AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರಂತೆ ಇನ್ನೊಬ್ಬರಿಲ್ಲ’: ರಿಷಬ್ ಶೆಟ್ಟಿಯ ಕೊಂಡಾಡಿದ ಹಿರಿಯ ಸ್ಟಾರ್ ನಟ

Kantara Chapter 1: ಕನ್ನಡ ಚಿತ್ರರಂಗದ ಗಡಿ ದಾಟಿ ಹಲವು ಚಿತ್ರರಂಗಗಳಲ್ಲಿ ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಇದಕ್ಕೆಲ್ಲ ಅವರ ಕ್ರಿಯಾಶೀಲತೆ, ಶ್ರಮ, ಹೊಸತನಕ್ಕೆ ಅಳವಡಿಸಿಕೊಳ್ಳುವ ಗುಣ, ಕಷ್ಟ ಸಹಿಷ್ಣುತೆಗಳೇ ಕಾರಣ. ಇದೀಗ ದಕ್ಷಿಣ ಭಾರತದ ಬಲು ಬೇಡಿಕೆಯ ಹಿರಿಯ ನಟರೊಬ್ಬರು ರಿಷಬ್ ಶೆಟ್ಟಿ ಅವರು ಸೆಟ್​​ನಲ್ಲಿ ಹೇಗಿರುತ್ತಾರೆ? ಅವರ ಈ ಯಶಸ್ಸಿಗೆ ಕಾರಣ ಏನು? ಎಂಬುದನ್ನು ವಿವರಿಸಿದ್ದಾರೆ.

‘ಅವರಂತೆ ಇನ್ನೊಬ್ಬರಿಲ್ಲ’: ರಿಷಬ್ ಶೆಟ್ಟಿಯ ಕೊಂಡಾಡಿದ ಹಿರಿಯ ಸ್ಟಾರ್ ನಟ
Rishab Shetty Jayaram
ಮಂಜುನಾಥ ಸಿ.
|

Updated on: Jul 29, 2026 | 10:52 AM

Share

ಕಾಂತಾರ’ (Kantara) ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಗಡಿ ದಾಟಿ ಹಲವು ಚಿತ್ರರಂಗಗಳಲ್ಲಿ ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಇದಕ್ಕೆಲ್ಲ ಅವರ ಕ್ರಿಯಾಶೀಲತೆ, ಶ್ರಮ, ಹೊಸತನಕ್ಕೆ ಅಳವಡಿಸಿಕೊಳ್ಳುವ ಗುಣ, ಕಷ್ಟ ಸಹಿಷ್ಣುತೆಗಳೇ ಕಾರಣ. ಇದೀಗ ದಕ್ಷಿಣ ಭಾರತದ ಬಲು ಬೇಡಿಕೆಯ ಹಿರಿಯ ನಟರೊಬ್ಬರು ರಿಷಬ್ ಶೆಟ್ಟಿ ಅವರು ಸೆಟ್​​ನಲ್ಲಿ ಹೇಗಿರುತ್ತಾರೆ? ಅವರ ಈ ಯಶಸ್ಸಿಗೆ ಕಾರಣ ಏನು? ಎಂಬುದನ್ನು ವಿವರಿಸಿದ್ದಾರೆ.

ಮೂಲತಃ ಮಲಯಾಳಂ ನಟರಾದರೂ ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟ ಜಯರಾಂ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರಮುಖವಾದ ಪಾತ್ರದಲ್ಲಿ ಜಯರಾಂ ನಟಿಸಿದ್ದರು. ಇದೀಗ ಅವರು ತಮಿಳು ಸಿನಿಮಾಕ್ಕೆ ಸಂಬಂಧಿಸಿದಂತೆ ಪಾಲ್ಗೊಂಡಿದ್ದ ಸಂದರ್ಶನದಲ್ಲಿ ಮಾತನಾಡುತ್ತಾ, ನಟ ರಿಷಬ್ ಶೆಟ್ಟಿ ಅವರೊಟ್ಟಿಗೆ ನಟಿಸಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:ಸೂರ್ಯ ನಟನೆಯ ಹಿಟ್ ಸಿನಿಮಾಕ್ಕೆ ‘ಕಾಂತಾರ’, ‘ಸಪ್ತ ಸಾಗರದಾಚೆ’ ಸ್ಪೂರ್ತಿ

‘ರಿಷಬ್ ಶೆಟ್ಟಿ, ಸಿನಿಮಾ ಸೆಟ್​​ನಲ್ಲಿ ಪಾದರಸದಂತೆ ಇರುತ್ತಿದ್ದರು. ಚಿತ್ರೀಕರಣದ ಯಾವುದೇ ವಿಭಾಗದಲ್ಲಿಯೂ ಸಹ ಅವರೇ ಇರುತ್ತಿದ್ದರು. ಸೆಟ್ ನಿರ್ಮಾಣ, ಮೇಕಪ್, ಕ್ಯಾಮೆರಾ, ಆಕ್ಷನ್ ಎಲ್ಲದರಲ್ಲೂ ಅವರು ಭಾಗವಹಿಸುತ್ತಿದ್ದರು, ಮೇಲುಸ್ತುವಾರಿ ನೋಡುತ್ತಿದ್ದರು, ಸಲಹೆಗಳನ್ನು ನೀಡುತ್ತಿದ್ದರು. ಸೆಟ್​​​ಗೆ ಬಂದಾಗಿನಿಂದ ಹೊರಗೆ ಹೋಗುವವರೆಗೆ, ಹೋದಮೇಲೂ ಅವರು ಸಿನಿಮಾದ ಕೆಲಸಗಳಲ್ಲಿಯೇ ಬಿಡುವಾಗಿರುತ್ತಿದ್ದರು’ ಎಂದಿದ್ದಾರೆ ಜಯರಾಂ.

‘ಸಿನಿಮಾ ಶೂಟಿಂಗ್​​ನ ಎಲ್ಲ ವಿಭಾಗಗಳಲ್ಲಿ ಅವರಷ್ಟು ತೊಡಗಿಕೊಳ್ಳುವ ನಿರ್ದೇಶಕರ ನಾನು ನೋಡಿಲ್ಲ. ನನ್ನ ಶೂಟಿಂಗ್ ಸಮಯದಲ್ಲಿ ಶಾಟ್ ಮುಗಿದರೂ ಸಹ ನಾನು ಅಲ್ಲಿಯೇ ಕೂರುತ್ತಿದ್ದೆ. ಅವರು ಏನು ಮಾಡುತ್ತಾರೋ ನೋಡುತ್ತಾ ಇರುತ್ತಿದ್ದೆ. ಅವರಿಂದ ಕಲಿಯುವುದು ಸಾಕಷ್ಟಿದೆ. ಯುವಕರು ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು’ ಎಂದು ಜಯರಾಂ ಅವರು ಹೇಳಿದ್ದಾರೆ.

ಜಯರಾಂ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ಅವರ ತಂದೆಯ ಪಾತ್ರ ಅವರದ್ದು. ಅದಕ್ಕೂ ಮುನ್ನ ಶಿವರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಘೋಸ್ಟ್’ನಲ್ಲಿ ಅವರು ನಟಿಸಿದ್ದಾರೆ. ಮಲಯಾಳಂ ಮೂಲದ ನಟ ಜಯರಾಂ ದಕ್ಷಿಣದ ಎಲ್ಲ ಭಾಷೆಗಳಲ್ಲೂ ನಟಿಸಿದ್ದಾರೆ ಜೊತೆಗೆ ಒಳ್ಳೆಯ ಹಾಡುಗಾರರೂ ಆಗಿರುವ ಜಯರಾಂ, ಹಿಂದೊಮ್ಮೆ ಅಪ್ಪು ಅವರ ಹಾಡು ಹಾಡಿ ಅದು ಸಖತ್ ವೈರಲ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು