಂದ ಗಮನ ಸೆಳೆಯುತ್ತದೆ. ಅದಕ್ಕಿಂತ ಹೆಚ್ಚಾಗಿ, ಒಬ್ಬ ಸಣ್ಣ ವ್ಯಾಪಾರಿಗೆ ಬಂಡವಾಳ ಎಷ್ಟು ಮುಖ್ಯ, ಅದಿಲ್ಲದಿದ್ದರೆ ಆತನ ಬಿಸಿನೆಸ್ ಹೇಗೆ ಕುಂಠಿತಗೊಳ್ಳುತ್ತದೆ ಎಂಬುದನ್ನು ಬಹಳ ಪರಿಣಾಮಕಾಗಿಯಾಗಿ ಚಿತ್ರಿಸಲಾಗಿದೆ. ಎಸ್ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಬ್ಯುಸಿನೆಸ್ ಲೋನ್ ಒಬ್ಬ ವ್ಯಾಪಾರಿಯ ಜೀವನವನ್ನು ಹೇಗೆ ಮಾರ್ಪಡಿಸುತ್ತದೆ, ಹೊಸ ಮೈಲಿಗಲ್ಲನ್ನು ಸಾಧಿಸಲು ಮತ್ತು ಆರ್ಥಿಕ ಪ್ರಗತಿಯನ್ನು ಹೊಂದಲು ಯಾವ ರೀತಿಯಾಗಿ ಸಹಾಯ ಮಾಡುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಅದರ ಜೊತೆಜೊತೆಗೆ ಹೊಸ ಆರಂಭಕ್ಕೆ ಕಾರಣವಾಗುವ ಕ್ಷಮತೆ, ಮಹತ್ವಾಕಾಂಕ್ಷೆ, ಹಣಕಾಸು ಸಬಲೀಕರಣದ ಅಂಶಗಳನ್ನು ಈ ವಿಡಿಯೋದಲ್ಲಿ ಸಂಭ್ರಮಿಸುವುದನ್ನು ಕಾಣಬಹುದು.

ಫಿಲ್ಮ್ ಕುರಿತು ಪ್ರತಿಕ್ರಿಯೆ ನೀಡಿದ, ಎಸ್ಎಂಎಫ್‌ಜಿ ಇಂಡಿಯಾ ಕ್ರೆಡಿಟ್‌ನ ಚೀಫ್ ಬ್ಯುಸಿನೆಸ್ ಆಫೀಸರ್, ಅಜಯ್ ಪಾರೀಕ್ ಅವರು, “ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್ಎಂಜಿಗಳು) ಭಾರತದ ಜಿಡಿಪಿಗೆ ಸುಮಾರು 30% ಕೊಡುಗೆ ನೀಡುತ್ತದೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಆದರೂ ಸಹ ಅವರು ಸಾಮಾನ್ಯವಾಗಿ ಔಪಚಾರಿಕ ಸಾಲವನ್ನು ಪಡೆಯಲು ಸವಾಲುಗಳನ್ನು ಎದುರಿಸುತ್ತಾರೆ. ಈ ಬ್ರ್ಯಾಂಡ್ ಫಿಲ್ಮ್, ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಬ್ಯುಸಿನೆಸ್ ಲೋನ್‌ಗಳು ಸಣ್ಣ ರಿಟೇಲರ್ ವ್ಯಾಪಾರಿಗಳಿಗೆ ಯಾವ ರೀತಿಯಲ್ಲಿ ಆರ್ಥಿಕ ಬೆಂಬಲ ಒದಗಿಸುತ್ತವೆ ಮತ್ತು ಆಕರ್ಷಕ ಬಡ್ಡಿದರಗಳು, ಕನಿಷ್ಠ ದಾಖಲೆಗಳ ಅಗತ್ಯತೆ ಮತ್ತು ಸರಳ ಮರುಪಾವತಿ ಸೌಲಭ್ಯವನ್ನು ಹೇಗೆ ನೀಡುತ್ತವೆ ಎಂಬುದನ್ನು ಒತ್ತಿಹೇಳುತ್ತದೆ. ನಮ್ಮ ಉದ್ದೇಶಿತ ವೀಕ್ಷಕರಿಗೆ ಸಂದೇಶವನ್ನು ತಲುಪಿಸುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುವುದರಿಂದ ಹಾಸ್ಯ ಮತ್ತು ಸಂಗೀತವನ್ನು ಹದವಾಗಿ ಬೆರೆಸಿದ ಕಾವ್ಯಭರಿತ ವಿಶಿಷ್ಟವಾದ ಕಥಾಶೈಲಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.

ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್, ಸುಲಭವಾಗಿ ಪಡೆಯಬಹುದಾದ ಮತ್ತು ಸರಿಯಾಗಿ ಹೊಂದಬಹುದಾದ ಉದ್ಯಮ ಸಾಲ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ, ಇದು ಉದ್ಯಮಶೀಲತೆಯ ಅಭಿವೃದ್ಧಿಯನ್ನು ಬೆಂಬಲಿಸುವ ಮೂಲಕ ಭಾರತ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಪ್ರಮುಖ ಕೊಡುಗೆಯಾಗಿ ಉದ್ಯಮ ಸಾಲದ ಮೇಲೆ ಗಮನಹರಿಸುವ ಮೂಲಕ ಬೆಳವಣಿಗೆ ಮತ್ತು ಮಾರ್ಪಡಿಕೆಯನ್ನು ಬಯಸುವ ವ್ಯವಹಾರಗಳಿಗೆ ಆದ್ಯತೆಯ ಆರ್ಥಿಕ ಪಾಲುದಾರರಾಗಿ ಕಂಪನಿಯು ತನ್ನ ಸ್ಥಾನವನ್ನು ನಿರಂತರವಾಗಿ ಬಲಪಡಿಸಿಕೊಳ್ಳುತ್ತದೆ.

ಎಸ್ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕೋ. ಲಿ. ಕುರಿತು

ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಕೊ. ಲಿ. (ಹಿಂದೆ ಫುಲ್ಲರ್ಟನ್ ಇಂಡಿಯಾ ಕ್ರೆಡಿಟ್ ಕೊ.ಲಿ ಆಗಿತ್ತು), ಪ್ರಮುಖ ಎನ್‌ಬಿಎಫ್‌ಸಿ ಆಗಿದೆ. ಇನ್ವೆಸ್ಟ್‌ಮೆಂಟ್ ಮತ್ತು ಕ್ರೆಡಿಟ್ ಕಂಪನಿಯಾದ (ಎನ್‌ಬಿಎಫ್‌ಸಿ-ಐಸಿಸಿ) ಇದು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ನೋಂದಾಯಿತಗೊಂಡಿದೆ. ಮತ್ತು ಎಸ್‌ಎಂಎಫ್‌ಜಿಯ ಪೂರ್ಣ ಸ್ವಾಮ್ಯದ ಅಂಗಸಂಸ್ಥೆಯು 2007 ರಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಪ್ಯಾರಿಸ್​ನಲ್ಲಿ ಎಐ ಆ್ಯಕ್ಷನ್ ಸಮಿಟ್ 2025: ಭಾರತದಿಂದ ‘ಅಭಿವೃದ್ಧಿಗೆ ದತ್ತಾಂಶ’

ಎಸ್ಎಂಎಫ್‌ಜಿ ಗೃಹಶಕ್ತಿ ಎಂದೂ ಕರೆಯಲ್ಪಡುವ ಎಸ್ಎಂಎಫ್‌ಜಿ ಇಂಡಿಯಾ ಹೋಮ್ ಫೈನಾನ್ಸ್ ಕೊ. ಲಿ. (ಹಿಂದೆ ಫುಲ್ಲರ್ಟನ್ ಇಂಡಿಯಾ ಹೋಮ್ ಫೈನಾನ್ಸ್ ಕೊ. ಲಿ.) ಜೊತೆಗೆ, ಕಂಪನಿಯು 670+ ನಗರಗಳು ​​ಮತ್ತು 70,000+ ಹಳ್ಳಿಗಳಲ್ಲಿ 1000 ಶಾಖೆಗಳು ಮತ್ತು 25,000+ ಉದ್ಯೋಗಿಗಳ ಮೂಲಕ ಭಾರತದಾದ್ಯಂತ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ, ಇದು ಕಡಿಮೆ ಅರ್ಹತೆಯನ್ನು ಪಡೆದ ಮತ್ತು ಕಡಿಮೆ ಸೇವೆ ಸಲ್ಲಿಸಿದ ರಿಟೇಲರ್ ಮತ್ತು ಸಣ್ಣ ವ್ಯಾಪಾರ ಸಾಲಗಾರರಿಗೆ ಸಾಲ ನೀಡುತ್ತದೆ. ಈ ರೀತಿಯ ಮಾರ್ಗದ ಮೂಲಕ, ಇದು ಜನರನ್ನು ಔಪಚಾರಿಕ ಸಾಲಕ್ಕೆ ಪರಿಚಯಿಸಿದೆ. ಎಸ್ಎಂಎಫ್‌ಜಿ ಗೃಹಶಕ್ತಿಯೊಂದಿಗೆ ಎಸ್ಎಂಎಫ್‌ಜಿ ಇಂಡಿಯಾ ಕ್ರೆಡಿಟ್, ಎಸ್ಎಂಇ ಹಣಕಾಸು, ವಾಣಿಜ್ಯ ವಾಹನ ಮತ್ತು ದ್ವಿಚಕ್ರ ವಾಹನ ಸಾಲಗಳು, ಗೃಹ ಸಾಲಗಳು, ಗೃಹ ಸುಧಾರಣಾ ಸಾಲಗಳು, ಆಸ್ತಿ ಮತ್ತು ಷೇರುಗಳ ಮೇಲಿನ ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ಗ್ರಾಮೀಣ ಜೀವನೋಪಾಯ ಪ್ರಗತಿ ಸಾಲಗಳು ಸೇರಿದಂತೆ ಸಮಗ್ರ ಸಾಲ ಪರಿಹಾರಗಳನ್ನು ನೀಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಕುಮಾರಸ್ವಾಮಿ, ಬಿಜೆಪಿ ನಾಯಕರಿಂದ ಹೆಣಗಳ ಮೇಲೆ ರಾಜಕಾರಣ: ಶಿವಕುಮಾರ್
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಪೋಸ್ಟ್​ಮಾರ್ಟಂ ಬೇಡ, ದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಸತ್ಕಾರ ಸಮಾರಂಭವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸಿದ್ದು: ಶಿವಕುಮಾರ್
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
ಬೆಂಗಳೂರು ಕಾಲ್ತುಳಿತ: ಘೋರ ದುರಂತವನ್ನು ಕನ್ನಡಿಗರು ಯಾವತ್ತೂ ಮರೆಯಲಾರರು
ಬೆಂಗಳೂರು ಕಾಲ್ತುಳಿತ: ಘೋರ ದುರಂತವನ್ನು ಕನ್ನಡಿಗರು ಯಾವತ್ತೂ ಮರೆಯಲಾರರು
ನನಗೂ ಉಸಿರುಗಟ್ಟಿತ್ತ; ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
ನನಗೂ ಉಸಿರುಗಟ್ಟಿತ್ತ; ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ