ಅಲ್ಲು ಸಿರಿಶ್ ಅದ್ದೂರಿ ನಿಶ್ಚಿತಾರ್ಥದ ಪ್ಲ್ಯಾನ್ಗೆ ಮಳೆ ಅಡ್ಡಿ; ಬೇಸರ ಹೊರಹಾಕಿದ ನಟ
ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಶ್ ಅವರ ನಿಶ್ಚಿತಾರ್ಥದ ಯೋಜನೆಗಳಿಗೆ ಮೊಂತಾ ಚಂಡಮಾರುತ ಅಡ್ಡಿಯಾಗಿದೆ. ಹೊರಾಂಗಣದಲ್ಲಿ ಅದ್ದೂರಿಯಾಗಿ ನಡೆಯಬೇಕಿದ್ದ ಕಾರ್ಯಕ್ರಮ ಮಳೆಯ ಕಾರಣ ರದ್ದಾಗಿದೆ. ಹಾಗಂತ ನಿಶ್ಚಿತಾರ್ಥ ನಿಲ್ಲುತ್ತಿಲ್ಲ. ಈ ಕಾರ್ಯಕ್ರಮ ಒಳಾಂಗಣಕ್ಕೆ ಸ್ಥಳಾಂತರಗೊಂಡಿದೆ. ಹೈದರಾಬಾದ್ ಮೂಲದ ಉದ್ಯಮಿ ಪುತ್ರಿ ನಯನಿಕಾ ಜೊತೆ ಸಿರಿಶ್ ವಿವಾಹ ನಿಶ್ಚಯವಾಗಿದೆ.

ಸದ್ಯ ಎಲ್ಲೆಲ್ಲೂ ಮೊಂತಾ ಚಂಡಮಾರುತದ ಅಬ್ಬರ ಶುರುವಾಗಿದೆ. ಅದರಲ್ಲೂ ಆಂಧ್ರ ಪ್ರದೇಶ ಭಾಗದಲ್ಲಿ ಇದರ ಅಬ್ಬರ ಜೋರಾಗಿದೆ. ಈ ಚಂಡಮಾರುತದಿಂದ ಸಾಕಷ್ಟು ಹಾನಿ ಆಗಿರುವ ಬಗ್ಗೆ ನೀವು ಕೇಳಿರಬಹುದು. ಇದರಿಂದ ಖ್ಯಾತ ನಟ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರಿಶ್ (Allu Sirish) ನಿಶ್ಚಿತಾರ್ಥಕ್ಕೂ ಅಡ್ಡಿ ಉಂಟಾಗಿದೆ ಎಂಬುದು ಬೇಸರದ ವಿಚಾರ. ಈ ಬಗ್ಗೆ ಅಲ್ಲು ಸಿರಿಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಲ್ಲು ಅರ್ಜುನ್ ಕುಟುಂಬವು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಖ್ಯಾತ ನಿರ್ಮಾಪಕರು. ಅಲ್ಲು ಅರ್ಜುನ್ ಅವರ ಬಗ್ಗೆ ಹೊಸದಾಗಿ ನಿಮಗೆ ಹೇಳಬೇಕಾಗಿಲ್ಲ. ಇನ್ನು ಅಲ್ಲು ಸಿರಿಶ್ ಅವರು ಅಷ್ಟಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿಲ್ಲ. ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಆದರೆ, ಇವರ ಕುಟುಂಬದಲ್ಲಿ ಶ್ರೀಮಂತಿಕೆಗೆ ಏನೂ ಕಡಿಮೆ ಇಲ್ಲ. ಹೀಗಾಗಿ, ಅದ್ದೂರಿ ನಿಶ್ಚಿತಾರ್ಥ ಮಾಡಿಕೊಳ್ಳಲು ಇವರು ಪ್ಲ್ಯಾನ್ ರೂಪಿಸಿದ್ದರು. ಆದರೆ, ಪ್ಲ್ಯಾನ್ ಫ್ಲಾಪ್ ಆಗಿದೆ.
ಇತ್ತೀಚೆಗೆ ಅಲ್ಲು ಸಿರಿಶ್ ಅವರು ತಮ್ಮ ಎಂಗೇಜ್ಮೆಂಟ್ ಬಗ್ಗೆ ಮಾಹಿತಿ ನೀಡಿದ್ದರು. ಹೈದರಾಬಾದ್ ಮೂಲದ ಉದ್ಯಮಿಯೊಬ್ಬರ ಮಗಳ ಜೊತೆ ಸಿರೀಶ್ ಅವರ ವಿವಾಹ ನಿಶ್ಚಯವಾಗಿದೆ ಎನ್ನಲಾಗಿದೆ. ಅವರು ಮದುವೆ ಆಗುತ್ತಿರುವ ಹುಡುಗಿ ಹೆಸರು ನಯನಿಕಾ. ಅಕ್ಟೋಬರ್ 31ರಂದು ಸಿರೀಶ್ ನಿಶ್ಚಿತಾರ್ಥ ನೆರವೇರಬೇಕಿದೆ. ಔಟ್ಡೋರ್ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲು ಪ್ಲ್ಯಾನ್ ನಡೆದಿತ್ತು. ಆದರೆ, ಮಳೆಯಿಂದ ಅದು ಫ್ಲಾಪ್ ಆಗಿದೆ. ಹೀಗಾಗಿ, ಈಗ ಒಳಾಂಗಣದಲ್ಲೇ ಈ ನಿಶ್ಚಿತಾರ್ಥ ನೆರವೇರಲಿದೆ.
‘ನಾವು ಚಳಿಗಾಲದಲ್ಲಿ ಹೊರಾಂಗಣದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳು ಆಲೋಚಿಸಿದ್ದೆವು. ಆದದರೆ, ದೇವರ ಪ್ಲ್ಯಾನ್ ಬೇರೆ ಇತ್ತು’ ಎಂದಿದ್ದಾರೆ ಅವರು. ಎಂಗೇಜ್ಮೆಂಟ್ ಜಾಗದಲ್ಲಿ ಮಾಡಿದ್ದ ತಯಾರಿಯನ್ನು ಬಿಚ್ಚುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದು.
ಇದನ್ನೂ ಓದಿ: ಅಲ್ಲು ಅರ್ಜುನ್ ಮನೆಯಲ್ಲಿ ವಿವಾಹ ಸಂಭ್ರಮ; ಅಲ್ಲು ಸಿರೀಶ್ ಮದುವೆ ಫಿಕ್ಸ್
2013ರಲ್ಲಿ ರಿಲೀಸ್ ಆದ ‘ಗೌರವಮ್’ ಅಲ್ಲು ಸಿರಿಶ್ ಹೀರೀ ಆಗಿ ನಟಿಸಿದ ಮೊದಲ ಸಿನಿಮಾ. ಇದಾದ ಬಳಿಕ ಅವರು ಸಿನಿಮಾ ಆಯ್ಕೆಯಲ್ಲಿ ಸ್ಲೋ ಆದರು. ‘ಎಬಿಸಿಡಿ’ 2019ರಲ್ಲಿ ರಿಲೀಸ್ ಆಯಿತು. ಇದು ಮಲಯಾಳಂನ ಸೂಪರ್ ಹಿಟ್ ಚಿತ್ರ ‘ಎಬಿಸಿಡಿ’ಯ ರಿಮೇಕ್. ಈ ಸಿನಿಮಾ ಒಂದು ಹಂತಕ್ಕೆ ಮೆಚ್ಚುಗೆ ಪಡೆಯಿತು. ಇದಾದ ಬಳಿಕ ಈವರೆಗೆ ಅವರ ಒಂದೇ ಒಂದು ಸಿನಿಮಾ ಕೂಡ ಹಿಟ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







