AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಯುವತಿ ಕೊಲೆ: ಸ್ನೇಹಿತೆಯನ್ನ ಕಾಪಾಡಿ ಜೀವ ಕಳೆದುಕೊಂಡ ಕೃತಿ ಕುಮಾರಿ

ಕೋರಮಂಗಲದ ವಿಆರ್ ಲೇಔಟ್​​​ನ ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದ ಆರೋಪಿ ಅಭಿಷೇಕ್​​ನ ವಿಕೃತಿಗಳು ಬಯಲಾಗಿವೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು ಯುವತಿ ಕೊಲೆ: ಸ್ನೇಹಿತೆಯನ್ನ ಕಾಪಾಡಿ ಜೀವ ಕಳೆದುಕೊಂಡ ಕೃತಿ ಕುಮಾರಿ
ಕೊಲೆಯಾದ ಕೃತಿ ಕುಮಾರಿ
Jagadisha B
| Edited By: |

Updated on:Jul 26, 2024 | 3:06 PM

Share

ಬೆಂಗಳೂರು, ಜುಲೈ 26: ಕೋರಮಂಗಲದ (Kormangala) ವಿಆರ್ ಲೇಔಟ್​​​ನ ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದ ಆರೋಪಿ ಅಭಿಷೇಕ್​​ನ ವಿಕೃತಿಗಳು ಬಯಲಾಗಿವೆ. ಹಾಗೆ ಆರೋಪಿ ಅಭಿಷೇಕ್​ ಕೊಲೆ ಮಾಡಲು ಕಾರಣವೇನು ಎಂಬುವುದು ಪೊಲೀಸರ (Police) ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆ ಮಾಡಿದ ಆರೋಪಿ ಅಭಿಷೇಕ್​ ಭೋಪಾಲ್ ಮೂಲದವ.

ಅಭಿಷೇಕ್ ಹಾಗೂ ಕೊಲೆಯಾದ ಕೃತಿ ಕುಮಾರಿ‌ಯ ಸ್ನೇಹಿತೆ ಪರಸ್ಪರ ಪ್ರೀತಿಸುತ್ತಿದ್ದರು. ಕೃತಿ ಕುಮಾರಿ ಹಾಗೂ ಅಭಿಷೇಕ್ ಪ್ರಿಯತಮೆ ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೃತಿ ಕುಮಾರಿ ಹಾಗೂ ಅಭಿಷೇಕ್ ಪ್ರಿಯತಮೆ ಜೊತೆಗೆ ಒಂದೇ ಪಿಜಿಯಲ್ಲಿ ವಾಸವಾಗಿದ್ದರು. ಈ ಪಿಜಿಗೆ ಅಭಿಷೇಕ್ ಆಗಾಗ ಬಂದು ಹೋಗುತ್ತಿದ್ದನು.

ಪ್ರೇಮದಲ್ಲಿ ಬಿರುಕು

ಅಭಿಷೇಕ್ ಭೋಪಾಲ್​ನಲ್ಲಿ ಯಾವುದೇ ಕೆಲಸ ಕೆಲಸ ಮಾಡುತ್ತಿರಲಿಲ್ಲ. ಆಗಾಗ ಭೋಪಾಲ್​ನಿಂದ ಬೆಂಗಳೂರಿಗೆ ಬಂದು ಪ್ರೇಯಸಿ ಜೊತೆ ಸುತ್ತಾಡಿಕೊಂಡು ಹೋಗುತ್ತಿದ್ದನು. ಕೆಲಸಕ್ಕೆ ಸೇರು ಅಂತ ಅಭಿಷೇಕ್​ಗೆ ಪ್ರೇಯಸಿ ಹೇಳುತ್ತಿದ್ದಳು. ಬಲವಂತಕ್ಕೆ ಕೆಲಸಕ್ಕೆ ಸೇರಿದ್ದಾಗಿ ಅಭಿಷೇಕ್​​ ಪ್ರೇಯಸಿಗೆ ಹೇಳಿದ್ದನಂತೆ. ಆದರೆ ಇದು ಸಹ ಸುಳ್ಳು ಎಂದು ಅಭಿಷೇಕ್​ನ ಪ್ರೇಯಸಿಗೆ ಗೊತ್ತಾಗಿತ್ತು. ಹೀಗಾಗಿ ಅಭಿಷೇಕ್​ನನ್ನು ಅವಾಯ್ಡ್ ಮಾಡಲು ಆರಂಭಿಸಿದ್ದಳು. ಇದರಿಂದ ಕೋಪಗೊಂಡ ಅಭಿಷೇಕ್​ ಆಗಾಗ ಬಂದು ಪಿಜಿ ಬಳಿ ಗಲಾಟೆ ಮಾಡುತ್ತಿದ್ದನು.

ಇದನ್ನೂ ಓದಿ: ಪ್ರಿಯಕರನನ್ನು ತುಂಡು ತುಂಡಾಗಿ ಕೊಯ್ದು ಗೆಳತಿಯ ಮನೆಯಲ್ಲಿ ಹೂತಿಟ್ಟ ಯುವತಿ

ಸ್ನೇಹಿತೆಯನ್ನ ಕಾಪಾಡಿ ಜೀವ ಕಳೆದುಕೊಂಡ ಯುವತಿ

ಕೊಲೆ ಮಾಡುವುದಕ್ಕಿಂತ ಮೂರು ದಿನದ ಮುಂಚೆ ಬೆಂಗಳೂರಿನಲ್ಲಿ ಅಭಿಷೇಕ್​ ಬಾಡಿಗೆ ಮನೆ ಮಾಡಿದ್ದನು. ಈ ಬಾಡಿಗೆ ಮನೆಯಲ್ಲಿ ಪ್ರೇಯಸಿಯನ್ನು ಇರಿಸಿದ್ದನು. ಆದರೆ ಇದು ಆಕೆಗೆ ಇಷ್ಟವಿರಲಿಲ್ಲ. ಆದರೆ ಈ ಮನೆಯಲ್ಲಿ ಇರಲು ಆಗದೆ ಅಭಿಷೇಕ್​ ಪ್ರಯೇಸಿಗೆ ಇರಲು ಆಗದೆ ಒದ್ದಾಡಿದ್ದಳು. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುವೆ ಗೆಳತಿ ಕೃತಿ ಕುಮಾರಿಗೆ ಅಭಿಷೇಕ್​ ಪ್ರೇಯಸಿಗೆ ಹೇಳಿದ್ದಾಳೆ.

ಬಳಿಕ ಕೃತಿ ಕುಮಾರಿ ತನ್ನ ಸ್ನೇಹಿತರೊಂದಿಗೆ ತೆರಳಿ ಗೆಳತಿಯನ್ನು ತನ್ನ ಪಿಜಿಗೆ ಕರೆತಂದಿದ್ದಳು. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೋಪಗೊಂಡ ಅಭಿಷೇಕ್​, ಮಂಗಳವಾರ ರಾತ್ರಿ‌ 11.30ರ ಸುಮಾರಿಗೆ ಪಿಜಿಗೆ ಹೋಗಿದ್ದಾನೆ. ಒಳ ಹೋಗಿ ಕೃತಿ ಕುಮಾರಿ ಇದ್ದ ಕೋಣೆ ಬಾಗಿಲು ತಟ್ಟಿದ್ದಾನೆ. ಕೃತಿ ಕುಮಾರಿ ಬಾಗಿಲು ತೆಗೆಯುತ್ತಿದ್ದಂತೆ, ಚಾಕು ಇರಿದು ಕೊಲೆ ಮಾಡಿದ್ದಾನೆ.

ಸದ್ಯ ಆರೋಪಿ ಅಭಿಷೇಕ್ ಹೊರ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಾಗಿ ಕೋರಮಂಗಲ ಪೊಲೀಸರು ಬಲೆ ಬೀಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:52 am, Fri, 26 July 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್