Sign In

By signing in or creating an account, you agree with Associated Broadcasting Company's Terms & Conditions and Privacy Policy.

Unclaimed Money: ಹತ್ತು ವರ್ಷಕ್ಕೂ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ದರೆ ಅನ್​ಕ್ಲೇಮ್ಡ್ ಡೆಪಾಸಿಟ್ ಗುಂಪಿಗೆ ಸೇರುತ್ತಾ? ಈ ಹಣ ಹಿಂಪಡೆಯುವುದು ಹೇಗೆ?

Know How: ಪ್ರತಿಯೊಂದು ಬ್ಯಾಂಕ್ ಕೂಡ ತಮ್ಮಲ್ಲಿನ ಅನ್​ಕ್ಲೇಮ್ಡ್ ಅಕೌಂಟ್​​ಗಳ ಪಟ್ಟಿ ಪ್ರಕಟಿಸುತ್ತದೆ. ಯಾರು ಬೇಕಾದರೂ ಕೂಡ ಖಾತೆದಾರರ ಹೆಸರು, ಅಕೌಂಟ್ ನಂಬರ್ ಇತ್ಯಾದಿ ವಿವರ ಹುಡುಕಿ ತಿಳಿದುಕೊಳ್ಳಬಹುದು. ಬ್ಯಾಂಕ್​ನಲ್ಲಿ ನಿಮ್ಮ ಖಾತೆ ಅನ್​ಕ್ಲೈಮ್ಡ್ ಅಕೌಂಟ್ ಎಂದು ವರ್ಗೀಕರಣಗೊಂಡಿದ್ದರೆ ಬ್ಯಾಂಕ್ ಕಚೇರಿಗೆ ಹೋಗಿ ಸೂಕ್ತ ಫಾರ್ಮ್ ಪಡೆದು ಭರ್ತಿ ಮಾಡಬೇಕು. ಪ್ಯಾನ್, ಆಧಾರ್ ಇತ್ಯಾದಿ ಕೆವೈಸಿ ದಾಖಲೆ ಸಲ್ಲಿಸಬೇಕು.

Unclaimed Money: ಹತ್ತು ವರ್ಷಕ್ಕೂ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ದರೆ ಅನ್​ಕ್ಲೇಮ್ಡ್ ಡೆಪಾಸಿಟ್ ಗುಂಪಿಗೆ ಸೇರುತ್ತಾ? ಈ ಹಣ ಹಿಂಪಡೆಯುವುದು ಹೇಗೆ?
ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 15, 2023 | 7:09 PM

ಆರ್​ಬಿಐ ಕಾನೂನು ಪ್ರಕಾರ ಒಂದು ಬ್ಯಾಂಕ್ ಖಾತೆ 10 ವರ್ಷ ಕಾಲ ಯಾವ ವಿತ್​ಡ್ರಾಯಲ್ ಇಲ್ಲದೇ ನಿಷ್ಕ್ರಿಯವಾಗಿದ್ದರೆ (Inoperative account) ಅಂಥವನ್ನು ಅನ್​ಕ್ಲೇಮ್ಡ್ ಡೆಪಾಸಿಟ್ ಎಂದು ವರ್ಗೀಕರಿಸಲಾಗುತ್ತದೆ. ಇದು ಉಳಿತಾಯ ಖಾತೆ ಆಗಿರಬಹುದು, ಚಾಲ್ತಿ ಖಾತೆ ಆಗಿರಬಹುದು, ನಿಶ್ಚಿತ ಠೇವಣಿ ಆಗಿರಬಹುದು, ರೆಕರಿಂಗ್ ಡೆಪಾಸಿಟ್ ಆಗಿರಬಹುದು, ಯಾವುದೇ ಖಾತೆ ಸತತ 10 ವರ್ಷ ಕಾಲ ನಿಷ್ಕ್ರಿಯವಾಗಿದ್ದರೆ ಅದು ಅನ್​ಕ್ಲೇಮ್ಡ್ ಹಣವೆನಿಸಿ, ಡೆಪಾಸಿಟರ್ ಎಜುಕೇಶ್ ಅಂಡ್ ಅವೇರ್ನೆಸ್ ಫಂಡ್ (DEAF- Depositor education and awareness fund) ಅಥವಾ ಕಾರ್ಪಸ್ ಫಂಡ್​ಗೆ ವರ್ಗಾವಣೆ ಆಗುತ್ತದೆ.

ಆರ್​ಬಿಐ ಇತ್ತೀಚೆಗೆ ಬಹಿರಂಗಪಡಿಸಿದ ಮಾಹಿತಿ ಪ್ರಕಾರ 2022-23ರ ಕೊನೆಯಲ್ಲಿ ಡಿಇಎಎಫ್​ನಲ್ಲಿ ಇರುವ ಅನ್​ಕ್ಲೇಮ್ಡ್ ಡೆಪಾಸಿಟ್ ಮೊತ್ತ 62,225 ಕೋಟಿ ರೂ. ಇದರಲ್ಲಿರುವ ಹಣ ಸುರಕ್ಷಿತವಾಗಿರುತ್ತದಾದರೂ ಅದನ್ನು ಆಯಾ ಖಾತೆದಾರ ಅಥವಾ ವಾರಸುದಾರರಿಗೆ ತಲುಪಿಸುವ ಜವಾಬ್ದಾರಿ ಆರ್​ಬಿಐ ಮೇಲಿದೆ. ಈ ಹಣಕ್ಕೆ ನಿಗದಿತ ಬಡ್ಡಿ ಸಿಗುತ್ತಾ ಹೋಗುತ್ತದೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 20.58 ಬಿಲಿಯನ್ ಡಾಲರ್; ರಫ್ತು ಮತ್ತು ಆಮದು ಅಂತರದಲ್ಲಿ ಗಣನೀಯ ಇಳಿಕೆ

ಪ್ರತಿಯೊಂದು ಬ್ಯಾಂಕ್ ಕೂಡ ತಮ್ಮಲ್ಲಿನ ಅನ್​ಕ್ಲೇಮ್ಡ್ ಅಕೌಂಟ್​​ಗಳ ಪಟ್ಟಿ ಪ್ರಕಟಿಸುತ್ತದೆ. ಯಾರು ಬೇಕಾದರೂ ಕೂಡ ಖಾತೆದಾರರ ಹೆಸರು, ಅಕೌಂಟ್ ನಂಬರ್ ಇತ್ಯಾದಿ ವಿವರ ಹುಡುಕಿ ತಿಳಿದುಕೊಳ್ಳಬಹುದು.

ಅನ್​ಕ್ಲೈಮ್ಡ್ ಬ್ಯಾಂಕ್ ಡೆಪಾಸಿಟ್ ಅನ್ನು ಹಿಂಪಡೆಯುವುದು ಹೇಗೆ?

ಬ್ಯಾಂಕ್​ನಲ್ಲಿ ನಿಮ್ಮ ಖಾತೆ ಅನ್​ಕ್ಲೈಮ್ಡ್ ಅಕೌಂಟ್ ಎಂದು ವರ್ಗೀಕರಣಗೊಂಡಿದ್ದರೆ ಬ್ಯಾಂಕ್ ಕಚೇರಿಗೆ ಹೋಗಿ ಸೂಕ್ತ ಫಾರ್ಮ್ ಪಡೆದು ಭರ್ತಿ ಮಾಡಬೇಕು. ಪ್ಯಾನ್, ಆಧಾರ್ ಇತ್ಯಾದಿ ಕೆವೈಸಿ ದಾಖಲೆ ಸಲ್ಲಿಸಬೇಕು.

ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?

ಖಾತೆದಾರ ಮೃತಪಟ್ಟಿದ್ದರೆ ಅವರ ವಾರಸುದಾರರು ಅಥವಾ ನಾಮಿನಿಗಳಾದವರು ಹಣ ಕ್ಲೈಮ್ ಮಾಡಬಹುದು. ಅದಕ್ಕೆ ಖಾತೆದಾರರ ಡೆತ್ ಸರ್ಟಿಫಿಕೇಟ್ ಕೊಡಬೇಕಾಗುತ್ತದೆ. ಅಗತ್ಯಬಿದ್ದಲ್ಲಿ ವಾರಸುದಾರ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಒಬ್ಬರಿಗಿಂತ ಹೆಚ್ಚು ವಾರಸುದಾರರಿದ್ದರೆ ಎಲ್ಲರಿಂದಲೂ ಇಂಡೆಮ್ನಿಟಿ ಬಾಂಡ್ ಅನ್ನು ಬ್ಯಾಂಕ್ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್