AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ದಕ್ಷಿಣ ಭಾರತದ ಪಾರುಪತ್ಯ ಸಾಧ್ಯತೆ

National film awards: 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಇಂದು (ಆಗಸ್ಟ್ 24) ಸಂಜೆ ಘೋಷಣೆ ಆಗಲಿದ್ದು, ಈ ಬಾರಿ ಸ್ಪರ್ಧೆಯಲ್ಲಿರುವ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ದಕ್ಷಿಣ ಭಾರತದ ಪಾರುಪತ್ಯ ಸಾಧ್ಯತೆ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
TV9 Web
| Edited By: |

Updated on:Aug 24, 2023 | 4:10 PM

Share

69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ (Natoinal Film Awards) ಇಂದು (ಆಗಸ್ಟ್ 24) ಸಂಜೆ ದೆಹಲಿಯಲ್ಲಿ ಆಗಲಿದೆ. ಈ ಬಾರಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಪಾರುಪತ್ಯ ಸಾಧಿಸಲಿವೆ. 2021 ರಲ್ಲಿ ಬಿಡುಗಡೆ ಆದ ಅಥವಾ 2021ರಲ್ಲಿ ಸೆನ್ಸಾರ್ (Censor) ಆದ ಸಿನಿಮಾಗಳಿಲ್ಲಿ ಅತ್ಯುತ್ತಮ ಸಿನಿಮಾ, ನಟ, ತಂತ್ರಜ್ಞರಿಗೆ 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ.

ಈ ಬಾರಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ದಕ್ಷಿಣದ ಸಿನಿಮಾಗಳು ಪಾರುಪತ್ಯ ಮೆರೆಯುವುದು ಬಹುತೇಕ ಪಕ್ಕಾ ಆಗಿದೆ. ಬಾಲಿವುಡ್​ನ ಗಂಗೂಬಾಯಿ ಕಾಠಿಯಾವಾಡಿಸೇರಿದಂತೆ ಇನ್ನು ಒಂದೆರಡು ಸಿನಿಮಾಗಳಿಂದ ತುಸು ಪ್ರತಿಸ್ಪರ್ಧೆ ವ್ಯಕ್ತವಾಗುತ್ತದೆಯಾದರೂ ದಕ್ಷಿಣ ಭಾರತದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆಲ್ಲುವುದು ಬಹುತೇಕ ಖಾತ್ರಿ.

ತಮಿಳಿನ ಜೈ ಭೀಮ್‘, ‘ಕರ್ಣನ್‘, ‘ಸರ್ಪಟ್ಟ ಪರಂಬರೈ‘, ‘ಮಾನಾಡು‘, ‘ರಾಕೆಟ್ರಿ: ದಿ ನಂಬಿ ಎಫೆಕ್ಟ್ಇನ್ನೂ ಕೆಲವು ಸಿನಿಮಾಗಳು ಸ್ಪರ್ಧೆಯಲ್ಲಿವೆ. ಅತ್ಯುತ್ತಮ ನಟ ವಿಭಾಗದಲ್ಲಿಯೂ ತಮಿಳಿನ ಸೂರ್ಯಾ, ಧನುಶ್, ಆರ್ಯಾ, ಸಿಲಂಬರಸನ್, ಮಾಧವನ್ ನಡುವೆ ತುರುಸಿನ ಸ್ಪರ್ಧೆ ನಡೆಯಲಿದೆ. ತಮಿಳಿನ ಇನ್ನೂ ಕೆಲವು ಸಿನಿಮಾಗಳು ರೇಸ್​ನಲ್ಲಿವೆ.

ಇದನ್ನೂ ಓದಿ:ಸೈಮಾ 2023: ಪ್ರಶಸ್ತಿಗಾಗಿ ಸೆಣೆಸುತ್ತಿರುವ ಕನ್ನಡ ಸಿನಿಮಾ, ತಂತ್ರಜ್ಞರ ಸಂಪೂರ್ಣ ಪಟ್ಟಿ

ಇನ್ನು ತೆಲುಗಿನಲ್ಲಿ ಆರ್​ಆರ್​ಆರ್ಸಿನಿಮಾ ಸ್ಪರ್ಧೆಯಲ್ಲಿದ್ದು ಈ ಸಿನಿಮಾವು ಹಲವು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಳ್ಳಲಿದೆ. ‘ಆರ್​ಆರ್​ಆರ್ಸಿನಿಮಾ 2022 ರಲ್ಲಿ ಬಿಡುಗಡೆ ಆಗಿದ್ದರೂ ಸೆನ್ಸಾರ್ ಆಗಿದ್ದು 2021ರಲ್ಲಿ ಆದ್ದರಿಂದ ಸಿನಿಮಾವನ್ನು 69ನೇ ವರ್ಷದ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಅಲ್ಲು ಅರ್ಜುನ್ ನಟನೆಯ ಪುಷ್ಪಸಿನಿಮಾ ಸಹ ಸ್ಪರ್ಧೆಯಲ್ಲಿದ್ದು, ಅತ್ಯುತ್ತಮ ನಟ ಪ್ರಶಸ್ತಿಗಾಗಿ ರಾಮ್ ಚರಣ್, ಜೂ ಎನ್​ಟಿಆರ್ ಹಾಗೂ ಅಲ್ಲು ಅರ್ಜುನ್ ನಡುವೆ ತುರುಸಿನ ಸ್ಪರ್ಧೆಯಿದೆ. ತೆಲುಗಿನ ಜಾತಿ ರತ್ನಾಲು‘, ‘ಉಪ್ಪೆನಇನ್ನೂ ಕೆಲವು ಸಿನಿಮಾಗಳು ಸಹ ಸ್ಪರ್ಧೆಯಲ್ಲಿವೆ.

ಇನ್ನು ಮಲಯಾಳಂನಲ್ಲಿ ದಿ ಗ್ರೇಟ್ ಇಂಡಿಯನ್ ಕಿಚನ್‘, ‘ಮಿನ್ನಲ್ ಮುರಲಿ‘, ‘ನಾಯಟ್ಟು‘, ‘ಮೇಪ್ಪಾದಿಯಾನ್ಸಿನಿಮಾಗಳು ಸ್ಪರ್ಧೆಯಲ್ಲಿವೆ. ಇನ್ನು ಕನ್ನಡದ ಗರುಡಗಮನ ವೃಷಭ ವಾಹನಸೇರಿದಂತೆ ಕೆಲವು ಕಲಾತ್ಮಕ ಸಿನಿಮಾಗಳು ಪಟ್ಟಿಯಲ್ಲಿವೆ. ಬಾಲಿವುಡ್​ನ ‘ಗಂಗೂಬಾಯಿ ಕಾಠಿಯಾವಾಡಿ’, ಕಂಗನಾ ನಟನೆಯ ‘ತಲೈವಿ’ ಸಿನಿಮಾ ಸಹ ರೇಸ್​ನಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Thu, 24 August 23