ಲಾಕ್ಡೌನ್ ಮಧ್ಯೆಯೂ ಬೆಳಗಾವಿಯಲ್ಲಿ 50 ಲಕ್ಷ ಮೌಲ್ಯದ ಅಕ್ರಮ ಮದ್ಯ ಜಪ್ತಿ!
ಬೆಳಗಾವಿ: ಲಾಕ್ಡೌನ್ ಮಧ್ಯೆಯೂ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 50 ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಗೋವಾ, ಮಹಾರಾಷ್ಟ್ರ ರಾಜ್ಯದ ಮದ್ಯ, ಬಿಯರ್ ಹಾಗೂ ಕಳ್ಳಬಟ್ಟಿ ಸರಾಯಿ ವಶಕ್ಕೆ ಪಡೆದಿದ್ದಾರೆ. ಮಾರ್ಚ್ 24 ರಿಂದ ಮೇ 16ರವರೆಗೂ ಅಬಕಾರಿ ಉಪ ಆಯುಕ್ತ ಬಸವರಾಜ ಮಾರ್ಗದರ್ಶನದಲ್ಲಿ 530 ಕಡೆ ಕಾರ್ಯಾಚರಣೆ ನಡೆಸಿ ಒಟ್ಟು 34 ಜನ ಆರೋಪಿಗಳ ಬಂಧಿಸಿದ್ದಾರೆ. ಒಟ್ಟು 63 ಪ್ರಕರಣಗಳನ್ನು ದಾಖಲಿಸಿ ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ 50 […]
ಬೆಳಗಾವಿ: ಲಾಕ್ಡೌನ್ ಮಧ್ಯೆಯೂ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 50 ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಗೋವಾ, ಮಹಾರಾಷ್ಟ್ರ ರಾಜ್ಯದ ಮದ್ಯ, ಬಿಯರ್ ಹಾಗೂ ಕಳ್ಳಬಟ್ಟಿ ಸರಾಯಿ ವಶಕ್ಕೆ ಪಡೆದಿದ್ದಾರೆ.
ಮಾರ್ಚ್ 24 ರಿಂದ ಮೇ 16ರವರೆಗೂ ಅಬಕಾರಿ ಉಪ ಆಯುಕ್ತ ಬಸವರಾಜ ಮಾರ್ಗದರ್ಶನದಲ್ಲಿ 530 ಕಡೆ ಕಾರ್ಯಾಚರಣೆ ನಡೆಸಿ ಒಟ್ಟು 34 ಜನ ಆರೋಪಿಗಳ ಬಂಧಿಸಿದ್ದಾರೆ. ಒಟ್ಟು 63 ಪ್ರಕರಣಗಳನ್ನು ದಾಖಲಿಸಿ ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ 50 ವಾಹನಗಳನ್ನು ಜಪ್ತಿ ಮಾಡಿದ್ದಾರೆ.