28 ವರ್ಷದ ಯುವತಿಗೆ ಹರಿತಾದ ಆಯುಧದಿಂದ ಇರಿದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Viral Video: ಪ್ರಕರಣ ಶಹಬಾದ್ ಡೈರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ನೋಡಿ ನರೇಶ್​ ಅಲಿಯಾಸ್​ ರಾಜು ಎಂಬಾತನನ್ನು ಗುರುತಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

28 ವರ್ಷದ ಯುವತಿಗೆ ಹರಿತಾದ ಆಯುಧದಿಂದ ಇರಿದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
28 ವರ್ಷದ ಯುವತಿಗೆ ಹರಿತಾದ ಆಯುಧದಿಂದ ಇರಿದ ಭಯಾನಕ ದೃಶ್ಯ

ದೆಹಲಿ: 28 ವರ್ಷದ ಯುವತಿಗೆ ಚಾಕುವಿನಿಂದ ಹಲವು ಬಾರಿ ಇರಿದ ಘಟನೆ ನಡೆದಿದೆ. ರೋಹಿಣಿ ಪ್ರದೇಶದ ಯುವತಿಯ ನಿವಾಸದ ಬಳಿ ಘಟನೆ ನಡೆದಿದೆ. ಕಳೆದ ಗುರವಾರ ರಾತ್ರಿ ಸರಿಸುಮಾರು 8:30ರ ಸಮಯದಲ್ಲಿ ಭಯಾನಕ ದೃಶ್ಯ ಸ್ಥಳದ ಪಕ್ಕದಲ್ಲೇ ಇರಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಯುವತಿಯನ್ನು ಇದೀಗ ಸಫ್ದರ್ಜಗ್​ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ನೆರೆಹೊರೆಯವರು ಈ ರೀತಿ ಮಾಡಿದ್ದಾರೆ. ಏಕೆಂದರೆ ಈ ಹಿಂದೆ ನೆರೆ ಹೊರೆಯವರ ಮೇಲೆ ಆಕೆ ದೂರು ದಾಖಲಿಸಿದ್ದಳು ಎಂದು ಯುವತಿಯ ಮನೆಯವರು ಆರೋಪಿಸಿದ್ದಾರೆ.

ಪ್ರಕರಣ ಶಹಬಾದ್ ಡೈರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ನೋಡಿ ನರೇಶ್​ ಅಲಿಯಾಸ್​ ರಾಜು ಎಂಬಾತನನ್ನು ಗುರುತಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅದಾಗ್ಯೂ ದಾಳಿಯ ಹಿಂದಿನ ಉದ್ದೇಶ ಇನ್ನೂ ದೃಢಪಟ್ಟಿಲ್ಲ. ಕುಟುಂಬದವರ ಆರೋಪದ ಮೇರೆಗೂ ಪರಿಶೀಲನೆ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯದ ಮೂಲಕ ಕಂಡು ಬಂದಂತೆ ದಾಳಿಕೋರನು ಮಹಿಳೆಯನ್ನು ಎರಡು ಕಾರುಗಳ ಮಧ್ಯಕ್ಕೆ ನೂಕಿ ಹರಿತಾದ ಆಯುಧದಿಂದ ಇರಿದಿರುವ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ: 

‘ದಿಯಾ’ ಹೀರೋ ದೀಕ್ಷಿತ್​ ಶೆಟ್ಟಿಯ ಕ್ರೈಂ ಸ್ಟೋರಿ; ಒಂದು ಕೊಲೆಯ ಸುತ್ತ ಎಷ್ಟಿದೆ ರಹಸ್ಯ?

ಮಂಡ್ಯ: ಜಮೀನು ವಿವಾದ; ಚಾಕು ಇರಿದು ತಮ್ಮನಿಂದಲೇ ಅಣ್ಣನ ಕೊಲೆ