Bilgi Election Result: ಬೀಳಗಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಮುರಗೇಶ ನಿರಾಣಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು
Bilgi Assembly Election Result 2023 Live Counting Updates: ಬೀಳಗಿ ಕ್ಷೇತ್ರದ ಹಾಲಿ ಶಾಸಕ, ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಅವರಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಎದುರಾಗಿದ್ದರೆ, ಈ ಕ್ಷೇತ್ರವನ್ನು ತನ್ನ ವಶಪಡಿಸಿಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಸಾಂಪ್ರದಾಯಕ ಎದುರಾಳಿಗಳ ನಡುವೆಯೇ ಈ ಬಾರಿಯೂ ನಿರ್ಣಾಯಕ ಸ್ಪರ್ಧೆ ಇದೆ.

Bilgi Assembly Election Result 2023: ಬಾಗಲಕೋಟೆ ಜಿಲ್ಲೆಯ ತಾಲೂಕು ಕೇಂದ್ರ ಬೀಳಗಿ. ಹಿಂದೆ ಜಮಖಂಡಿ ತಾಲೂಕಿಗೆ ಬೀಳಗಿ ಸೇರಿತ್ತು. 1959ರಲ್ಲಿ ಬೀಳಗಿ ತಾಲೂಕು ರಚನೆಗೊಂಡಿತು. ಘಟಪ್ರಭಾ ಮತ್ತು ಕೃಷ್ಣಾ ನದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹರಿಯುತ್ತವೆ. ಬೀಳಗಿ ತಾಲೂಕಿನ ಬಹಳಷ್ಟು ಜನರು ವ್ಯವಸಾಯವನ್ನು ಅವಲಂಬಿಸಿದ್ದಾರೆ. ಕಬ್ಬು ಬೆಳೆಗಾರರೇ ಹೆಚ್ಚು.ಇದಕ್ಕೆ ಪೂರಕ ಎಂಬಂತೆ ಹಲವಾರು ಸಕ್ಕರೆ ಕಾರ್ಖಾನೆಗಳು ಕ್ಷೇತ್ರದಲ್ಲಿವೆ. ಬಾಗಲಕೋಟೆ ಜಿಲ್ಲೆಯ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ಹುರಿಯಾಳು ಜೆ ಟಿ ಪಾಟೀಲ ಅವರು ಈ ಕ್ಷೇತ್ರದಿಂದ ಐದು ಬಾರಿ ಸ್ಪರ್ಧಿಸಿ, ಮೂರು ಬಾರಿ ಗೆಲುವು ಕಂಡಿದ್ದಾರೆ. 1994ರಲ್ಲಿಯೇ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಜೆ ಟಿ ಪಾಟೀಲ ಆ ಬಳಿಕ ಮತ್ತೆ ಎರಡು ಬಾರಿ ಶಾಸಕರಾಗಿದ್ದರು.
ಸ್ವಾತಂತ್ರ್ಯಾನಂತರ 1957ರಿಂದ 2018ರವರೆಗೆ ನಡೆದ ವಿಧಾನಸಭೆಯ 14 ಚುನಾವಣೆಗಳಲ್ಲಿ ಕಾಂಗ್ರೆಸ್ ಒಂಬತ್ತು ಬಾರಿ, ಬಿಜೆಪಿ ಮೂರು ಬಾರಿ, ಜನತಾ ಪಾರ್ಟಿ ಮತ್ತು ಜನತಾ ದಳ ತಲಾ ಒಂದು ಬಾರಿ ಕ್ಷೇತ್ರದಲ್ಲಿ ಗೆದ್ದಿವೆ. ಇತೀಚಿನ ವರ್ಷಗಳಲ್ಲಿ ಬೀಳಗಿ ಕ್ಷೇತ್ರದಲ್ಲಿ ಬಿಜೆಪಿಯ ಮುರುಗೇಶ ನಿರಾಣಿ ಮತ್ತು ಕಾಂಗ್ರೆಸ್ಸಿನ ಜೆ ಟಿ ಪಾಟೀಲ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ಲಿಂಗಾಯತ ಪಂಚಮಸಾಲಿ ಸಮಾಜದ ಮುರುಗೇಶ ನಿರಾಣಿ 2004, 2008, 2018ರಲ್ಲಿ ಗೆಲುವು ಕಂಡಿದ್ದಾರೆ. ಎರಡು ಬಾರಿ ಬೃಹತ್ ಕೈಗಾರಿಕೆ ಖಾತೆ ನಿರ್ವಹಿಸಿದ್ದಾರೆ. ಎದುರಾಳಿ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಜೆ ಟಿ ಪಾಟೀಲ್ 1994, 1999 ಹಾಗೂ 2013ರಲ್ಲಿ ಜಯಗಳಿಸಿದ್ದರು. ಈ ಬಾರಿಯೂ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಬೀಳಗಿ ಕ್ಷೇತ್ರದ ಹಾಲಿ ಶಾಸಕ, ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಅವರಿಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಎದುರಾಗಿದ್ದರೆ, ಈ ಕ್ಷೇತ್ರವನ್ನು ತನ್ನ ವಶಪಡಿಸಿಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಸಾಂಪ್ರದಾಯಕ ಎದುರಾಳಿಗಳ ನಡುವೆಯೇ ಈ ಬಾರಿಯೂ ನಿರ್ಣಾಯಕ ಸ್ಪರ್ಧೆ ಇರಲಿದೆ. ಮುರುಗೇಶ್ ನಿರಾಣಿ ಮತ್ತೊಂದು ಬಾರಿ ಗೆಲುವು ಬಯಸಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ ಜೆ ಟಿ ಪಾಟೀಲ, ಎಸ್ ಆರ್ ಪಾಟೀಲ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಜೆ ಟಿ ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನು ಜೆಡಿಎಸ್ ಪಕ್ಷದಿಂದ ರುಕ್ಮುದ್ದೀನ್ ಸೌದಗಲ್ ಕಣದಲ್ಲಿದ್ದಾರೆ.