Indian Air Force Recruitment 2022: ಭಾರತೀಯ ವಾಯುಪಡೆಯಲ್ಲಿ ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
Indian Air Force Recruitment 2022: ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indianairforce.nic.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
Indian Air Force Recruitment 2022: ಭಾರತೀಯ ವಾಯುಪಡೆಯ ಚಂಡೀಗಢದ ಏರ್ ಫೋರ್ಸ್ ಸ್ಟೇಷನ್‌ನಲ್ಲಿರುವ ಪ್ರೀಮಿಯರ್ ಬೇಸ್ ರಿಪೇರಿ ಡಿಪೋದಲ್ಲಿ (BRD) ಏರ್‌ಫೋರ್ಸ್ ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indianairforce.nic.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರಗಳು:
- ಒಟ್ಟು ಹುದ್ದೆಗಳ ಸಂಖ್ಯೆ: 152
- ಟರ್ನರ್: 16 ಹುದ್ದೆಗಳು
- ಮೆಷಿನಿಸ್ಟ್: 18 ಹುದ್ದೆಗಳು
- ಮೆಷಿನಿಸ್ಟ್ ಗ್ರೈಂಡರ್: 12 ಹುದ್ದೆಗಳು
- ಶೀಟ್ ಮೆಟಲ್ ವರ್ಕರ್: 22 ಹುದ್ದೆಗಳು
- ಎಲೆಕ್ಟ್ರಿಷಿಯನ್ ಏರ್‌ಕ್ರಾಫ್ಟ್: 15 ಹುದ್ದೆಗಳು
- ವೆಲ್ಡರ್ ಗ್ಯಾಸ್ ಮತ್ತು ಇಲೆಕ್ಟ್: 06 ಹುದ್ದೆಗಳು
- ಕಾರ್ಪೆಂಟರ್: 05 ಹುದ್ದೆಗಳು
- ಮೆಕ್ಯಾನಿಕ್ ರೇಡಿಯೋ ರಾಡಾರ್ ಏರ್‌ಕ್ರಾಫ್ಟ್: 15 ಹುದ್ದೆಗಳು
- ಪೇಂಟರ್ ಜನರಲ್: 10 ಹುದ್ದೆಗಳು
- ಡೆಸ್ಕ್‌ಟಾಪ್ ಪಬ್ಲಿಷಿಂಗ್ ಆಪರೇಟರ್: 03 ಹುದ್ದೆಗಳು
- ಪವರ್ ಎಲೆಕ್ಟ್ರಿಷಿಯನ್: 12 ಹುದ್ದೆಗಳು
- TIG/MIG ವೆಲ್ಡರ್: 06 ಹುದ್ದೆಗಳು
- ಕ್ವಾಲಿಟಿ ಅಸುರೆನ್ಸ್ ಅಸಿಸ್ಟೆಂಟ್: 08 ಹುದ್ದೆಗಳು
- ಕೆಮಿಕಲ್ ಲ್ಯಾಬೊರೇಟರಿ ಅಸಿಸ್ಟೆಂಟ್: 04 ಹುದ್ದೆಗಳು
ಅರ್ಹತಾ ಮಾನದಂಡ: ಅಭ್ಯರ್ಥಿಯು 50% ಅಂಕಗಳೊಂದಿಗೆ 10ನೇ ಅಥವಾ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ 65% ಅಂಕಗಳೊಂದಿಗೆ ITI ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ: 14 ರಿಂದ 21 ವರ್ಷಗಳವರೆಗಿನ ಅಭ್ಯರ್ಥಿಗಳು ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವೇತನ ಶ್ರೇಣಿ: ರೂ. 7700/- (ಪ್ರತಿ ತಿಂಗಳಿಗೆ)
ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ apprenticeshipindia.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 15, 2022
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 4:08 pm, Sun, 7 August 22