AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾತ್ರಿ ದಿನ ‘ಪ್ರಾಜೆಕ್ಟ್​ ಕೆ’ ರಿಲೀಸ್ ದಿನಾಂಕ ರಿವೀಲ್​; ಪರ್ಫೆಕ್ಟ್ ದಿನ ಎಂದ ಫ್ಯಾನ್ಸ್

Project K Release Date: ಇಂದು (ಫೆಬ್ರವರಿ 18) ಶಿವರಾತ್ರಿ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಚಿತ್ರದ ಪೋಸ್ಟರ್, ಟೈಟಲ್, ಟೀಸರ್ ಹಾಗೂ ಟ್ರೇಲರ್​ಗಳು ರಿಲೀಸ್ ಆಗುತ್ತವೆ. ಈ ವಿಶೇಷ ದಿನದಂದು ‘ಪ್ರಾಜೆಕ್ಟ್​ ಕೆ’ ತಂಡದವರು ರಿಲೀಸ್ ದಿನಾಂಕ ರಿವೀಲ್ ಮಾಡಿದ್ದಾರೆ.

ಶಿವರಾತ್ರಿ ದಿನ ‘ಪ್ರಾಜೆಕ್ಟ್​ ಕೆ’ ರಿಲೀಸ್ ದಿನಾಂಕ ರಿವೀಲ್​; ಪರ್ಫೆಕ್ಟ್ ದಿನ ಎಂದ ಫ್ಯಾನ್ಸ್
ಪ್ರಭಾಸ್
ರಾಜೇಶ್ ದುಗ್ಗುಮನೆ
|

Updated on: Feb 18, 2023 | 12:40 PM

Share

ಪ್ರಭಾಸ್ (Prabhas) ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪ್ರಾಜೆಕ್ಟ್​ ಕೆ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ಈವರೆಗೆ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಖ್ಯಾತ ನಿರ್ದೇಶಕ ನಾಗ್​ ಅಶ್ವಿನ್​ (Nag Ashwin) ಅವರು ಇದಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸೈನ್ಸ್​ ಫಿಕ್ಷನ್​ ಕಥೆಯನ್ನು ಸಿನಿಮಾ ಹೊಂದಿದೆ. ಈ ಸಿನಿಮಾಗೆ ಇನ್ನೂ ಅಧಿಕೃತವಾಗಿ ಟೈಟಲ್ ಫಿಕ್ಸ್ ಆಗಿಲ್ಲ. ಹೀಗಿರುವಾಗಲೇ ಚಿತ್ರದ ರಿಲೀಸ್ ದಿನಾಂಕ ರಿವೀಲ್ ಆಗಿದೆ. ಸಿನಿಮಾ 2024ರಲ್ಲಿ ತೆರೆಗೆ ಬರಲಿದೆ.

ಇಂದು (ಫೆಬ್ರವರಿ 18) ಶಿವರಾತ್ರಿ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಚಿತ್ರದ ಪೋಸ್ಟರ್, ಟೈಟಲ್, ಟೀಸರ್ ಹಾಗೂ ಟ್ರೇಲರ್​ಗಳು ರಿಲೀಸ್ ಆಗುತ್ತವೆ. ಈ ವಿಶೇಷ ದಿನದಂದು ‘ಪ್ರಾಜೆಕ್ಟ್​ ಕೆ’ ತಂಡದವರು ರಿಲೀಸ್ ದಿನಾಂಕ ರಿವೀಲ್ ಮಾಡಿದ್ದಾರೆ. ಸಂಕ್ರಾಂತಿ ಪ್ರಯುಕ್ತ 2024ರ ಜನವರಿ 12ರಂದು ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಈ ವಿಚಾರ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಂಕ್ರಾಂತಿ ಸಮಯದಂದು ಹಲವು ದೊಡ್ಡ ಪ್ರಾಜೆಕ್ಟ್​ಗಳು ತೆರೆಗೆ ಬರುತ್ತವೆ. ಹೀಗಾಗಿ, ‘ಪ್ರಾಜೆಕ್ಟ್ ಕೆ’ ಎದುರು ಯಾವೆಲ್ಲ ಸಿನಿಮಾಗಳು ಸ್ಪರ್ಧೆಗೆ ಇಳಿಯಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಎರಡು ಪಾರ್ಟ್​​ನಲ್ಲಿ ‘ಪ್ರಾಜೆಕ್ಟ್​ ಕೆ’?

ಇತ್ತೀಚೆಗೆ ಸಿನಿಮಾಗಳು ಎರಡು ಪಾರ್ಟ್​ನಲ್ಲಿ ರಿಲೀಸ್ ಮಾಡುವ ಟ್ರೆಂಡ್ ಜೋರಾಗಿದೆ. ‘ಪ್ರಾಜೆಕ್ಟ್​ ಕೆ’ ಸಿನಿಮಾ ಕೂಡ ಎರಡು ಪಾರ್ಟ್​ನಲ್ಲಿ ಬರುತ್ತಿದೆ. ಚಿತ್ರದ ಕಥೆ ಬಹಳ ದೊಡ್ಡದಾಗಿದೆ. ಹೀಗಾಗಿ ಅದನ್ನು ಎರಡು ಪಾರ್ಟ್​ಗಳಲ್ಲಿ ತರಲು ನಾಗ್ ಅಶ್ವಿನ್ ನಿರ್ಧರಿಸಿದ್ದಾರೆ.

ಸಲಾರ್-ಆದಿ ಪುರುಷ್ ಚಿತ್ರದ ಬಗ್ಗೆ ನಿರೀಕ್ಷೆ

ಪ್ರಭಾಸ್​ ಅವರು ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ‘ಕೆಜಿಎಫ್’ ಯಶಸ್ಸಿನ ಬಳಿಕ ಪ್ರಶಾಂತ್​ ನೀಲ್​ ಕೈಗೆತ್ತಿಕೊಂಡ ಚಿತ್ರವಾದ್ದರಿಂದ ಹೈಪ್​ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಶ್ರುತಿ ಹಾಸನ್​ ನಟಿಸುತ್ತಿದ್ದಾರೆ.

‘ಸಲಾರ್​’ ಚಿತ್ರಕ್ಕಿಂತಲೂ ಮುನ್ನ ‘ಆದಿ ಪುರುಷ್​’ ಸಿನಿಮಾ ಬಿಡುಗಡೆ ಆಗಲಿದೆ. ರಾಮಾಯಣದ ಕಥೆಯನ್ನು ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಜೂನ್ 16ರಂದು ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!