ಗಂಡ ಜೈಲಿನಲ್ಲಿ, ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು
ಅನೇಕಲ್: ಪೊಲೀಸರ ಸಹಾಯದಿಂದ ಮಹಿಳೆಗೆ ಹೆರಿಗೆಯಾಗಿರುವ ಘಟನೆ ಆನೇಕಲ್ ಬಳಿ ನಡೆದಿದೆ. ಒಡಿಶಾ ಮೂಲದ ಗರ್ಭಿಣಿ ಮಹಿಳೆ ಭವಾನಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಪೊಲೀಸರು ಆಕೆಗೆ ಸಹಾಯ ಮಾಡಿದ್ದಾರೆ. ಭವಾನಿ ಮತ್ತು ಆಕೆಯ ಪತಿ ಪವಿತ್ರ ದುರ್ಗಾ ಎರಡು ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ನಂತರ ಕೊಲೆ ಕೇಸ್ಯೊಂದರಲ್ಲಿ ಪತಿ ಜೈಲು ಸೇರಿದ್ದಾನೆ. ಭವಾನಿಗೆ ಇದೇ ತಿಂಗಳ 13ನೇ ತಾರೀಖು ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಆಕೆ ತನ್ನ ಗಂಡನಿದ್ದ ಪರಪ್ಪನ ಅಗ್ರಹಾರ ಠಾಣೆಗೆ ಹೋಗಿದ್ದಾಳೆ. […]
ಅನೇಕಲ್: ಪೊಲೀಸರ ಸಹಾಯದಿಂದ ಮಹಿಳೆಗೆ ಹೆರಿಗೆಯಾಗಿರುವ ಘಟನೆ ಆನೇಕಲ್ ಬಳಿ ನಡೆದಿದೆ. ಒಡಿಶಾ ಮೂಲದ ಗರ್ಭಿಣಿ ಮಹಿಳೆ ಭವಾನಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಪೊಲೀಸರು ಆಕೆಗೆ ಸಹಾಯ ಮಾಡಿದ್ದಾರೆ.
ಭವಾನಿ ಮತ್ತು ಆಕೆಯ ಪತಿ ಪವಿತ್ರ ದುರ್ಗಾ ಎರಡು ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ನಂತರ ಕೊಲೆ ಕೇಸ್ಯೊಂದರಲ್ಲಿ ಪತಿ ಜೈಲು ಸೇರಿದ್ದಾನೆ. ಭವಾನಿಗೆ ಇದೇ ತಿಂಗಳ 13ನೇ ತಾರೀಖು ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಆಕೆ ತನ್ನ ಗಂಡನಿದ್ದ ಪರಪ್ಪನ ಅಗ್ರಹಾರ ಠಾಣೆಗೆ ಹೋಗಿದ್ದಾಳೆ. ನನ್ನ ಗಂಡನನ್ನು ನೀವೆ ಜೈಲಿಗೆ ಕಳುಹಿಸಿದ್ದು, ಈಗ ನೀವೆ ನನ್ನನ್ನು ಆಸ್ಪತ್ರೆಗೆ ಸೇರಿಸಿ ಎಂದು ಬೇಡಿಕೊಂಡಿದ್ದಾಳೆ.
ಹೀಗಾಗಿ ಪರಪ್ಪನ ಅಗ್ರಹಾರ ಇನ್ಸ್ಪೆಕ್ಟರ್ ನಂದೀಶ್ ಮಾರ್ಗದರ್ಶನದಲ್ಲಿ ಮಹಿಳಾ ಪೇದೆಯನ್ನು ಗರ್ಭಿಣಿಯೊಂದಿಗೆ ಕಳುಹಿಸಿ ನಿಮಾನ್ಸ್ ಆಸ್ಪತ್ರೆಯ ಬಳಿ ಇರುವ ಮಹಿಳಾ ಸ್ವೀಕಾರ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ನಂತರ ಕೋವಿಡ್ 19 ಇರೋದ್ರಿಂದ ಟ್ರೀಟ್ಮೆಂಟ್ ಕೊಡಲು ಆಗಲ್ಲ ಎಂದು ಸ್ವೀಕಾರ ಕೇಂದ್ರದವರು ಹೇಳಿದ್ರು. ನಂತರ ಸಿಂಗಸಂದ್ರ ಬಳಿಯ ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿಯನ್ನು ರವಾನೆ ಮಾಡಲಾಯಿತು. ನಿನ್ನೆ ಹೊಟ್ಟೆ ನೋವು ಜಾಸ್ತಿಯಾಗಿದೆ. ಇಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ ನಾರ್ಮಲ್ ಡೆಲವರಿ ಮೂಲಕ ಗಂಡು ಮಗು ಜನಿಸಿದೆ.
ಸದ್ಯ ಮಹಿಳೆಯ ಖರ್ಚು ವೆಚ್ಚವನ್ನು ಪೊಲೀಸರೆ ನೋಡಿಕೊಳ್ಳುತಿದ್ದು, ಮಹಿಳೆ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಮಗು ಮತ್ತು ಮಹಿಳೆಗೆ ಬೇಕಾದ ಅಗತ್ಯ ವಸ್ತುಗಳು ಮತ್ತು ರೇಷನ್, ಇರಲು ಪಿ.ಜಿ ಎಲ್ಲದರ ವ್ಯವಸ್ಥೆ ಪೊಲೀಸರೇ ನೋಡಿಕೊಳ್ಳುತ್ತಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರ ಈ ಕಾರ್ಯಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
Published On - 2:27 pm, Thu, 16 April 20