AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tata steel: ಟಾಟಾ ಸ್ಟೀಲ್​ ನಾಲ್ಕನೇ ತ್ರೈಮಾಸಿಕದ ನಿವ್ವಳ ಲಾಭ 6,593.5 ಕೋಟಿ ರೂ.; 25 ರೂ. ಡಿವಿಡೆಂಡ್ ಘೋಷಣೆ

Tata Steel: ಟಾಟಾ ಸ್ಟೀಲ್ ಕಂಪೆನಿಯು 2020-21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದೆ. ಅಂತಿಮ ಲಾಭಾಂಶವಾಗಿ ಪ್ರತಿ ಷೇರಿಗೆ 25 ರೂಪಾಯಿ ಘೋಷಿಸಲಾಗಿದೆ.

Tata steel: ಟಾಟಾ ಸ್ಟೀಲ್​ ನಾಲ್ಕನೇ ತ್ರೈಮಾಸಿಕದ ನಿವ್ವಳ ಲಾಭ 6,593.5 ಕೋಟಿ ರೂ.; 25 ರೂ. ಡಿವಿಡೆಂಡ್ ಘೋಷಣೆ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: May 05, 2021 | 10:14 PM

Share

ಟಾಟಾ ಸ್ಟೀಲ್​ನಿಂದ ಮಾರ್ಚ್​ 31, 2021ರ ಕೊನೆಯ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಲಾಗಿದ್ದು, 6,593.5 ಕೋಟಿ ರೂಪಾಯಿ ನಿವ್ವಳ ಲಾಭ ವರದಿ ಮಾಡಲಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಕಂಪೆನಿಯು 436.8 ಕೋಟಿ ರೂಪಾಯಿ ನಿವ್ವಳ ನಷ್ಟ ದಾಖಲಿಸಿತ್ತು. ಕಂಪೆನಿ ಮಂಡಳಿಯಿಂದ ಹಣಕಾಸು ವರ್ಷ ಮಾರ್ಚ್ 2021ರ ಕೊನೆಗೆ ಅಂತಿಮ ಲಾಭಾಂಶ (ಡಿವಿಡೆಂಡ್) ಪ್ರತಿ ಷೇರಿಗೆ 25 ರೂಪಾಯಿ ಘೋಷಣೆ ಮಾಡಲಾಗಿದೆ. ಕಂಪೆನಿ ತಿಳಿಸಿರುವ ಪ್ರಕಾರ, ವರ್ಷದಿಂದ ವರ್ಷಕ್ಕೆ ಉಕ್ಕಿನ (ಸ್ಟೀಲ್) ಡೆಲಿವರಿ ಶೇ 16ರಷ್ಟು ಬೆಳವಣಿಗೆ ದಾಖಲಿಸಿ, 4.67 ಮಿಲಿಯನ್ ಟನ್​ಗಳನನ್ನು ತಲುಪಿದೆ. ಹಣಕಾಸು ವರ್ಷ 2021ರಲ್ಲಿ ಕೊರೊನಾ ಬಿಕ್ಕಟ್ಟಿನ ಹೊರತಾಗಿಯೂ ಸ್ಟೀಲ್ ಡೆಲಿವರಿ 17.31 ಟನ್​ಗೆ ಹೆಚ್ಚಳವಾಗಿದೆ.

ಟಾಟಾ ಸ್ಟೀಲ್ ತಿಳಿಸಿರುವ ಪ್ರಕಾರ ಈವರೆಗಿನ EBITDA ಗಳಿಕೆ ವಿಚಾರಲ್ಲಿ ಒಂದೇ ತ್ರೈಮಾಸಿಕದಲ್ಲಿ ಬಂದ ಅತಿ ದೊಡ್ಡ ಮೊತ್ತ ಇದಾಗಿದೆ. ಅಲ್ಲಿಗೆ ರೂ. 12,295 ಕೋಟಿ ಮುಟ್ಟಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 40ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ FY21 ನಾಲ್ಕನೇ ತ್ರೈಮಾಸಿಕಕ್ಕೆ 2.7x ಬೆಳವಣಿಗೆ ಸಾಧಿಸಿದೆ.

ಕಂಪೆನಿಯ ಮಾರ್ಚ್ ತ್ರೈಮಾಸಿಕದ ಕನ್ಸಾಲಿಡೇಟೆಡ್ ಒಟ್ಟಾರೆ ಆದಾಯವು ಕಾರ್ಯಾಚರಣೆಯಿಂದ 49,977 ಕೋಟಿ ರೂಪಾಯಿ ಬಂದಿದೆ. ವರ್ಷದ ಹಿಂದೆ 36,009 ಕೋಟಿ ರೂಪಾಯಿ ಬಂದಿತ್ತು. ಪ್ರಸಕ್ತ ತ್ರೈಮಾಸಿಕದಲ್ಲಿ ನಿವ್ವಳ ಮಾರಾಟವು ಶೇ 49ರಷ್ಟು ಹೆಚ್ಚಾಗಿ 21,202.6 ಕೋಟಿ ತಲುಪಿದೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಮತ್ತು ದರ ಏರಿಕೆಯಿಂದ ಈ ಬೆಳವಣಿಗೆ ಆಗಿದೆ.

ಇದನ್ನೂ ಓದಿ: Tata Group Founders Day: ಹೂಡಿಕೆದಾರರಿಗೆ ಅದ್ಭುತ ಲಾಭ ಮೊಗೆದುಕೊಟ್ಟ ಟಾಟಾ ಸಮೂಹ ಕಂಪೆನಿಗಳು

(Tata Steel company FY21 Q4 results announced with net profit of 6593.5 crore rupees. Dividend of Rs 25 per share declared)

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ