CBHFL Recruitment 2022: ಪದವಿ ಪೂರೈಸಿದವರಿಗೆ ಉದ್ಯೋಗಾವಕಾಶ: ವೇತನ 5 ಲಕ್ಷ ರೂ.
CBHFL Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿ ಅಧಿಕೃತ ವೆಬ್ಸೈಟ್ cbhfl.com ಮೂಲಕ ಆನ್ಲೈನ್ನಲ್ಲೇ ಅರ್ಜಿಗಳನ್ನು ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
CBHFL Recruitment 2022: ಸೇಂಟ್ ಬ್ಯಾಂಕ್ ಹೋಮ್ ಫೈನಾನ್ಸ್ ಲಿಮಿಟೆಡ್ ಆಫೀಸರ್, ಸೀನಿಯರ್ ಆಫೀಸರ್ ಮತ್ತು ಜೂನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿ ಅಧಿಕೃತ ವೆಬ್ಸೈಟ್ cbhfl.com ಮೂಲಕ ಆನ್ಲೈನ್ನಲ್ಲೇ ಅರ್ಜಿಗಳನ್ನು ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
- ಆಫೀಸರ್- 22 ಹುದ್ದೆಗಳು
- ಸೀನಿಯರ್ ಆಫೀಸರ್- 16 ಹುದ್ದೆಗಳು
- ಜೂನಿಯರ್ ಮ್ಯಾನೇಜರ್- 7 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಇದನ್ನೂ ಓದಿ
- ಆಫೀಸರ್ – ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಮಾಡಿರಬೇಕು. ಜೊತೆಗೆ ಹೌಸಿಂಗ್ ಫೈನಾನ್ಸ್ ಕಂಪನಿಯಲ್ಲಿ ಕನಿಷ್ಠ 1 ವರ್ಷದ ಕೆಲಸದ ಅನುಭವ ಹೊಂದಿರಬೇಕು.
- ಸೀನಿಯರ್ ಆಫೀಸರ್- ಕಂಪ್ಯೂಟರ್ ಜ್ಞಾನದೊಂದಿಗೆ ಪದವಿ ಮಾಡಿರಬೇಕು. ಅಲ್ಲದೆ 2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
- ಜೂನಿಯರ್ ಮ್ಯಾನೇಜರ್ – ಕಂಪ್ಯೂಟರ್ ಜ್ಞಾನದೊಂದಿಗೆ ಪದವಿ ಮಾಡಿರಬೇಕು. ಅಲ್ಲದೆ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.
ವಯೋಮಿತಿ:
- ಆಫೀಸರ್ – 21 ರಿಂದ 30 ವರ್ಷಗಳು
- ಸೀನಿಯರ್ ಆಫೀಸರ್- 21 ರಿಂದ 30 ವರ್ಷಗಳು
- ಜೂನಿಯರ್ ಮ್ಯಾನೇಜರ್ – 21 ರಿಂದ 30 ವರ್ಷಗಳು
ವಾರ್ಷಿಕ ವೇತನ:
- ಆಫೀಸರ್- 3 ಲಕ್ಷ ರೂ.
- ಸೀನಿಯರ್ ಆಫೀಸರ್- 4 ಲಕ್ಷ ರೂ.
- ಜೂನಿಯರ್ ಮ್ಯಾನೇಜರ್- 5 ಲಕ್ಷ ರೂ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 18, 2022
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.