Kudligi Election Results: ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್ನ ಶ್ರೀನಿವಾಸ್ ಕೈ ಹಿಡಿದ ಮತದಾರ
Kudligi Assembly Election Results 2023 Live Counting Updates: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಡಾ.ಶ್ರೀನಿವಾಸ ಎನ್.ಟಿ (ಕಾಂಗ್ರೆಸ್), ಬಿಜೆಪಿಯಿಂದ ಲೋಕೇಶ ವಿ ನಾಯಕ, ಎಎಪಿಯಿಂದ ಶ್ರೀನಿವಾಸ ಎನ್ ಮತ್ತು ಕೋಡಿಹಳ್ಳಿ ಭೀಮಪ್ಪ ಜೆಡಿಎಸ್ ನಿಂದ ಸ್ಪರ್ಧಿಸುತ್ತಿದ್ದಾರೆ.

Kudligi Assembly Election Results 2023: ಪಕ್ಷೇತರ ಹಾಗೂ ಪಕ್ಷಾಂತರಿಗಳಿಗೂ ಮಣೆ ಹಾಕಿದ ಕ್ಷೇತ್ರ ಕೂಡ್ಲಿಗಿ (Kudligi Constituency)ಯಲ್ಲಿ ಕಾಂಗ್ರೆಸ್ ಪಕ್ಷದ ಶ್ರೀನಿವಾಸ್ ಎನ್.ಟಿ ಗೆಲುವು ಸಾಧಿಸಿದ್ದಾರೆ.. ಇದು 2008ರ ನಂತರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಯಿತು. ಶ್ರೀರಾಮುಲು ಆಪ್ತ ಬಿ.ನಾಗೇಂದ್ರ 2008ರಲ್ಲಿ ಬಿಜೆಪಿಯಿಂದ ಸ್ಫರ್ಧಿಸಿದ್ದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ವೆಂಕಟೇಶ್ ಅವರನ್ನು ಸೋಲಿಸಿ ಶಾಸಕರಾಗಿದ್ದರು. ಬಿಜೆಪಿ ತೊರೆದ ಬಿ.ನಾಗೇಂದ್ರ 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದಾದ ನಂತರ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಬಂಧನಕ್ಕೊಳಗಾದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸೇರ್ಪಡೆಯಾಗಿದ್ದ ಎನ್ ವೈ ಗೋಪಾಲಕೃಷ್ಣ, ಬಿಜೆಪಿಯಿಂದ ಟಿಕೆಟ್ ಪಡೆದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸುವ ಮೂಲಕ ಶಾಸಕರಾದರು. ಎನ್.ವೈ. ಗೋಪಾಲಕೃಷ್ಣ ಅವರು ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಡಾ.ಶ್ರೀನಿವಾಸ ಎನ್.ಟಿ (ಕಾಂಗ್ರೆಸ್), ಬಿಜೆಪಿಯಿಂದ ಲೋಕೇಶ ವಿ ನಾಯಕ, ಎಎಪಿಯಿಂದ ಶ್ರೀನಿವಾಸ ಎನ್ ಮತ್ತು ಕೋಡಿಹಳ್ಳಿ ಭೀಮಪ್ಪ ಜೆಡಿಎಸ್ ನಿಂದ ಸ್ಪರ್ಧಿಸುತ್ತಿದ್ದಾರೆ.
Published On - 2:18 am, Sat, 13 May 23



