‘ಗುಡ್ ಬ್ಯಾಡ್ ಅಗ್ಲಿ’ ಹಾಡಿಗೆ ಪ್ರಿಯಾ ವಾರಿಯರ್ ಮಸ್ತ್ ಡ್ಯಾನ್ಸ್; ಇಲ್ಲಿದೆ ವಿಡಿಯೋ
ಅಜಿತ್ ಕುಮಾರ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಚಿತ್ರದ ಹಾಡಿಗೆ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಮಾಡಿದ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಮ್ರಾನ್ ಅವರ ಹಿಂದಿನ ಹಾಡಿನ ಡ್ಯಾನ್ಸ್‌ಗೆ ಹೋಲಿಸಿದರೆ, ಪ್ರಿಯಾ ಅವರ ಡ್ಯಾನ್ಸ್ ಸಹ ಅದ್ಭುತವಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ (Good Bad Ugly Movie) ಏಪ್ರಿಲ್ 10ರಂದು ಬಿಡುಗಡೆ ಕಂಡಿತು. ಇದನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ಈ ಚಿತ್ರ ಸಂಪೂರ್ಣವಾಗಿ ಅಜಿತ್ ಅಭಿಮಾನಿಗಳಿಗೆ ಮೀಸಲಾದ ಚಿತ್ರ ಎಂದು ಹೇಳಬಹುದು. ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದಲ್ಲಿ ತುಂಬಾ ಮಾಸ್ ಡೈಲಾಗ್‌ಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ತಮ್ಮ ಕಡೆ ಸೆಳೆದಿದ್ದಾರೆ ಅಜಿತ್. ಈ ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ಚಿತ್ರದ ಹಾಡಿಗೆ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಸನ್ನೆ ಹುಡುಗಿ ಎಂದೇ ಫೇಮಸ್ ಆದವರು. ಇತ್ತೀಚೆಗೆ ಅವರಿಗೆ ಅಂಥ ದೊಡ್ಡ ಆಫರ್ಗಳೇನು ಬರುತ್ತಿಲ್ಲ. ಅವರು ಚಿತ್ರದ ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ. ‘ಗುಡ್ ಬ್ಯಾಡ್ ಅಗ್ಲಿ’ ಸಕ್ಸಸ್ ಮೀಟ್ ವೇಳೆ ಅವರು ಈ ಡ್ಯಾನ್ಸ್ ಮಾಡಿದ್ದಾರೆ. ಪ್ರಸ್ತುತ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅನೇಕ ಅಭಿಮಾನಿಗಳು ಅವರನ್ನು ಮುಂದಿನ ಸಿಮ್ರಾನ್ ಎಂದೂ ಕರೆಯುತ್ತಿದ್ದಾರೆ.
ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂನ ಪ್ರಸಿದ್ಧ ನಟಿ. ಅವರು 2019 ರಲ್ಲಿ ಬಿಡುಗಡೆಯಾದ ‘ಒರು ಅಡಾರ್ ಲವ್’ ಚಿತ್ರದ ಮೂಲಕ ಭಾರತದಾದ್ಯಂತ ಪ್ರಸಿದ್ಧರಾದರು. ಅವರು ಕನ್ನಡದಲ್ಲಿ ‘ವಿಷ್ಣು ಪ್ರಿಯ’ ಹೆಸರಿನ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ಅವರು ನಟ ಅರ್ಜುನ್ ದಾಸ್ ಅವರ ಗೆಳತಿಯ ಪಾತ್ರದಲ್ಲಿ ನಟಿಸಿದ್ದಾರೆ.
Recreating the moment the theatres erupted 💥#PriyaPrakashVarrier dances for #ThottuThottuPesumSultana at the #GoodBadUgly BLOCKBUSTER SAMBAVAM CELEBRATIONS 💥💥 pic.twitter.com/qz3pOFVy0g
— Mythri Movie Makers (@MythriOfficial) April 13, 2025
ಈ ಚಿತ್ರದಲ್ಲಿ ನಟಿ ಸಿಮ್ರಾನ್ ಅವರು ಡ್ಯಾನ್ಸ್ ಮಾಡಿದ್ದ ‘ತೊಟ್ಟು ತೊಟ್ಟು ಪೇಸುಮ್ ಸುಲ್ತಾನಾ..’ ಹಾಡಿಗೆ ಪ್ರಿಯಾ ಡ್ಯಾನ್ಸ್ ಮಾಡಿದ್ದಾರೆ. ಈ ಚಿತ್ರದ ಡ್ಯಾನ್ಸ್ ಚಿತ್ರಮಂದಿರಗಳಲ್ಲಿ ಹಿಟ್ ಆಗಿದ್ದವು. ಅಜಿತ್ ಅಭಿಮಾನಿಗಳಿಗೆ ಈ ಹಾಡು ಮಜಾ ಕೊಟ್ಟಿತ್ತು.
ಇದನ್ನೂ ಓದಿ: ಅಪರೂಪಕ್ಕೆ ಕಾಣಿಸಿಕೊಂಡ ಅಜಿತ್ ಕುಮಾರ್ ಮಗಳು ಅನುಷ್ಕಾ; ವಿಡಿಯೋ ವೈರಲ್
ನಟ ಅಜಿತ್ ಅವರ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರ ಬಿಡುಗಡೆಯಾದ ನಾಲ್ಕು ದಿನಗಳ ನಂತರ ಇದುವರೆಗೆ 120 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ ಎಂದು ವರದಿಯಾಗಿದೆ. ಈ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Mon, 14 April 25