AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಟ್ರಸ್ಟ್ಸ್​ನ ಬಾಯ್ ಹಿರಾಬಾಯ್ ಟ್ರಸ್ಟ್​ನಿಂದ ಹೊರಬಿದ್ದ ವೇಣು ಶ್ರೀನಿವಾಸನ್

Venu Srinivasan exit from Tata Trust's Bai Hirabai Charitable trust: ದಿವಂಗತ ರತನ್ ಟಾಟಾ ಅವರಿಂದ ಟ್ರಸ್ಟೀ ಆಗಿ ನೇಮಕಾತಿ ಅಗಿದ್ದ ವೇಣು ಶ್ರೀನಿವಾಸನ್ ಅವರು ಹೊರಬಿದ್ದಿದ್ದಾರೆ. ಟಾಟಾ ಟ್ರಸ್ಟ್ಸ್ ಅಡಿಗೆ ಬರುವ ಬಾಯ್ ಹೀರಾಬಾಯ್ ಚಾರಿಟಬಲ್ ಟ್ರಸ್ಟ್​ನಲ್ಲಿ ಅವರು ಒಬ್ಬ ಟ್ರಸ್ಟೀ ಆಗಿದ್ದರು. ಈ ಟ್ರಸ್ಟ್ ನಿಬಂಧನೆಗಳ ಪ್ರಕಾರ ಪಾರ್ಸಿ ಸಮುದಾಯದವರು ಮಾತ್ರ ಟ್ರಸ್ಟೀ ಆಗಬಹುದು ಎಂದು ಮಾಜಿ ಟ್ರಸ್ಟೀ ಮೆಹ್ಲೀ ಮಿಸ್ತ್ರಿ ಆಕ್ಷೇಪ ಎತ್ತಿದ್ದಾರೆ.

ಟಾಟಾ ಟ್ರಸ್ಟ್ಸ್​ನ ಬಾಯ್ ಹಿರಾಬಾಯ್ ಟ್ರಸ್ಟ್​ನಿಂದ ಹೊರಬಿದ್ದ ವೇಣು ಶ್ರೀನಿವಾಸನ್
ಟಾಟಾImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 05, 2026 | 12:32 PM

Share

ನವದೆಹಲಿ, ಏಪ್ರಿಲ್ 5: ಟಾಟಾ ಟ್ರಸ್ಟ್ಸ್ ಅಡಿಗೆ ಬರುವ ಬಾಯ್ ಹೀರಾಬಾಯ್ ಚಾರಿಟಬಲ್ ಟ್ರಸ್ಟ್​ನಿಂದ ವೇಣು ಶ್ರೀನಿವಾಸನ್ (Venu Srinivasan) ಅವರು ಹೊರಬಿದ್ದಿದ್ದಾರೆ. ನಿಯಮಗಳ ಪ್ರಕಾರ ಟ್ರಸ್ಟೀ ಆಗಿ ಕೆಲಸ ಮಾಡಲು ಅರ್ಹತೆ ಹೊಂದಿಲ್ಲ ಎನ್ನುವ ತಕರಾರು ಬಂದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಮಾಜಿ ಟ್ರಸ್ಟೀ ಮೆಹ್ಲೀ ಮಿಸ್ತ್ರಿ ಅವರು ಟ್ರಸ್ಟೀಗಳ ಆಯ್ಕೆ ಅಕ್ರಮವಾಗಿ ಆಗಿದೆ ಎಂದು ಆಕ್ಷೇಪ ಸಲ್ಲಿಕೆ ಮಾಡಿದ್ದರು.

ಬಾಯ್ ಹೀರಾಬಾಯ್ ಚಾರಿಟಬಲ್ ಟ್ರಸ್ಟ್​ಗೆ (Bai Hirabai Charitable Trust) ವೇಣು ಶ್ರೀನಿವಾಸನ್ ಅವರನ್ನು ಟ್ರಸ್ಟೀ ಆಗಿ ಮಾಡಿದ್ದೇ ರತನ್ ಟಾಟಾ. ಆಗಲೇ ಈ ನೇಮಕಾತಿ ಬಗ್ಗೆ ತಕರಾರುಗಳು ಮತ್ತು ಚರ್ಚೆಗಳು ನಡೆದಿದ್ದವು. ಟ್ರಸ್ಟ್​ನಲ್ಲಿ ಅಕ್ರಮ ನಡೆದಿದ್ದು ಅದರ ತನಿಖೆ ನಡೆಸಿಸಬೇಕೆಂದು ಮೆಹ್ಲಿ ಮಿಸ್ತ್ರಿ ಅವರು ಮಹಾರಾಷ್ಟ್ರ ಚಾರಿಟಿ ಕಮಿಷನರ್ ಎದುರು ಅಫಿಡವಿಟ್ ಸಲ್ಲಿಸಿದ್ದಾರೆ. ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರ ನೇಮಕಾತಿಯನ್ನು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್​ನಿಂದ ಹೈಟೆಕ್ ಟೋಲ್​ಬೂತ್; ಯುಆನ್, ಕ್ರಿಪ್ಟೋದಲ್ಲಿ ಟೋಲ್ ಕಟ್ಟಿರಿ, ಸೀಕ್ರೆಟ್ ಕೋಡ್ ಪಡೆಯಿರಿ

ವೇಣು ಶ್ರೀನಿವಾಸನ್ ನೇಮಕಾತಿಯಲ್ಲಿ ಏನಿದೆ ಅಕ್ರಮ?

ಟಾಟಾ ಕುಟುಂಬದಲ್ಲಿ ಹಲವು ಟ್ರಸ್ಟ್​ಗಳು ಕಾರ್ಯನಿರ್ವಹಿಸುತ್ತಿವೆ. ಅವೆಲ್ಲವನ್ನು ಕೂಡ ಸರ್ ರತನ್ ಟಾಟಾ ಟ್ರಸ್ಟ್ ಅಡಿಗೆ ಸೇರಿಸಲಾಗಿದೆ. ಈ ಟ್ರಸ್ಟ್​ಗಳಲ್ಲಿ ಬಾಯ್ ಹೀರಾಬಾಯ್ ಜಮ್​ಶೆಟ್​ಜಿ ಟಾಟಾ ನವಸಾರಿ ಚಾರಿಟಬಲ್ ಇನ್ಸ್​ಟಿಟ್ಯೂಶನ್​ನ ಟ್ರಸ್ಟ್ ಡೀಡ್ ಆಗಿದ್ದು 1923ರಲ್ಲಿ. ಈ ಟ್ರಸ್ಟ್​ನ ನಿಬಂಧನೆಗಳ ಪ್ರಕಾರ ಪಾರ್ಸೀ ಸಮುದಾಯದವರೇ ಇದರ ಟ್ರಸ್ಟೀಗಳಾಗಬೇಕು ಎಂದಿದೆ.

ಪ್ರಸಕ್ತ ಟ್ರಸ್ಟೀಗಳಾಗಿರುವ ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರು ಪಾರ್ಸಿ ಸಮುದಾಯಕ್ಕೆ ಸೇರಿದವರಲ್ಲ. ಹಿಂದೆ ಟ್ರಸ್ಟೀ ಆಗಿದ್ದ ಆರ್ ಕೃಷ್ಣಕುಮಾರ್ ಅವರೂ ಪಾರ್ಸಿ ಸಮುದಾಯದವರಲ್ಲ. ಹೀಗಾಗಿ, ಈ ನೇಮಕಾತಿಗಳು ಮೂಲ ನಿಬಂಧನೆಗಳ ಉಲ್ಲಂಘನೆಯಾಗಿದೆ. ಈ ರೀತಿ ಅಕ್ರಮವಾಗಿ ಟ್ರಸ್ಟೀಗಳಾದವರು ತೆಗೆದುಕೊಳ್ಳುವ ನಿರ್ಧಾರಗಳು ಸಿಂಧುವೆನಿಸುವುದಿಲ್ಲ ಎಂದು ಮಿಸ್ತ್ರಿ ಅವರ ವಾದ.

ಇದನ್ನೂ ಓದಿ: ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಹೆಚ್ಚಿಸಲು ಸಿದ್ಧ: ರಷ್ಯಾ ಅಭಯ

ಮುಂಬೈ ಮತ್ತು ನವಸಾರಿಯಲ್ಲಿ ಪಾರ್ಸಿ ಸಮುದಾಯಕ್ಕೆಂದು ಅಗ್ನಿ ಮಂದಿರ, ಶಾಲೆ ಮತ್ತು ವಾಸ ಸೌಕರ್ಯಗಳು ಇತ್ಯಾದಿ ಆಸ್ತಿಗಳನ್ನು ಈ ಟ್ರಸ್ಟ್ ನಿರ್ವಹಿಸುತ್ತಿದೆ. ಶತಮಾನದ ಹಿಂದಿನ ಈ ಟ್ರಸ್ಟ್​ನಲ್ಲಿ ಆಡಳಿತ ದುರುಪಯೋಗ ತಡೆಯಬೇಕು ಎಂದು ಮಿಸ್ತ್ರಿ ಹೇಳುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?