ರಶ್ಮಿಕಾ ಮಂದಣ್ಣ ಹೊಸ ಫೋಟೋಶೂಟ್ ಕಂಡು ಅಭಿಮಾನಿಗಳು ಫಿದಾ; ಮಿಲಿಯನ್ ಲೈಕ್ಸ್
ಬಾಡಿಕಾನ್ ಗೌನ್ ಧರಿಸಿ ರಶ್ಮಿಕಾ ಮಂದಣ್ಣ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಫೋಟೋಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. 6 ಸಾವಿರಕ್ಕೂ ಅಧಿಕ ಕಮೆಂಟ್ಗಳನ್ನು ಮಾಡುವ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಗೆಲುವಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಅನಿಮಲ್’ ಸಿನಿಮಾ (Animal Movie) ಸೂಪರ್ ಹಿಟ್ ಆಗಿದೆ. ಬಿಡುಗಡೆಯಾಗಿ 14 ದಿನ ಕಳೆದಿದ್ದರೂ ಕೂಡ ಅನೇಕ ಕಡೆಗಳಲ್ಲಿ ಈಗಲೂ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಮೂರನೇ ವೀಕೆಂಡ್ನಲ್ಲಿ ಮತ್ತೆ ಅಬ್ಬರಿಸುವ ನಿರೀಕ್ಷೆ ಇದೆ. ಇದೇ ಖುಷಿಯಲ್ಲಿ ರಶ್ಮಿಕಾ ಮಂದಣ್ಣ ಅವರು ಹೊಸ ಫೋಟೋಶೂಟ್ (Rashmika Mandanna Photoshoot) ಮಾಡಿಸಿದ್ದಾರೆ. ಅದನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ಹೆಚ್ಚಾಗುತ್ತಿದೆ.
ಚಾಕೋಲೇಟ್ ಬಣ್ಣದ ಬಾಡಿಕಾನ್ ಗೌನ್ ಧರಿಸಿ ರಶ್ಮಿಕಾ ಮಂದಣ್ಣ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಫೋಟೋಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. 6 ಸಾವಿರಕ್ಕೂ ಅಧಿಕ ಕಮೆಂಟ್ಗಳನ್ನು ಮಾಡುವ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಫ್ಯಾನ್ಸ್ ಪೇಜ್ಗಳಲ್ಲಿ ಈ ಫೋಟೋ ವೈರಲ್ ಆಗಿದೆ.
View this post on Instagram
ರಶ್ಮಿಕಾ ಮಂದಣ್ಣ ಅವರಿಗೆ ಫೋಟೋಶೂಟ್ ಬಗ್ಗೆ ವಿಶೇಷ ಕ್ರೇಜ್ ಇದೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಆಗಾಗ ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆಯೇ ಇನ್ಸ್ಟಾಗ್ರಾಮ್ನಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ. ‘ಅನಿಮಲ್’ ಸಿನಿಮಾ ಗೆದ್ದ ಬಳಿಕ ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರುತ್ತಿವೆ.
ಇದನ್ನೂ ಓದಿ: ಈ ‘ಗರ್ಲ್ಫ್ರೆಂಡ್’ ನೀವು ಅಂದುಕೊಂಡಂತೆ ಇಲ್ಲ; ರಶ್ಮಿಕಾ ಮಂದಣ್ಣ ಬಗ್ಗೆ ಇಲ್ಲಿದೆ ಹೊಸ ಸುದ್ದಿ
ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾ ಮಂದಣ್ಣ ಅವರು 4 ಕೋಟಿ ಫಾಲೋವರ್ಸ್ ಪಡೆದಿದ್ದರು. ಕೆಲವೇ ದಿನಗಳಲ್ಲಿ 5 ಲಕ್ಷ ಮಂದಿ ಹೊಸ ಫಾಲೋವರ್ಸ್ ಸೇರ್ಪಡೆ ಆಗಿದ್ದಾರೆ. ‘ಅನಿಮಲ್’ ಸಿನಿಮಾದ ಯಶಸ್ಸು ಇದಕ್ಕೆಲ್ಲ ಕಾರಣ. ಈಗ ‘ಪುಷ್ಪ 2’, ‘ದಿ ಗರ್ಲ್ಫ್ರೆಂಡ್’ ಮುಂತಾದ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.