‘ದೇವರೇ.. ಇದೆಂತಹ ಭರತನಾಟ್ಯ’; ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಅನನ್ಯಾ ಪಾಂಡೆ
ಅನನ್ಯಾ ಪಾಂಡೆ ನಟನೆಯ 'ಚಾಂದ್ ಮೇರಾ ದಿಲ್' ಚಿತ್ರದ ಭರತನಾಟ್ಯ ದೃಶ್ಯ ವೈರಲ್ ಆಗಿದ್ದು, ಭಾರಿ ಟೀಕೆಗೆ ಗುರಿಯಾಗಿದೆ. ಅನನ್ಯಾ ನೃತ್ಯವನ್ನು 'ಸಾಂಸ್ಕೃತಿಕ ಅವಮಾನ' ಎಂದು ನೆಟ್ಟಿಗರು ಟೀಕಿಸಿದ್ದಾರೆ. ಈ ಘಟನೆ ಬಾಲಿವುಡ್‌ನಲ್ಲಿ ನೆಪೋಟಿಸಂ ಕುರಿತು ಹಳೆಯ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಪ್ರತಿಭಾವಂತ ಕಲಾವಿದರಿಗೆ ಅವಕಾಶ ಸಿಗದೆ, ಸ್ಟಾರ್ ಮಕ್ಕಳು ಸುಲಭವಾಗಿ ಅವಕಾಶ ಪಡೆಯುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟನೆಯ ಹಿಂದಿ ಸಿನಿಮಾ ‘ಚಾಂದ್ ಮೇರಾ ದಿಲ್’ ಚಿತ್ರದ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಿನಿಮಾದ ಸ್ಟೇಜ್ ಪರ್ಫಾರ್ಮೆನ್ಸ್ ದೃಶ್ಯವೊಂದರಲ್ಲಿ ಅನನ್ಯಾ ಅವರುಭರತನಾಟ್ಯ ಮಾಡಲು ಪ್ರಯತ್ನಿಸಿದ್ದು, ಅವರ ವಿಚಿತ್ರ ಹಾವಭಾವ ಹಾಗೂ ನೃತ್ಯದ ಶೈಲಿಯನ್ನು ಕಂಡು ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಚಿತ್ರದ ಈ ಕ್ಲಿಪ್ ವೈರಲ್ ಆದಾಗಿನಿಂದಲೂ ನಟಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಭರನಾಟ್ಯಕ್ಕೆ ಅನನ್ಯಾ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
* ಅನನ್ಯಾ ಪಾಂಡೆ ನಟನೆಗೆ ಟೀಕೆ
* ಡಾನ್ಸ್ ವಿಷಯದಲ್ಲಿ ಬಂತು ಹೊಸ ಕೊಂಕು
* ಭರತನಾಟ್ಯ ಹೆಸರಲ್ಲಿ ಚಿತ್ರವಿಚಿತ್ರ ಡ್ಯಾನ್ಸ್
ಅನನ್ಯಾ ನೃತ್ಯವನ್ನು ಅಣಕಿಸಿರುವ ಬಳಕೆದಾರರೊಬ್ಬರು, ‘ಕ್ರಿಸ್ತಪೂರ್ವ 200ರಲ್ಲಿ ವಿಕಸನಗೊಂಡ ಭರತನಾಟ್ಯವು 2026ರಲ್ಲಿ ಅನನ್ಯಾ ಪಾಂಡೆ ಮೂಲಕ ಅಂತ್ಯಗೊಂಡಿತು’ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ‘ಡಿಸೈನರ್ ಲೆಹೆಂಗಾ ಧರಿಸಿ ಭರತನಾಟ್ಯದ ಹೆಸರಿನಲ್ಲಿ ಸಾಂಸ್ಕೃತಿಕ ಅವಮಾನ ಮಾಡಲಾಗಿದೆ. ಕಷ್ಟಪಟ್ಟು ತರಬೇತಿ ಪಡೆಯುವರಿದ್ದಾರೆ. ಅವರಿಗೆ ಮಾಡುವ ಅಪಮಾನ ಇದು.
ಅದನ್ನು ಬಿಟ್ಟುಬಿಡಿ. ಕೇವಲ ನೆಪೋಟಿಸಂ ಬಲದಿಂದ ಬಂದವರು ಇಂತಹ ಪವಿತ್ರ ಕಲೆಗಳನ್ನು ಹಾಳು ಮಾಡಬೇಡಿ’ ಎಂದು ಆಕ್ರೋಶ ಹೊರಹಾಕಿದ್ದಾರೆ. ವೃತ್ತಿಪರ ನೃತ್ಯಗಾರ್ತಿಯಂತೆ ನಟಿಸಲು ಬಾರದಿರುವುದೇ ಈ ಎಲ್ಲ ಟೀಕೆಗಳಿಗೆ ಮುಖ್ಯ ಕಾರಣವಾಗಿದೆ.
ಅನನ್ಯಾ ಪಾಂಡೆ ಡ್ಯಾನ್ಸ್
Bharatnatyam was founded in 200 BCE and ended with Ananya Pandey in 2026. 😭😭😭 pic.twitter.com/EBPwykGddP
— HasnaZarooriHai🇮🇳 (@HasnaZaruriHai) May 24, 2026
ಅನನ್ಯಾ ಪಾಂಡೆ ನಟನೆಯ ವಿಷಯದಲ್ಲಿ ಮೊದಲಿನಿಂದಲೂ ತೀವ್ರ ಟೀಕೆಗೆ ಗುರಿಯಾದವರು. ಹಿರಿಯ ನಟ ಚಂಕಿ ಪಾಂಡೆ ಮಗಳಾಗಿರುವ ಇವರು, ‘ಸ್ಟಾರ್ ಕಿಡ್’ ಎಂಬ ಒಂದೇ ಕಾರಣಕ್ಕೆ ಬಾಲಿವುಡ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾ ಅವಕಾಶಗಳನ್ನು ಸುಲಭವಾಗಿ ಪಡೆದುಕೊಂಡರು. ಆದರೆ, ಇಷ್ಟು ವರ್ಷಗಳಾದರೂ ಅವರು ಸರಿಯಾಗಿ ನಟನೆಯನ್ನು ಕಲಿತಿಲ್ಲ ಹಾಗೂ ಚಿತ್ರರಂಗದಲ್ಲಿ ಗಟ್ಟಿಯಾದ ಯಶಸ್ಸು ಪಡೆಯಲು ಅವರಿಂದ ಸಾಧ್ಯವಾಗಿಲ್ಲ ಎಂಬುದು ನೆಟ್ಟಿಗರ ವಾದ. ಯಾವುದೇ ಹಿನ್ನೆಲೆ ಇಲ್ಲದ ಎಷ್ಟೋ ಪ್ರತಿಭಾವಂತ ನಟರನ್ನು ಬದಿಗೊತ್ತಿ, ಇಂತಹ ಸ್ಟಾರ್ ಕಿಡ್ಸ್‌ಗೆ ಬಾಲಿವುಡ್ ಮಣೆ ಹಾಕುತ್ತಿರುವುದಕ್ಕೆ ಚಿತ್ರಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಸ್ಟೀಲ್ ಪಾತ್ರೆ ಮುಖಕ್ಕೆ ಮೆತ್ತಿಕೊಂಡ ಆರ್ಸಿಬಿ ಮಾಲಕಿ ಅನನ್ಯಾ ಬಿರ್ಲಾ: ಚಿತ್ರಗಳ ನೋಡಿ
ಒಂದೆಡೆ ಚಿತ್ರದ ನೃತ್ಯದ ವಿಡಿಯೋ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದ್ದರೆ, ಇನ್ನೊಂದೆಡೆ ಅನನ್ಯಾ ಪರವಾಗಿಯೂ ಕೆಲವರು ಧ್ವನಿ ಎತ್ತಿದ್ದಾರೆ. ಚಿತ್ರದ ವಿಡಿಯೋ ಕ್ಲಿಪ್ ಅನ್ನು ಈ ರೀತಿ ಲೀಕ್ ಮಾಡಿ ವೈರಲ್ ಮಾಡಿರುವುದನ್ನು ಅವರು ಖಂಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:01 am, Mon, 25 May 26




