ವಿಕಲಚೇತನ ವ್ಯಕ್ತಿಗಾಗಿ ಬಾಹುಬಲಿ ಅವತಾರ ತಾಳಿದ ಅಲ್ಲು ಅರ್ಜುನ್; ಫೋಟೋ ವೈರಲ್
ವಿಶಾಖಪಟ್ಟಣದಲ್ಲಿ ’ಪುಷ್ಪ 2’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ವಿಕಲಚೇತನ ವ್ಯಕ್ತಿ ಅಲ್ಲು ಅರ್ಜುನ್ನ ಭೇಟಿ ಮಾಡಲು ಬಂದಿದ್ದರು.
‘ಬಾಹುಬಲಿ’ (Bahubali) ಚಿತ್ರದಲ್ಲಿ ಈಶ್ವರನ ಲಿಂಗವನ್ನು ಪ್ರಭಾಸ್ ಎತ್ತಿಕೊಂಡು ಹೋಗುತ್ತಾರೆ. ಈ ದೃಶ್ಯ ಸಖತ್ ಫೇಮಸ್ ಆಗಿತ್ತು. ಅನೇಕ ಮೀಮ್ಗಳಿಗೆ ಆ ದೃಶ್ಯ ಬಳಕೆ ಆಗಿತ್ತು. ಈಗ ಅಲ್ಲು ಅರ್ಜುನ್ ಅವರು ವಿಕಲಚೇತನ ವ್ಯಕ್ತಿಯನ್ನು ಎತ್ತಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ಅಲ್ಲು ಅರ್ಜುನ್ (Allu Arjun) ಅವರನ್ನು ಎಲ್ಲರೂ ಬಾಹುಬಲಿಗೆ ಹೋಲಿಕೆ ಮಾಡುತ್ತಿದ್ದಾರೆ. ಅಭಿಮಾನಿಗೆ ಅಲ್ಲು ಅರ್ಜುನ್ ತೋರಿದ ಪ್ರೀತಿ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಅಲ್ಲು ಅರ್ಜುನ್ ಅವರ ನಟನೆಯ ‘ಪುಷ್ಪ’ ಸಿನಿಮಾ ಹಿಟ್ ಆಯಿತು. ಈ ಚಿತ್ರದಿಂದ ಅಲ್ಲು ಅರ್ಜುನ್ ಅವರ ಖ್ಯಾತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆಯಿತು. ಅಲ್ಲು ಅರ್ಜುನ್ ಅವರು ಸದ್ಯ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮೊದಲ ಪಾರ್ಟ್ ಹಿಟ್ ಆಗಿದ್ದರಿಂದ ಎರಡನೇ ಪಾರ್ಟ್ಗೆ ಹೆಚ್ಚಿನ ಕಾಳಜಿ ವಹಿಸಿ ಶೂಟ್ ಮಾಡಲಾಗುತ್ತಿದೆ. ಸದ್ಯ ವಿಶಾಖಪಟ್ಟಣದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ವಿಕಲಚೇತನ ವ್ಯಕ್ತಿ ಅಲ್ಲು ಅರ್ಜುನ್ನ ಭೇಟಿ ಮಾಡಲು ಬಂದಿದ್ದರು.
ವಿಕಲಚೇತನ ವ್ಯಕ್ತಿಯನ್ನು ನೋಡುತ್ತಿದ್ದಂತೆ ಅಲ್ಲು ಅರ್ಜುನ್ ತಡ ಮಾಡಲಿಲ್ಲ. ಅಭಿಮಾನಿ ಬಳಿ ತೆರಳಿ ಅವರನ್ನು ಎತ್ತಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲು ಅರ್ಜುನ್ ಅವರನ್ನು ಅನೇಕರು ಬಾಹುಬಲಿಗೆ ಹೋಲಿಕೆ ಮಾಡುತ್ತಿದ್ದಾರೆ. ರಾಮ್ ಚರಣ್ ಫೋಟೋ ಕೂಡ ವೈರಲ್ ಆಗಿತ್ತು. 9 ವರ್ಷದ ಕ್ಯಾನ್ಸರ್ ರೋಗಿಯನ್ನು ಭೇಟಿ ಮಾಡಿ ರಾಮ್ ಚರಣ್ ಕಷ್ಟಸುಖ ವಿಚಾರಿಸಿದ್ದರು. ರಾಮ್ ಚರಣ್ನ ಭೇಟಿ ಮಾಡೋದು ಬಾಲಕನ ಆಸೆ ಆಗಿತ್ತು.
ಇದನ್ನೂ ಓದಿ:
‘ಪುಷ್ಪ 2’ ಸಿನಿಮಾ ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಎರಡನೇ ಪಾರ್ಟ್ಗೆ ಪಾತ್ರವರ್ಗ ಹಿರಿದಾಗುವ ನಿರೀಕ್ಷೆ ಇದೆ. ಚಿತ್ರದ ಬಗ್ಗೆ ಸಾಕಷ್ಟು ಅಂತೆಕಂತೆಗಳು ಹುಟ್ಟಿಕೊಂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ