AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೌಶಲ ಕಲಿಕೆ, ಎನ್ಇಪಿ ಆಶಯಗಳ ಅನುಷ್ಠಾನಕ್ಕಾಗಿ ಇನ್​ಫೊಸಿಸ್ ಜೊತೆ ಶೀಘ್ರ 3 ಒಡಂಬಡಿಕೆ: ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ

ಎನ್ಇಪಿ ಆಶಯಗಳನ್ನು ಅನುಷ್ಠಾನಗೊಳಿಸುವುದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಐಟಿ ದಿಗ್ಗಜ ಇನ್ಫೊಸಿಸ್ ಕಂಪನಿ ಸದ್ಯದಲ್ಲೇ 3 ಮಹತ್ವದ ಒಡಂಬಡಿಕೆಗಳಿಗೆ ಸಹಿ ಹಾಕಲಿವೆ

ಕೌಶಲ ಕಲಿಕೆ, ಎನ್ಇಪಿ ಆಶಯಗಳ ಅನುಷ್ಠಾನಕ್ಕಾಗಿ ಇನ್​ಫೊಸಿಸ್ ಜೊತೆ ಶೀಘ್ರ 3 ಒಡಂಬಡಿಕೆ: ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ
ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 28, 2021 | 9:47 PM

Share

ಬೆಂಗಳೂರು: ವಿದ್ಯಾರ್ಥಿಗಳ ಕೌಶಲ ಕಲಿಕೆಗೆ ಒತ್ತು ನೀಡುವುದು ಸೇರಿದಂತೆ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ-2020) ಆಶಯಗಳನ್ನು ಅನುಷ್ಠಾನಗೊಳಿಸುವುದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಐಟಿ ದಿಗ್ಗಜ ಇನ್ಫೊಸಿಸ್ ಕಂಪನಿ ಸದ್ಯದಲ್ಲೇ 3 ಮಹತ್ವದ ಒಡಂಬಡಿಕೆಗಳಿಗೆ ಸಹಿ ಹಾಕಲಿವೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಕಾಸಸೌಧದಲ್ಲಿ‌ ನಡೆದ ಇನ್​ಫೊಸಿಸ್ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕಾಲೇಜು‌ ವಿದ್ಯಾರ್ಥಿಗಳಿಗೆ ಕೌಶಲ‌ ಕಲಿಸುವ ಮೂರು ಸಾವಿರಕ್ಕೂ ಹೆಚ್ಚು ಕೋರ್ಸ್​ಗಳಿರುವ ‘ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್’ ಬಳಕೆ, ಕಾಲೇಜು ಉಪನ್ಯಾಸಕರಿಗೆ‌ ಡಿಜಿಟಲ್ ತರಬೇತಿ, ಉದ್ಯೋಗ ಸಂಬಂಧಿ ಮಾರ್ಗದರ್ಶನಕ್ಕಾಗಿ ‘ಕ್ಯಾಂಪಸ್ ಕನೆಕ್ಟ್’ ಹಾಗೂ ಉನ್ನತ ಶಿಕ್ಷಣ ಕಾಲೇಜುಗಳಿಗೆ ಇನ್ಫೊಸಿಸ್ ವತಿಯಿಂದ 15,000 ಕಂಪ್ಯೂಟರ್​ಗಳ ಕೊಡುಗೆಗಳು ಒಡಂಬಡಿಕೆಯ ಭಾಗವಾಗಿರುತ್ತದೆ ಎಂದು ಸಚಿವರು ವಿವರಿಸಿದರು.

‘ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್’ ಎಂಬುದು ಸಮಗ್ರ ಡಿಜಿಟಲ್ ಸಾಕ್ಷರತಾ ವೇದಿಕೆಯಾಗಿದ್ದು ಪರಿಣಾಮಕಾರಿ ಡಿಜಿಟಲ್ ಕಲಿಕೆ, ತಾಂತ್ರಿಕತೆ ಆಧರಿತ ಜೀವನ ಕೌಶಲ ಕೋರ್ಸ್​​ಗಳು, ಗೇಮಿಫಿಕೇಷನ್, ಪ್ರತ್ಯಕ್ಷ ತರಗತಿ, ಉದ್ಯಮ ಪ್ರಮಾಣಪತ್ರೀಕರಣ (ಇಂಡಸ್ಟ್ರಿ ಸರ್ಟಿಫಿಕೇಷನ್), ಮೇಕರ್ಸ್ ಲ್ಯಾಬ್, ವೃತ್ತಿ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಸ್ಮಾರ್ಟ್ ಕ್ಲಾಸ್​ರೂಮ್​ಗಳಿಗೆ ಗೆಸ್ಚರ್ ಕಂಪ್ಯೂಟಿಂಗ್, ಬಯೊಮೆಟ್ರಿಕ್ಸ್ ತಂತ್ರಜ್ಞಾನ ಅಳವಡಿಕೆ, ತರಬೇತಿಗಾಗಿ ವರ್ಚುವಲ್ ರಿಯಾಲಿಟಿ, ಆಗ್ಯುಮೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಬಳಕೆ, ಕಲಿಕಾ ದತ್ತಾಂಶದ ಮೂಲಕ ಸಾಧನೆಯ ಫಲಿತಾಂಶದ ಸಂಯೋಜನೆ, ಆರೋಗ್ಯಕರ ಸ್ಪರ್ಧಾ ಮನೋಭಾವ ಮೂಡಿಸಲು ಗೇಮಿಫಿಕೇಷನ್ ಮತ್ತು ಡಿಸೈನ್ ತತ್ವಗಳ ಬಳಕೆ, ಪಠ್ಯಸಾಮಗ್ರಿ ರೂಪಿಸಲು ಆಟೊಮೇಷನ್ ಹಾಗೂ ರೊಬೋಟಿಕ್ ಉಪಕರಣಗಳ ಬಳಕೆ ಒಡಂಬಡಿಕೆಯ ಅಂಶಗಳ ಭಾಗವಾಗಿರುತ್ತವೆ ಎಂದರು.

ಈ ಒಡಂಬಡಿಕೆಗಳ ಭಾಗವಾಗಿ ಸಂಸ್ಥೆಗಳ ನಡುವೆ ಉತ್ಕೃಷ್ಟ ಕ್ರಮಗಳ ವಿನಿಮಯಕ್ಕಾಗಿ ‘ಎನ್ಇಪಿ ಕಮ್ಯುನಿಟಿ’ಯನ್ನು ಸ್ಥಾಪಿಸಲಾಗುತ್ತದೆ. ಈ ಮೂಲಕ ಎನ್​ಇಪಿ ರೂಪುರೇಷೆಗಳನ್ನು ಅನುಷ್ಠಾನಗೊಳಿಸಲು ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಪ್ರತಿಭಾವಂತರನ್ನು ಉತ್ತೇಜಿಸುವುದಕ್ಕಾಗಿ ಕೆಡಿಇಎಂ (ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್) ಹಾಗೂ ಇನ್​ಫೊಸಿಸ್ ನಡುವೆ ಸಹಭಾಗಿತ್ವ ಏರ್ಪಡಲಿದೆ ಎಂದು ಸಚಿವರು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ, ಇನ್​ಫೊಸಿಸ್ ಕಂಪನಿಯ ಹಿರಿಯ ಉಪಾಧ್ಯಕ್ಷರಾದ ತಿರುಮಲ ಆರೋಹಿ, ಗುರುರಾಜ್ ದೇಶಪಾಂಡೆ, ಉಪಾಧ್ಯಕ್ಷ ಸತೀಶ್ ನಂಜಪ್ಪ, ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಸಂತೋಷ್ ಅನಂತಪುರ, ಇನ್​ಫೊಸಿಸ್ ತರಬೇತಿ ಪ್ರಾಚಾರ್ಯರಾದ ಎನ್​.ಜಿ.ಕಿರಣ್, ಸೀನಿಯರ್ ಲೀಡ್ ಪ್ರಿನ್ಸಿಪಲ್ ವಿಕ್ಟರ್ ಸುನರಾಜ್ ಇದ್ದರು.

(Karnataka Govt to Sign MOU with Infosys for implementation of NEP)

ಇದನ್ನೂ ಓದಿ: NEP: ಬೆಂಗಳೂರು ನಗರ ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ; ಎನ್​ಇಪಿ ವಿರೋಧಿಸಿ ಸಿದ್ದರಾಮಯ್ಯ ಪತ್ರ

ಇದನ್ನೂ ಓದಿ: ಪ್ರಸಕ್ತ ಸಾಲಿನಿಂದ ಐಟಿಐಗೆ 6 ಹೊಸ ಕೋರ್ಸ್ ಸೇರ್ಪಡೆ: ಅಶ್ವತ್ಥ್ ನಾರಾಯಣ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ

Published On - 9:44 pm, Tue, 28 September 21

ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ