Inspiring: ಪಕ್ಕದ ಮನೆಯ ಕಂಪ್ಯೂಟರ್ ನೋಡಿ ಆಸೆ ಪಟ್ಟವ, ಇವತ್ತು ಭಾರತದಲ್ಲಿ ಡಿಜಿಟಲ್ ಸರ್ವಿಸ್ ಕಿಂಗ್

Jeta Ram Choudhary entrepreneurship: ರಾಜಸ್ಥಾನ ಮೂಲದ ಜೀತಾ ರಾಮ್ ಚೌಧರಿ ಅವರ ಎಎಸ್​ಬಿ ಸಲ್ಯೂಷನ್ಸ್ ಎಂಬ ಡಿಜಿಟಲ್ ಸರ್ವಿಸ್ ಕಂಪನಿ 215 ಕೋಟಿ ರೂ ಮೌಲ್ಯದಾಗಿದೆ. ಕಂಡಕ್ಟರ್ ಮಗನಾದ ಜೀತಾ ರಾಮ್ ಹೆಚ್ಚು ಓದದೇ ಹೋದರೂ ಉದ್ಯಮಶೀಲತೆಯ ಗುಣ ಬಿಟ್ಟುಕೊಡಲಿಲ್ಲ. ಎಎಸ್​ಬಿ ಸಲ್ಯೂಷನ್ಸ್ ಇವತ್ತು 4,000 ಫ್ರಾಂಚೈಸಿಗಳನ್ನು ಹೊಂದಿದೆ. ಈ ಸಂಖ್ಯೆಯನ್ನು 20 ಲಕ್ಷಕ್ಕೆ ಏರಿಸುವುದು ಅವರ ಗುರಿ.

Inspiring: ಪಕ್ಕದ ಮನೆಯ ಕಂಪ್ಯೂಟರ್ ನೋಡಿ ಆಸೆ ಪಟ್ಟವ, ಇವತ್ತು ಭಾರತದಲ್ಲಿ ಡಿಜಿಟಲ್ ಸರ್ವಿಸ್ ಕಿಂಗ್
ಜೀತಾ ರಾಮ್ ಚೌಧರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 23, 2024 | 12:46 PM

ಮನಸ್ಸಿದ್ದರೆ ಮಾರ್ಗ ಎಂದು ಹಿರಿಯರು ಹೇಳುತ್ತಾರೆ. ಯಶಸ್ಸು ಗಳಿಸಲು ಓದಿರಲೇಬೇಕು, ಕುಟುಂಬದ ಬೆಂಬಲ ಚೆನ್ನಾಗಿರಬೇಕು ಇತ್ಯಾದಿ ಬೇಕುಗಳೇ ಬೇಕೆಂದಿಲ್ಲ. ಮನಸು ಸಂಕಲ್ಪ ತೊಟ್ಟರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ರಾಜಸ್ಥಾನದ ಜೀತಾ ರಾಮ್ ಚೌಧರಿ (Jeta Ram Choudhary) ಕಥೆ ಇದಕ್ಕೆ ಉತ್ತಮ ನಿದರ್ಶನ. ಬಸ್ ಕಂಡಕ್ಟರ್​ನ ಮಗನಾದ ಜೀತಾ ರಾಮ್ ಈಗ 215 ಕೋಟಿ ರೂ ಮೌಲ್ಯದ ಎಎಸ್​ಬಿ ಡಿಜಿಟಲ್ ಸಲ್ಯೂಶನ್ಸ್ (ASB digital solutions) ಕಂಪನಿಯ ಒಡೆಯರಾಗಿದ್ದಾರೆ. ಇವರ ಕಂಪನಿಯ 4,000 ಫ್ರಾಂಚೈಸಿಗಳು ದೇಶದ ವಿವಿಧೆಡೆ ಇವೆ. ಎಂಜಿನಿಯರಿಂಗ್ ಕೂಡ ಮಾಡದ ಈ ವ್ಯಕ್ತಿ ತನ್ನ ಕಂಪನಿಯ ಫ್ರಾಂಚೈಸಿ ಸಂಖ್ಯೆಯನ್ನು 20 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದಾರೆ.

ಓದಬೇಕೆಂದರೂ ಆಗಲಿಲ್ಲ…

ರಾಜಸ್ಥಾನದ ಬಾರ್ಮರ್ ನಗರದ ಜೀತಾ ರಾಮ್ ಚೌಧರಿ ಹೆಚ್ಚು ಓದಿದವರಲ್ಲ. ಅವರಲ್ಲಿ ಓದುವ ತುಡಿತ ಇದ್ದರೂ ಮನೆಯಲ್ಲಿ ಓದಿಸುವ ಶಕ್ತಿ ಇರಲಿಲ್ಲ. ಪಕ್ಕದ ಮನೆಯಲ್ಲಿ ಇದ್ದ ಕಂಪ್ಯೂಟರ್ ಅನ್ನು ಬಳಸಿ ಅದರ ಬಗ್ಗೆ ಒಲವು ಹೆಚ್ಚಾಗಿತ್ತು. ಬಹಳ ಚಿಕ್ಕ ವಯಸ್ಸಿನಲ್ಲೇ ತಮ್ಮ ಏರಿಯಾದಲ್ಲೇ ಇದ್ದ ಕಂಪ್ಯೂಟರ್ ಸೆಂಟರ್​ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಕಂಪ್ಯೂಟರ್ ಬಳಕೆ ಚೆನ್ನಾಗಿ ಸಿದ್ಧಿಸಿತು. ಟಿಕೆಟ್ ಬುಕಿಂಗ್ ಇತ್ಯಾದಿ ಸರ್ವಿಸ್​ಗಳನ್ನು ಬಹಳ ಸುಲಭವಾಗಿ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: ಟೆಂಟ್​ನಲ್ಲಿ ವಾಸಿಸುತ್ತಿದ್ದ ಕ್ರಿಕೆಟ್ ಸ್ಟಾರ್ ಯಶಸ್ವಿ ಜೈಸ್ವಾಲ್​ರಿಂದ ಐಷಾರಾಮಿ ಮನೆ ಖರೀದಿ; ಪ್ರತಿಷ್ಠಿತ ಏರಿಯಾದಲ್ಲಿದೆ ಈ ಅಪಾರ್ಟ್ಮೆಂಟ್

2018ರಲ್ಲಿ ಅವರು ಎಎಸ್​ಬಿ ಸಲ್ಯೂಶನ್ಸ್ ಎಂಬ ಕಂಪನಿ ಹುಟ್ಟುಹಾಕಿದರು. ಮನಿ ಟ್ರಾನ್ಸ್​ಫರ್, ಬಿಲ್ ಪಾವತಿ, ಆಧಾರ್ ಕೆವೈಸಿ, ಟಿಕೆಟ್ ಬುಕಿಂಗ್, ಇನ್ಷೂರೆನ್ಸ್ ಇತ್ಯಾದಿ ಡಿಜಿಟಲ್ ಸರ್ವಿಸ್​ಗಳನ್ನು ಇವರು ಒದಗಿಸುತ್ತಾರೆ. ಇದು ಬಹಳ ಜನಪ್ರಿಯವಾಯಿತು. ಒಬ್ಬರೇ ಸ್ಥಾಪಿಸಿದರೂ ನೆಟ್ವರ್ಕ್ ಬೆಳೆಯತೊಡಗಿತು. ರಾಜಸ್ಥಾನದ ಆಚೆಗೆ ಬೆಳೆಯಿತು. ಉತ್ತರಪ್ರದೇಶ, ಛತ್ತೀಸ್​ಗಡ ಮತ್ತು ಬಿಹಾರ ರಾಜ್ಯಗಳಲ್ಲಿ ಇವರ ಕಂಪನಿಯ 4,000 ಫ್ರಾಂಚೈಸಿಗಳಿವೆ.

ಪ್ರತೀ ಹಳ್ಳಿಯಲ್ಲೂ ಫ್ರಾಂಚೈಸಿಗೆ ಗುರಿ

ಜೀತಾ ರಾಮ್ ಚೌಧರಿ ಅವರು ಪ್ರತೀ ಹಳ್ಳಿಯಲ್ಲೂ ಡಿಜಿಟಲ್ ಸರ್ವಿಸ್ ಕೊಡುವ ಹೆಬ್ಬಯಕೆ ಹೊಂದಿದ್ದಾರೆ. ಅಲ್ಲೆಲ್ಲಾ ಡಿಜಿಟಲ್ ಸೆಂಟರ್​ಗಳನ್ನು ತೆರೆದು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಅವರ ಗುರಿ. ಈ ನಿಟ್ಟಿನಲ್ಲಿ ದೇಶಾದ್ಯಂತ ಬರೋಬ್ಬರಿ 20 ಲಕ್ಷ ಫ್ರಾಂಚೈಸಿಗಳನ್ನು ಹುಟ್ಟುಹಾಕುವ ಕನಸು ಕಾಣುತ್ತಿದ್ದಾರೆ. ಭಾರತದಲ್ಲಿ 6-7 ಲಕ್ಷ ಗ್ರಾಮಗಳಿವೆ. ಗ್ರಾಮದಲ್ಲಿ ಕನಿಷ್ಠ ಒಂದಾದರೂ ಡಿಜಿಟಲ್ ಸರ್ವಿಸ್ ಸೆಂಟರ್ ಇರಬೇಕೆಂದರೂ ಪಟ್ಟಣ, ನಗರ ಎಲ್ಲಾ ಸೇರಿ 20 ಲಕ್ಷ ಸೆಂಟರ್​ಗಳಾದರೂ ಬೇಕಾಗುತ್ತದೆ. ಅಂತೆಯೇ ಈ ಯುವಕನ ಕನಸಿದೆ. ಸರಿಯಾದ ಬೆಂಬಲ ಸಿಕ್ಕರೆ ಈ ಗುರಿ ಈಡೇರಿಕೆ ಅಸಾಧ್ಯವೇನಲ್ಲ.

ಇದನ್ನೂ ಓದಿ: ಕೆಲಸಗಾರರಿಗೆ ಮಾಲೀಕತ್ವ ಕೊಟ್ಟು ಮೃತರಾದ ಶ್ರೀಮಂತ; ಕಂಪನಿಯ ಎಲ್ಲಾ 700 ಉದ್ಯೋಗಿಗಳೂ ಈಗ ಮಾಲೀಕರು

ಈಗ ಹೋಬಳಿ ಮಟ್ಟಗಳಲ್ಲಿ, ಕೆಲ ಪ್ರಮುಖ ಹಳ್ಳಿಗಳಲ್ಲಿ ಡಿಜಿಟಲ್ ಸರ್ವಿಸ್ ಸೆಂಟರ್​ಗಳಿರುವುದನ್ನು ಕಾಣಬಹುದು. ಮುಂದಿನ ದಿನಗಳಲ್ಲಿ ಇಂಟರ್ನೆಟ್ ಬೆಳೆದಂತೆ ಮತ್ತು ಬೇಡಿಕೆ ಬೆಳೆದಂತೆ ಜೀತಾ ರಾಮ್ ಚೌಧರಿ ಅವರಂಥವರು ಇಂಥ ಡಿಜಿಟಲ್ ಸೇವೆಗಳನ್ನು ಆರಂಭಿಸುವುದು ಸಹಜ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್