AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಯುಸಿ ಪಾಸಾದವರೆಲ್ಲರೂ ಸಿಇಟಿ ಬರೆಯಬಹುದು, ಅಕ್ಟೋಬರ್ ಮೊದಲ ವಾರದಲ್ಲಿ ಪದವಿ ತರಗತಿಗೆ ದಾಖಲಾತಿ: ಡಿಸಿಎಂ ಅಶ್ವತ್ಥ್ ನಾರಾಯಣ

ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟ ಹೆಚ್ಚಿಸುವ ಬಗ್ಗೆಯೂ ವಿಸಿಗಳಿಗೆ ಸೂಚಿಸಿದ್ದೇನೆ. ಬಿಎಸ್ಸಿ ಕೋರ್ಸ್‌ಗೆ ಈ ಬಾರಿ ಸಿಇಟಿ ಅಂಕ ಪರಿಗಣಿಸುವುದಿಲ್ಲ. ಯಾವ ಯುನಿವರ್ಸಿಟಿ ಗಳಲ್ಲಿ ಪದವಿ ಕೋರ್ಸ್ ಗಳಿಗೆ ಪರೀಕ್ಷೆ ನಡೆದಿಲ್ಲ ಅವುಗಳ ಮಾಹಿತಿ ಪಡೆದುಕೊಂಡಿದ್ದೇವೆ: ಡಾ.ಅಶ್ವತ್ಥ್ ನಾರಾಯಣ

ಪಿಯುಸಿ ಪಾಸಾದವರೆಲ್ಲರೂ ಸಿಇಟಿ ಬರೆಯಬಹುದು, ಅಕ್ಟೋಬರ್ ಮೊದಲ ವಾರದಲ್ಲಿ ಪದವಿ ತರಗತಿಗೆ ದಾಖಲಾತಿ: ಡಿಸಿಎಂ ಅಶ್ವತ್ಥ್ ನಾರಾಯಣ
ಡಿಸಿಎಂ ಅಶ್ವತ್ಥನಾರಾಯಣ
TV9 Web
| Updated By: guruganesh bhat|

Updated on:Jun 15, 2021 | 5:25 PM

Share

ಬೆಂಗಳೂರು: ಈವರ್ಷ ಪಿಯುಸಿ ಪಾಸಾದವರೆಲ್ಲರೂ ಸಿಇಟಿ ಬರೆಯಬಹುದು ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ​ ತಿಳಿಸಿದರು. ಅಕ್ಟೋಬರ್‌ನಿಂದ ಪದವಿ ತರಗತಿಗಳ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಎಲ್ಲ ವಿವಿಗಳ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆದಿದೆ. ಪದವಿ ಹಂತದ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ಧತೆ ನಡೆಸಬೇಕು. ಮೊದಲ ವರ್ಷದ ಪದವಿಗೆ ಅಕ್ಟೋಬರ್‌ ಮೊದಲ ವಾರದಿಂದಲೇ ದಾಖಲಾತಿ ಆರಂಭಕ್ಕೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಸೂಚನೆ ನೀಡಿದರು.

ಬಿಎಸ್ಸಿ ಕೋರ್ಸ್‌ಗೆ ಈ ಬಾರಿ ಸಿಇಟಿ ಅಂಕ ಪರಿಗಣಿಸುವುದಿಲ್ಲ. ಯಾವ ಯುನಿವರ್ಸಿಟಿ ಗಳಲ್ಲಿ ಪದವಿ ಕೋರ್ಸ್ ಗಳಿಗೆ ಪರೀಕ್ಷೆ ನಡೆದಿಲ್ಲವೋ ಅವುಗಳ ಮಾಹಿತಿ ಪಡೆದುಕೊಂಡಿದ್ದೇವೆ. ರೆಗ್ಯುಲರ್ ಸೆಮಿಸ್ಟರ್ ಕೂಡ ರೆಗ್ಯುಲರ್ ಟೈಂ ಟೇಬಲ್ ಪ್ರಕಾರವೇ ನಡೆಸಬೇಕಾ ಎಂಬ ಬಗ್ಗೆ ಕೂಡ ಚರ್ಚೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಕೊವಿಡ್​ ಕಾರಣಕ್ಕೆ ಈ ವರ್ಷ ಪಿಯುಸಿಯ ಎಲ್ಲ ವಿದ್ಯಾರ್ಥಿಗಳೂ ತೇರ್ಗಡೆ ಹೊಂದಿದ್ದಾರೆ. ಹೀಗಾಗಿ ವಿವಿಧ ಕೋರ್ಸ್​​ಗಳಿಗೆ ಬಹಳ ಬೇಡಿಕೆ ಬರುತ್ತಿದೆ. ವಿಶ್ವವಿದ್ಯಾಲಯಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು4 ವರ್ಷದ ಪದವಿ ತರಗತಿ ಆರಂಭ ಮಾಡುವ ಮೂಲಕ ಪದವಿ ವ್ಯಾಸಂಗದ ಅಭಿಲಾಶೆಯುಳ್ಳವರನ್ನು ಸೇರಿಸಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚಿಸಿದರು.

ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳು ಪೈಪೋಟಿ ನಡೆಸಬೇಕಾದರೆ ಕಲಿಕೆ ಮತ್ತು ಬೋಧನೆಯಲ್ಲಿ ಗುಣಮಟ್ಟ ಇರಬೇಕು ಎಂಬ ಬಗ್ಗೆ ವಿಸ್ತೃತವಾಗಿ ಕುಲಪತಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ವಿದ್ಯಾಭ್ಯಾಸ ನಡೆಸುವ ನಿಟ್ಟಿನಲ್ಲಿ ಎಲ್ಲರಿಗೂ ಟ್ಯಾಬ್‌ ನೀಡಲಾಗುತ್ತಿದೆ ಸ್ಮಾರ್ಟ್‌ ಕ್ಲಾಸ್‌ಗಳು ಶುರುವಾಗುತ್ತಿವೆ. ಈಗಾಗಲೇ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಏಕೀಕೃತ ವಿವಿಕಾಲೇಜು ನಿರ್ವಹಣಾ ವ್ಯವಸ್ಥೆ ಅನುಸಂಧಾನಗೊಳಿಸಲಾಗುವುದು. ಪ್ರತ್ಯೇಕ ಡಿಜಿಟಲ್‌ ಪೋರ್ಟಲ್‌ ಸಿದ್ಧವಾಗುತ್ತಿದ್ದು, ಅದನ್ನು ಇಗವರ್ನೆನ್ಸ್‌ ಇಲಾಖೆ ಅಭಿವೃದ್ಧಿಪಡಿಸುತ್ತಿದೆ. ಜೂನ್‌ 25ರಿಂದ ಪ್ರಾಯೋಗಿಕವಾಗಿ ಇದನ್ನು ಬಳಸಲು ಸರಕಾರದಿಂದ ಅನುಮತಿ ದೊರೆತಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಇನ್ನು ಮುಂದೆ ಇಆಫೀಸ್‌ ಮೂಲಕವೇ ನಡೆಯುತ್ತವೆ. ಯಾವುದೇ ಕಾಗದ ಪತ್ರಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಸೂಚಿಸಿದರು.

ರಾಜೀವ ಗಾಂಧೀ ಹಂಗಾಮಿ ಉಪ ಕುಲಪತಿ ನೇಮಕ ವಿಚಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದು ರಾಜ್ಯಪಾಲರಿಂದ ಆದ ನೇಮಕವಾಗಿದ್ದು, ಕಾನೂನು ಚೌಕಟ್ಟು ಬಿಟ್ಟು ಯಾರೂ ಏನೂ ಮಾಡುವುದಕ್ಕೆ ಆಗೋದಿಲ್ಲ. ಇದಕ್ಕೂ ನನಗೂ ಯಾವುದೇ ಸಂಬಂಧವೇ ಇಲ್ಲ. ಎಲ್ಲವೂ ಕೂಡ ಪಾರದರ್ಶಕವಾಗಿ ನಡೆಯುತ್ತದೆ. ರಾಜೀವ ಗಾಂಧಿ ಯುನಿವರ್ಸಿಟಿಯಲ್ಲೂ ಯಾವುದೂ ವೈಯಕ್ತಿಕ ವಿಚಾರಗಳು ಬರುವುದಿಲ್ಲ. ಕಾನೂನು ಪ್ರಕಾರವೇ ಎಲ್ಲ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: KCET Exam 2021: ಇಂದಿನಿಂದ ಸಿಇಟಿ​ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭ; ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ? ಇಲ್ಲಿದೆ ಮಾಹಿತಿ

CET-KSET Free Coaching: ವಿದ್ಯಾರ್ಥಿಗಳೇ ಗಮನಿಸಿ: ಸಿಇಟಿ, ಕೆಸಿಇಟಿ ಪರೀಕ್ಷೆಗಳಿಗೆ ಉಚಿತ ತರಬೇತಿ; ಎಲ್ಲಿ ಎಂಬ ವಿವರ ಇಲ್ಲಿದೆ

(DCM Ashwath Narayan says degree course admission will begin in the first week of October and all puc students can write CET Exams)

Published On - 5:21 pm, Tue, 15 June 21

ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ
ಮಧ್ಯಾಹ್ನ ರಾಹುಲ್ ಗಾಂಧಿಯನ್ನು ಭೇಟಿಯಾಗಲಿರುವ ಸಿಎಂ, ಡಿಸಿಎಂ
ಮಧ್ಯಾಹ್ನ ರಾಹುಲ್ ಗಾಂಧಿಯನ್ನು ಭೇಟಿಯಾಗಲಿರುವ ಸಿಎಂ, ಡಿಸಿಎಂ
ಮನೆ ಎದುರು ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಮನೆ ಎದುರು ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
ಐದು ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ
ಐದು ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ
ಶಿರಸಿ: ಐತಿಹಾಸಿಕ ಬಂಗಾರೇಶ್ವರ ದೇವಾಲಯ ಸಂಪೂರ್ಣ ಜಲಾವೃತ
ಶಿರಸಿ: ಐತಿಹಾಸಿಕ ಬಂಗಾರೇಶ್ವರ ದೇವಾಲಯ ಸಂಪೂರ್ಣ ಜಲಾವೃತ
ಪೂರ್ಣಾವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ: ಯತೀಂದ್ರ
ಪೂರ್ಣಾವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ: ಯತೀಂದ್ರ