ಆರಾಧ್ಯಾ ಕ್ಯಾಮೆರಾ ಇದ್ರೆ ಮಾತ್ರ ಹಿರಿಯರಿಗೆ ನಮಸ್ಕರಿಸೋದಾ? ಐಶ್ವರ್ಯಾ ಮಗಳ ನಿಜವಾದ ವ್ಯಕ್ತಿತ್ವ ಎಂಥದ್ದು?
ಆರಾಧ್ಯಾ ಬಚ್ಚನ್ ಅವರ ಗೌರವಪೂರ್ಣ ವರ್ತನೆ ಕುರಿತು ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರು ಅವರು ಕ್ಯಾಮೆರಾ ಮುಂದೆ ಮಾತ್ರ ಗೌರವ ತೋರಿಸುತ್ತಾರೆ ಎಂದು ಆರೋಪಿಸಿದ್ದಾರೆ. ಆದರೆ, ಇತ್ತೀಚಿನ ಒಂದು ವಿಡಿಯೋದಲ್ಲಿ ಆರಾಧ್ಯಾ ಹಿರಿಯರಿಗೆ ಗೌರವ ತೋರಿಸುತ್ತಿರುವುದು ಕಂಡುಬಂದಿದೆ. ಇದು ಅವರ ನಿಜವಾದ ಸ್ವಭಾವವನ್ನು ತೋರಿಸುತ್ತದೆ ಎಂದು ಹಲವರು ಹೇಳುತ್ತಿದ್ದಾರೆ.

ಐಶ್ವರ್ಯಾ ರೈ (Aishawarya Rai) ಮಗಳು ಆರಾಧ್ಯಾ ರೈ ಬಚ್ಚನ್ ಅವರು ಇತ್ತೀಚೆಗೆ ಸುದ್ದಿ ಆಗುತ್ತಾ ಇದ್ದಾರೆ. ಅವರು ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಇನ್ನೂ ಸಣ್ಣ ವಯಸ್ಸು. ಈಗಲೇ ಅವರು ಸಾಕಷ್ಟು ಸಂಪ್ರದಾಯ ಕಲಿತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ, ಇದೆಲ್ಲವೂ ಕ್ಯಾಮೆರಾ ಎದುರಿಗೆ ಮಾತ್ರ ಎಂದು ಕೆಲವರು ಟೀಕೆ ಮಾಡಿದ್ದು ಇದೆ. ಇದಕ್ಕೆ ಉತ್ತರ ಸಿಕ್ಕಿದೆ. ಆರಾಧ್ಯಾ ಬಚ್ಚನ್ ನಿಜವಾದ ವ್ಯಕ್ತಿತ್ವ ಎಂಥದ್ದು ಎಂಬುದು ರಿವೀಲ್ ಆಗಿದೆ.
ಆರಾಧ್ಯಾಳು ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಕನ್ನಡದ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಐಶ್ವರ್ಯಾ ರೈ ಕೂಡ ಅಲ್ಲಿಯೇ ಇದ್ದರು. ಐಶ್ವರ್ಯಾ ಅವರು ಶಿವರಾಜ್ಕುಮಾರ್ ಪರಿಚಯವನ್ನು ಆರಾಧ್ಯಾಗೆ ತಿಳಿಸಿದರು. ಆರಾಧ್ಯಾಗೆ ಶಿವಣ್ಣನ ಬಗ್ಗೆ ತಿಳಿಯುತ್ತಿದ್ದಂತೆ ಕಾಲಿಗೆ ನಮಸ್ಕರಿಸಿಯೇ ಬಿಟ್ಟರು. ಈ ವಿಡಿಯೋ ಆಗ ಸಾಕಷ್ಟು ವೈರಲ್ ಆಗಿತ್ತು. ಅನೇಕರು ಇದನ್ನು ಕ್ಯಾಮೆರಾ ಸ್ಟಂಟ್ ಎಂದು ಹೇಳಿದ್ದರು.
ಇದನ್ನೂ ಓದಿ: ಐಶ್ವರ್ಯಾ ರೈ ಬಚ್ಚನ್ ಕಾರಿಗೆ ಬಸ್ ಡಿಕ್ಕಿ? ಘಟನೆ ಬಗ್ಗೆ ಅಭಿಮಾನಿಗಳಿಗೆ ಆತಂಕ
ಆದರೆ, ನಿಜಕ್ಕೂ ಆರಾಧ್ಯಾ ಹಾಗೆ ಇದ್ದಾರಾ? ಕ್ಯಾಮೆರಾ ಕಂಡರೆ ಮಾತ್ರ ಕಾಲಿಗೆ ನಮಸ್ಕರಿಸುತ್ತಾರಾ. ಹಾಗೇನು ಇಲ್ಲ ಎನ್ನುತ್ತದೆ ಈ ವಿಡಿಯೋ. ಹಿರಿಯರು ಕಂಡಾಗ ಕಾಲಿಗೆ ಬೀಳೋದು ಆರಾಧ್ಯಾಗೆ ಮೊದಲಿನಿಂದ ಹೇಳಿಕೊಟ್ಟ ಸಂಪ್ರದಾಯ. ಚಿಕ್ಕ ವಯಸ್ಸಿನಿಂದ ಆರಾಧ್ಯಾ ಹೀಗೆಯೇ ಮಾಡುತ್ತಾ ಬರುತ್ತಿದ್ದಾರೆ. ಹೀಗಾಗಿ, ಇದು ಅವರು ಕ್ಯಾಮೆರಾ ಕಂಡಾಗ ಮಾತ್ರ ಮಾಡೋದು ಎಂಬುದರಲ್ಲಿ ಯಾವುದೇ ಅರ್ಥ ಇಲ್ಲ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
View this post on Instagram
ಐಶ್ವರ್ಯಾ ರೈ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಪೊನಿಯನ್ ಸೆಲ್ವನ್ 2’ ಚಿತ್ರದಲ್ಲಿ. ಮಣಿರತ್ನಂ ಅವರು ನಿರ್ದೇಶನ ಮಾಡಿದ ಚಿತ್ರ ಎಂಬ ಕಾರಣಕ್ಕೂ ಐಶ್ವರ್ಯಾ ನಟಿಸಿದರು. ಇದು ತಮಿಳಿನ ಚಿತ್ರ ಆಗಿತ್ತು. ಈ ಸಿನಿಮಾ ಗೆದ್ದು ಬೀಗಿದೆ. ಇದಾದ ಬಳಿಕ ಐಶ್ವರ್ಯಾ ಸಿನಿಮಾ ಘೋಷಿಸಿಲ್ಲ. ಅವರಿಗೆ ಕೆಲವು ಅನಾರೋಗ್ಯ ಸಮಸ್ಯೆಗಳು ಕೂಡ ಕಾಡುತ್ತಿವೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.