AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Crime: ಮೊಬೈಲ್​ ಚಾರ್ಜ್​ಗೆ ಹಾಕುವ ವಿಚಾರದಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Crime News: ಮೊಬೈಲ್ ಚಾರ್ಜಿಂಗ್​ಗೆ ಹಾಕುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಅನಿಲ್ ಮೊದಲು ಆಕಾಶ್​ಗೆ ಹೊಡೆದು ಗಾಯಗೊಳಿಸಿದ್ದ. ಸಿಟ್ಟಿಗೆದ್ದ ಆಕಾಶ್​ ದೊಣ್ಣೆಯಿಂದ ಅನಿಲ್​ಗೆ ತಲೆಗೆ ಹೊಡೆದಿದ್ದ.

Bengaluru Crime: ಮೊಬೈಲ್​ ಚಾರ್ಜ್​ಗೆ ಹಾಕುವ ವಿಚಾರದಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 03, 2021 | 5:34 PM

Share

ಬೆಂಗಳೂರು: ಮೊಬೈಲ್​ ಚಾರ್ಜ್​ಗೆ ಹಾಕುವ ವಿಚಾರದಲ್ಲಿ ಶುರುವಾದ ಜಗಳ, ಕೊಲೆಯ ಮೂಲಕ ಅಂತ್ಯವಾದ ಘಟನೆ ಬೆಂಗಳೂರಿನ ರಾಜಾಜಿನಗರದ ಕಟ್ಟಡವೊಂದರಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಧ್ಯಪ್ರದೇಶ ಮೂಲದ ಅನಿಲ್ ಖುಷ್ವಾ ಎಂಬವರು ಹತ್ಯೆಯಾದವರಾಗಿದ್ದಾರೆ. ಅನಿಲ್ ಖುಷ್ವಾ ಕೊಂದ ಆರೋಪಿ ಆಕಾಶ್​ ಖುಷ್ವಾ ಬಂಧನವಾಗಿದೆ.

ಅನಿಲ್, ಆಕಾಶ್​ ಖುಷ್ವಾ ಒಂದೇ ಕಟ್ಟಡದಲ್ಲಿ ವಾಸವಿದ್ದರು. ಜುಲೈ 28ರಂದು ಮದ್ಯ ಸೇವಿಸಿ ಬಂದಿದ್ದ ಕಾರ್ಮಿಕರು, ಕೆಲಸ ಮಾಡ್ತಿದ್ದ ಕಟ್ಟಡದಲ್ಲೇ ಉಳಿದುಕೊಂಡಿದ್ದರು. ಅವರ ನಡುವೆ ಮೊಬೈಲ್ ಚಾರ್ಜಿಂಗ್​ಗೆ ಹಾಕುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಅನಿಲ್ ಮೊದಲು ಆಕಾಶ್​ಗೆ ಹೊಡೆದು ಗಾಯಗೊಳಿಸಿದ್ದ. ಸಿಟ್ಟಿಗೆದ್ದ ಆಕಾಶ್​ ದೊಣ್ಣೆಯಿಂದ ಅನಿಲ್​ಗೆ ತಲೆಗೆ ಹೊಡೆದಿದ್ದ.

ಬಳಿಕ, ಪ್ರಜ್ಞೆತಪ್ಪಿಬಿದ್ದ ಅನಿಲ್ ಖುಷ್ವಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಕಾರ್ಮಿಕ ಅನಿಲ್ ಖುಷ್ವಾ ಮೃತಪಟ್ಟಿದ್ದಾರೆ. ರಾಜಾಜಿನಗರ ಠಾಣೆ ಪೊಲೀಸರಿಂದ ಆಕಾಶ್ ಖುಷ್ವಾ ಬಂಧನವಾಗಿದೆ.

ಇದನ್ನೂ ಓದಿ: ಪ್ರೀತಿ ಮಾಡುವಂತೆ ಬಾಲಕಿ ಹಿಂದೆ ಬಿದ್ದಿದ್ದ; ಮನೆಗೆ ಹೋಗುತ್ತಿದ್ದಾಗ ಹಿಂಬಾಲಿಸಿ ಕೊಚ್ಚಿ ಕೊಲೆ ಮಾಡಿದ

ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ; ಪ್ರಕರಣದಲ್ಲಿ ನಾವು ಭಾಗಿಯಾದ್ದರೆ ನಮ್ಮ ಕುಟುಂಬವೇ ನಾಶವಾಗಲಿ ಎಂದು ಬರೆದುಕೊಂಡ ಹನುಮೇಶ್ ನಾಯಕ್‌ ಕುಟುಂಬ

(Bengaluru Crime Murder Case clash between two for Charging mobile phone)

Published On - 5:10 pm, Tue, 3 August 21

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್