AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Allu Ramesh Death: ಹೃದಯಾಘಾತದಿಂದ ಹಾಸ್ಯ ನಟ ಅಲ್ಲು ರಮೇಶ್ ನಿಧನ

ಅಲ್ಲು ರಮೇಶ್ ವಿಶಾಖಪಟ್ಟಣದಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದರು. ನಂತರ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅನೇಕ ತೆಲುಗು ಸಿನಿಮಾಗಳಲ್ಲಿ ಹಾಸ್ಯನಟನ ಪಾತ್ರವನ್ನು ನಿರ್ವಹಿಸಿದರು.

Allu Ramesh Death: ಹೃದಯಾಘಾತದಿಂದ ಹಾಸ್ಯ ನಟ ಅಲ್ಲು ರಮೇಶ್ ನಿಧನ
ಅಲ್ಲು ರಮೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 19, 2023 | 7:03 AM

ಇತ್ತೀಚೆಗೆ ಚಿತ್ರರಂಗಕ್ಕೆ ಒಂದಾದ ಮೇಲೆ ಒಂದರಂತೆ ಶಾಕಿಂಗ್ ಸುದ್ದಿ ಸಿಗುತ್ತಲೇ ಇದೆ. ಅನೇಕರನ್ನು ಚಿತ್ರರಂಗ ಕಳೆದುಕೊಂಡಿದೆ. ಇದರಲ್ಲಿ ಬಹುತೇಕರು ಮೃತಪಟ್ಟಿದ್ದು ಹೃದಯಾಘಾತದಿಂದ. ಈಗ ತೆಲುಗಿನ ಹಾಸ್ಯ ನಟ ಅಲ್ಲು ರಮೇಶ್ (Allu Ramesh) ನಿಧನರಾಗಿದ್ದಾರೆ. ಅವರು ಮಂಗಳವಾರ ವಿಶಾಖಪಟ್ಟಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ನಿಧನ ವಾರ್ತೆಯನ್ನು ಕುಟುಂಬದವರು ಖಚಿತಪಡಿಸಿದ್ದಾರೆ. ರಮೇಶ್ ಅವರ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬದವರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಅಲ್ಲು ರಮೇಶ್ ಹಲವು ವೆಬ್ ಸಿರೀಸ್ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ ‘ನೆಪೋಲಿಯನ್’ ಚಿತ್ರದಲ್ಲಿ ನಟಿಸಿದ್ದರು. ‘ಮಧುರಾ ವೈನ್ಸ್’ ‘ರಾವಣ ದೇಶಂ’ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಅನೇಕರಿಗೆ ಮಾರ್ಗದರ್ಶಕರಂತಿದ್ದ ಅವರನ್ನು ಚಿತ್ರರಂಗ ಈಗ ಕಳೆದುಕೊಂಡಿದ್ದು ನಿಜಕ್ಕೂ ದುಃಖಕರ ವಿಚಾರ.

ಅಲ್ಲು ರಮೇಶ್ ವಿಶಾಖಪಟ್ಟಣದಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದರು. ನಂತರ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅನೇಕ ತೆಲುಗು ಸಿನಿಮಾಗಳಲ್ಲಿ ಹಾಸ್ಯನಟನ ಪಾತ್ರವನ್ನು ನಿರ್ವಹಿಸಿದರು. ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ‘ಮಾ ವಿದಾಕುಲು’ (ನಮ್ಮ ವಿಚ್ಛೇದನ) ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಅವರು ಹೆಚ್ಚು ಗುರುತಿಸಿಕೊಂಡರು. ಟಾಲಿವುಡ್ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದರೂ ತಮ್ಮ ವಿಶಿಷ್ಟ ನಟನೆ ಮೂಲಕ ಅವರು ಗಮನ ಸೆಳೆದಿದ್ದರು.

ಇದನ್ನೂ ಓದಿ:  ಅಲ್ಲು ಅರ್ಜುನ್​​ಗೆ ಜನ್ಮದಿನ; ಅಭಿಮಾನಿಗಳಿಗೆ ಸಿಕ್ತು ಎರಡೆರಡು ಗಿಫ್ಟ್

ಅಲ್ಲು ರಮೇಶ್​ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಲ್ಲು ರಮೇಶ್ ಸಾವಿಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ‘ಮೊದಲ ದಿನದಿಂದ ನೀವು ನನ್ನ ದೊಡ್ಡ ಬೆಂಬಲವಾಗಿ ನಿಂತಿದ್ದೀರಿ. ನನ್ನ ತಲೆಯಲ್ಲಿ ಇನ್ನೂ ನಿಮ್ಮ ಧ್ವನಿ ಕೇಳುತ್ತಿದೆ. ರಮೇಶ್ ಅವರೇ, ನಿಮ್ಮ ನಿಧನವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ನನ್ನಂತೆಯೇ ಅನೇಕ ಹೃದಯಗಳನ್ನು ಮುಟ್ಟಿದ್ದೀರಿ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ಓಂ ಶಾಂತಿ’ ಎಂದು ಆನಂದ್ ರವಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ