AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra: ಮಹಾರಾಷ್ಟ್ರದಲ್ಲಿ ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಮುನ್ನಡೆ

ಬಿಜೆಪಿ ನಾಯಕಿ ಪಂಕಜಾ ಮುಂಡೆ ಮತ್ತು ಅವರ ಎನ್‌ಸಿಪಿ (ಎಸ್‌ಪಿ) ಪ್ರತಿಸ್ಪರ್ಧಿ ಬಜರಂಗ್ ಸೋನಾವಾನೆ ನಡುವೆ ಬೀಡ್‌ನಲ್ಲಿ ಜಿದ್ದಾಜಿದ್ದಿಯ ಪೈಪೋಟಿ ನಡೆಯುತ್ತಿದೆ. ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ ಮತ್ತು ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕಲ್ಯಾಣ್ ಕಾಳೆ ಅವರ ನಡುವೆಯೂ ಜಲ್ನಾದಲ್ಲಿ ಇದೇ ರೀತಿ ನೇರ ಹಣಾಹಣಿ ನಡೆದಿದೆ.

Maharashtra: ಮಹಾರಾಷ್ಟ್ರದಲ್ಲಿ ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಮುನ್ನಡೆ
ನಿತಿನ್ ಗಡ್ಕರಿ- ಪಿಯೂಷ್ ಗೋಯಲ್
ರಶ್ಮಿ ಕಲ್ಲಕಟ್ಟ
|

Updated on:Jun 04, 2024 | 3:19 PM

Share

ಮುಂಬೈ ಜೂನ್ 04: ಲೋಕಸಭೆ ಚುನಾವಣೆಯ (Lok sabha Elections) ಮತ ಎಣಿಕೆಯ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಮತ್ತು ಪಿಯೂಷ್ ಗೋಯಲ್ (Piyush Goyal) ಮಹಾರಾಷ್ಟ್ರದ ತಮ್ಮ ಕ್ಷೇತ್ರಗಳಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ 2,56,448 ಮತಗಳನ್ನು ಗಳಿಸಿದ್ದು, ಮುಂಬೈ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 1,26,802 ಮುನ್ನಡೆ ಸಾಧಿಸಿದ್ದಾರೆ. ನಾಗ್ಪುರ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕಾಂಗ್ರೆಸ್‌ನ ವಿಕಾಸ್ ಠಾಕ್ರೆ ವಿರುದ್ಧ 46,434 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕೇಂದ್ರ ಎಂಎಸ್‌ಎಂಇ ಸಚಿವ ನಾರಾಯಣ ರಾಣೆ ಅವರು ಇಲ್ಲಿಯವರೆಗೆ 2,16,045 ಮತಗಳನ್ನು ಪಡೆದಿರುವ ರತ್ನಗಿರಿ-ಸಿಂಧುದುರ್ಗದಲ್ಲಿ 23,933 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯ ಸಚಿವ ಸುಧೀರ್ ಮುಂಗಂತಿವಾರ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ಗಿಂತ 79,947 ಮತಗಳಿಂದ ಹಿಂದುಳಿದಿದ್ದಾರೆ.  ಕೊಲ್ಹಾಪುರದಲ್ಲಿ ರಾಜವಂಶಸ್ಥ ಶಾಹು ಛತ್ರಪತಿ 58,753 ಮತಗಳಿಂದ ಮುನ್ನಡೆಯಲ್ಲಿದ್ದರೆ, ಸತಾರಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನೇರ ವಂಶಸ್ಥರಾದ ಬಿಜೆಪಿಯ ಉದಯನರಾಜೇ ಭೋಸಲೆ ಹಿಂದುಳಿದಿದ್ದಾರೆ.

ಬಿಜೆಪಿ ನಾಯಕಿ ಪಂಕಜಾ ಮುಂಡೆ ಮತ್ತು ಅವರ ಎನ್‌ಸಿಪಿ (ಎಸ್‌ಪಿ) ಪ್ರತಿಸ್ಪರ್ಧಿ ಬಜರಂಗ್ ಸೋನಾವಾನೆ ನಡುವೆ ಬೀಡ್‌ನಲ್ಲಿ ಜಿದ್ದಾಜಿದ್ದಿಯ ಪೈಪೋಟಿ ನಡೆಯುತ್ತಿದೆ. ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ ಮತ್ತು ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕಲ್ಯಾಣ್ ಕಾಳೆ ಅವರ ನಡುವೆಯೂ ಜಲ್ನಾದಲ್ಲಿ ಇದೇ ರೀತಿ ನೇರ ಹಣಾಹಣಿ ನಡೆದಿದೆ.

ಬಾರಾಮತಿಯಲ್ಲಿ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು 1,08,902 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಸುನೇತ್ರಾ ಪವಾರ್‌ಗಿಂತ 16,078 ಮತಗಳ ಮುನ್ನಡೆ ಸಾಧಿಸಿದ್ದಾರೆ. ವಕೀಲ, ರಾಜಕಾರಣಿ ಉಜ್ವಲ್ ನಿಕಮ್ ಅವರು ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಲ್ಲಿ ಇದುವರೆಗೆ 2,55,940 ಮತಗಳನ್ನು ಪಡೆಯುವ ಮೂಲಕ 51,161 ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ.

ಭಿವಂಡಿ ಲೋಕಸಭಾ ಕ್ಷೇತ್ರದಲ್ಲಿ ಎನ್‌ಸಿಪಿ(ಎಸ್‌ಪಿ)ಯ ಸಮೀಪದ ಪ್ರತಿಸ್ಪರ್ಧಿ ವಿರುದ್ಧ ಹಾಲಿ ಸಂಸದ ಕಪಿಲ್ ಪಾಟೀಲ್ 24,675 ಮತಗಳಿಂದ ಹಿನ್ನಡೆಯಲ್ಲಿದ್ದರೆ, ಥಾಣೆ ನಗರದಲ್ಲಿ ಶಿವಸೇನೆಯ (ಯುಬಿಟಿ) ಹಾಲಿ ಸಂಸದ ರಾಜನ್ ವಿಚಾರೆ 10,9441 ಮತಗಳಿಂದ ಹಿಂದುಳಿದಿದ್ದಾರೆ.

ಇದನ್ನೂ ಓದಿ: Chandrababu Naidu: ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡುಗೆ ಭರ್ಜರಿ ಜಯ; ಜೂನ್ 9ಕ್ಕೆ ಸಿಎಂ ಆಗಿ ಪ್ರಮಾಣವಚನ

ಕಲ್ಯಾಣ್ ಕ್ಷೇತ್ರದಲ್ಲಿ ಹಾಲಿ ಸಂಸದ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ 1,29,725 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.  ಶಿವಸೇನಾ (ಯುಬಿಟಿ) 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಶರದ್ ಪವಾರ್ ಬಣ 7 ಸ್ಥಾನಗಳಲ್ಲಿ ಮುಂದಿದೆ. ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಯು ಕಾಂಗ್ರೆಸ್, ಶಿವಸೇನೆ (ಉದ್ಧವ್) ಮತ್ತು ಎನ್‌ಸಿಪಿ (ಶರದ್ ಪವಾರ್) ಅನ್ನು ಒಳಗೊಂಡಿದೆ. ಎಐಎಂಐಎಂ ಭಾರತ ಬ್ಲಾಕ್‌ನ ಭಾಗವಾಗಿರಲಿಲ್ಲ ಮತ್ತು ಲೋಕಸಭೆ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಎಐಎಂಐಎಂನ ಇಮ್ತಿಯಾಜ್ ಜಲೀಲ್ ಅವರು ತಮ್ಮ ಔರಂಗಾಬಾದ್ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Tue, 4 June 24

Follow Us
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ರಾಜ್ಯದ ಬೆಳವಣಿಗೆ ಉತ್ತಮ; ಸಿಎಂ
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!
ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ!
ಕುವೈತ್​​ನ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ
ಕುವೈತ್​​ನ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ
‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ಬಂದವರಿಗೆ ಬೆದರಿಕೆ ಕರೆ: ವಿಡಿಯೋ
‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ಬಂದವರಿಗೆ ಬೆದರಿಕೆ ಕರೆ: ವಿಡಿಯೋ
ಮಾಲ್​​ನ ರೇಲಿಂಗ್ ಬಳಿ ತಮಾಷೆ ಮಾಡಲು ಹೋಗಿ ಕೆಳಗೆ ಬಿದ್ದ ಯುವಕರು
ಮಾಲ್​​ನ ರೇಲಿಂಗ್ ಬಳಿ ತಮಾಷೆ ಮಾಡಲು ಹೋಗಿ ಕೆಳಗೆ ಬಿದ್ದ ಯುವಕರು
ಬಜೆಟ್ ಮಂಡನೆ ಬಳಿಕ ಸಿಎಂ ಸುದ್ದಿಗೋಷ್ಠಿಯ ನೇರ ಪ್ರಸಾರ
ಬಜೆಟ್ ಮಂಡನೆ ಬಳಿಕ ಸಿಎಂ ಸುದ್ದಿಗೋಷ್ಠಿಯ ನೇರ ಪ್ರಸಾರ