ವಿದೇಶಕ್ಕೆ ಹೋಗುವಾಗ ಉಪಾಸನಾ ಲಗೇಜ್ ಬ್ಯಾಗ್ನಲ್ಲಿರುತ್ತೆ ಕುಕ್ಕರ್
ರಾಮ್‌ಚರಣ್ ಅವರಿಗೆ ಭಾರತೀಯ ಆಹಾರದ ಬಗ್ಗೆ ವಿಶೇಷ ಆಸಕ್ತಿ ಇದೆ. ವಿದೇಶ ಪ್ರವಾಸಗಳಲ್ಲಿ ಭಾರತೀಯ ಆಹಾರ ಸಿಗುವುದು ಕಷ್ಟ ಎಂದು ತಿಳಿದ ಉಪಾಸನಾ ಅವರು, ಪ್ರತಿ ಪ್ರಯಾಣದಲ್ಲೂ ಕುಕ್ಕರ್ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ರಾಮ್‌ಚರಣ್ ಅವರಿಗೆ ದಿನಕ್ಕೊಮ್ಮೆಯಾದರೂ ಭಾರತೀಯ ಊಟ ಸಿಗುತ್ತದೆ.

ರಾಮ್ ಚರಣ್ (Ram Charan) ಅವರಿಗೆ ಊಟದ ಬಗ್ಗೆ ವಿಶೇಷ ಪ್ರೀತಿ ಇದೆ. ಅದರಲ್ಲೂ ದಕ್ಷಿಣ ಭಾರತದ ಊಟ ಎಂದರೆ ರಾಮ್ ಚರಣ್ ಅವರಿಗೆ ಸಾಕಷ್ಟು ಇಷ್ಟವಂತೆ. ರಾಮ್ ಚರಣ್ ಅವರು ನಾನಾ ಕಾರ್ಯಕ್ರಮಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಭಾರತದ ಊಟವೇ ಬೇಕು ಎಂದು ಹಠ ಹಿಡಿದು ಕುಳಿತರೆ ಅದು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಉಪಾಸನಾ ಅವರು ಒಂದು ಪ್ಲ್ಯಾನ್ ಮಾಡಿದ್ದಾರೆ. ಪ್ರತಿ ಬಾರಿ ವಿದೇಶಕ್ಕೆ ಹೋಗುವಾಗ ಮನೆಯಿಂದ ಕುಕ್ಕರ್ ತೆಗೆದುಕೊಂಡು ಹೋಗುತ್ತಾರೆ.
ರಾಮ್ ಚರಣ್ ಅವರು ಹಿಂದೂ ಧರ್ಮದ ಆಚರಣೆಗಳನ್ನು ಫಾಲೋ ಮಾಡುತ್ತಾರೆ. ಹಬ್ಬ-ಹರಿದಿನಗಳಲ್ಲಿ ಭಾಗಿ ಆಗುತ್ತಾರೆ. ರಾಮ್ ಚರಣ್ ಅವರಿಗೆ ಊಟದ ಬಗ್ಗೆ ವಿಶೇಷ ಕಾಳಜಿ ಇದೆ. ಹಬ್ಬಗಳಂದು ಮಾಡುವ ಅಡುಗೆಯನ್ನು ಅವರು ಆಸ್ವಾದಿಸುತ್ತಾರೆ. ಅವರು ವಿದೇಶಕ್ಕೆ ಹೋದರೂ ಭಾರತದ ಊಟ ಮಾಡೋದು ಬಿಡಲ್ಲ. ದಿನಕ್ಕೆ ಒಮ್ಮೆಯಾದರೂ ಅವರು ಭಾರತೀಯ ಊಟವನ್ನು ಮಾಡುತ್ತಾರಂತೆ.
‘ವಿದೇಶದಲ್ಲಿ ಎಲ್ಲಿಯೇ ಹೋದರೂ ನನ್ನ ಪತಿಗೆ ಭಾರತೀಯ ಊಟ ಮಾಡಲೇಬೇಕು. ದಿನದಲ್ಲಿ ಒಂದು ಊಟ ಭಾರತದ್ದಾಗಿರಬೇಕು’ ಎಂದು ಉಪಾಸನಾ ಅವರು ಹೇಳಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲಿ ಭಾರತದ ಊಟ ಸಿಗುವುದಿಲ್ಲ. ಅದಕ್ಕಾಗಿ ಸಾಕಷ್ಟು ಸುತ್ತಾಟ ಮಾಡಬೇಕಾಗುತ್ತದೆ. ಸಮಯ ಇಲ್ಲ ಎಂದಾಗ ಅದು ಅಸಾಧ್ಯ ಕೂಡ ಹೌದು. ಹೀಗಾಗಿ, ಉಪಾಸನಾ ಕುಕ್ಕರ್ನ ತೆಗೆದುಕೊಂಡು ಹೋಗುತ್ತಾರಂತೆ.
ರಾಮ್ ಚರಣ್ ತಾಯಿ ವಿವಿಧ ರೀತಿಯ ರೆಡಿ ಮೇಡ್ ಫುಡ್ಗಳನ್ನು ಮಾಡುತ್ತಾರೆ. ಅವರದ್ದೇ ಕಂಪನಿ ಕೂಡ ಇದೆ. ಇವುಗಳನ್ನು ಉಪಾಸನಾ ತೆಗೆದುಕೊಂಡು ಹೋಗುತ್ತಾರೆ. ‘ನಾವು ಎಲ್ಲೇ ಹೋದರೂ ಎಲೆಕ್ಟ್ರಿಕ್ ಕುಕ್ಕರ್ ತೆಗೆದುಕೊಂಡು ಹೋಗುತ್ತೇವೆ. ನೀರು ಹಾಕಿ , ಸ್ವಿಚ್ ಹಾಕುತ್ತೇವೆ. ಇದರಿಂದ ಅಡುಗೆ ಆಗುತ್ತದೆ. ಫೈಯರ್ ಅಲಾರಮ್ ಕೂಗೋ ಭಯವೂ ಇಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಕಿರಿಯ ಹಾಸ್ಯನಟನ ಕಾಲು ನಮಸ್ಕರಿಸಿದ ರಾಮ್ ಚರಣ್, ವಿಷಯವೇನು?
ಉಪಾಸನಾ ಅತ್ತೆ ಸುರೇಖಾ ಅವರು ‘ಅತ್ತಮ್ಮಾಸ್ ಕಿಚನ್’ ಆರಂಭಿಸಿದ್ದಾರೆ. ಹೋಮ್ ಮೇಡ್ ಫುಡ್ಗಳು ಇದರಲ್ಲಿ ಲಭ್ಯ. ಇತ್ತೀಚೆಗೆ ಉಪಾಸನಾ ಅವರು ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಸೆಟ್ಗೆ ಭೇಟಿ ಕೊಟ್ಟಿದ್ದರು. ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರಿಗೆ ಈ ಕಿಚನ್ನಿಂದ ಕೆಲ ಗಿಫ್ಟ್ಗಳನ್ನು ಕೊಟ್ಟಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:04 am, Fri, 11 April 25