AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Shetty: ಅನುಷ್ಕಾ ಶೆಟ್ಟಿ ಡೀಪ್​ಫೇಕ್ ಫೋಟೋ ವೈರಲ್; ಕೇಸ್ ದಾಖಲಿಸಿದ ಪಾಲಕರು

ಇತ್ತೀಚೆಗೆ ಅನುಷ್ಕಾ ಶೆಟ್ಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅನುಷ್ಕಾ ಹಾಗೂ ಪ್ರಭಾಸ್ ಮದುವೆಯಾಗಿ ಅವರಿಗೆ ಮಕ್ಕಳು ಇರುವಂಥ ಫೋಟೋಗಳನ್ನು ಸೃಷ್ಟಿ ಮಾಡಲಾಗಿದೆ. ಇದೇ ವಿಚಾರವಾಗಿ ಅನುಷ್ಕಾ ಪೋಷಕರು ಪೊಲೀಸರ ಬಳಿ ದೂರು ದಾಖಲಿಸಲಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

Anushka Shetty: ಅನುಷ್ಕಾ ಶೆಟ್ಟಿ ಡೀಪ್​ಫೇಕ್ ಫೋಟೋ ವೈರಲ್; ಕೇಸ್ ದಾಖಲಿಸಿದ ಪಾಲಕರು
ಪ್ರಭಾಸ್-ಅನುಷ್ಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 02, 2024 | 2:27 PM

Share

ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಟಾಲಿವುಡ್​ನ ಬೇಡಿಕೆಯ ನಟಿ ಆಗಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ‘ಸೂಪರ್’ ಚಿತ್ರದ ಮೂಲಕ ಅನುಷ್ಕಾ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಹಲವು ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದರು. ಕೇವಲ ಸ್ಟಾರ್ ಹೀರೋ ಚಿತ್ರಗಳಲ್ಲಿ ನಾಯಕಿ ಆಗಿ ನಟಿಸುವುದು ಮಾತ್ರವಲ್ಲದೆ ಮಹಿಳಾ ಪ್ರಧಾನ ಸಿನಿಮಾಗಳ ಮೂಲಕವೂ ಅವರು ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಅನುಷ್ಕಾ ಚ್ಯೂಸಿ ಆಗಿದ್ದಾರೆ. ಈಗ ಅವರ ಡೀಪ್​ಫೇಕ್ ಫೋಟೋ ಒಂದು ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿ ಅವರ ಪಾಲಕರು ಕೇಸ್ ಹಾಕಿದ್ದಾರೆ.

ಕಳೆದ ವರ್ಷ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದ ಮೂಲಕ ಅನುಷ್ಕಾಗೆ ಯಶಸ್ಸು ಸಿಕ್ಕಿದೆ. ಈ ನಡುವೆ ಅನುಷ್ಕಾ ಶೆಟ್ಟಿ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಅದಕ್ಕೆ ಕಾರಣ ಡೀಪ್​ಫೇಕ್ ಫೋಟೋ. ಇತ್ತೀಚೆಗೆ ನಾಯಕಿಯರ ಡೀಪ್​ಫೇಕ್ ವಿಡಿಯೋಗಳು ವೈರಲ್ ಆಗುತ್ತಿವೆ. ಆ್ಯಪ್​ಗಳ ಸಹಾಯದಿಂದ ಕೆಲವರು ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ರೆಡಿ ಮಾಡಿ ವೈರಲ್ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಇದಕ್ಕೆ ಪ್ರತಿಕ್ರಿಯಿಸಿದ್ದರು. ಇಂತಹ ಅಶ್ಲೀಲ ವಿಡಿಯೋಗಳನ್ನು ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು. ನಂತರ ತಪ್ಪಿತಸ್ಥನನ್ನು ಬಂಧಿಸಲಾಗಿತ್ತು. ಈಗ ಅನುಷ್ಕಾ ಅವರ ಡೀಪ್​ಫೇಕ್ ಫೋಟೋ ವೈರಲ್ ಆಗಿದೆ.

ಇತ್ತೀಚೆಗೆ ಅನುಷ್ಕಾ ಶೆಟ್ಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅನುಷ್ಕಾ ಹಾಗೂ ಪ್ರಭಾಸ್ ಮದುವೆಯಾಗಿ ಅವರಿಗೆ ಮಕ್ಕಳು ಇರುವಂಥ ಫೋಟೋಗಳನ್ನು ಸೃಷ್ಟಿ ಮಾಡಲಾಗಿದೆ. ಇದೇ ವಿಚಾರವಾಗಿ ಅನುಷ್ಕಾ ಶೆಟ್ಟಿ ಪೋಷಕರು ಪೊಲೀಸರ ಬಳಿ ದೂರು ದಾಖಲಿಸಲಿದ್ದಾರೆ. ಇಂತಹ ಸುಳ್ಳು ಸುದ್ದಿ ಹಾಗೂ ನಕಲಿ ಫೋಟೋಗಳನ್ನು ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಸಿನಿಮಾ ಪ್ರಮೋಷನ್​ನಿಂದ ದೂರ ಇರೋಕೆ ಪ್ರಭಾಸ್ ಕಾರಣ? ಇಲ್ಲಿದೆ ನಿಜಾಂಶ

ಅನುಷ್ಕಾ ಶೆಟ್ಟಿ ಅವರು 2005ರಲ್ಲಿ ರಿಲೀಸ್ ಆದ ‘ಸೂಪರ್’ ಸಿನಿಮಾದಲ್ಲಿ ಸಶಾ ಹೆಸರಿನ ಪಾತ್ರ ಮಾಡಿದ್ದರು. ಇದು ತೆಲುಗು ಸಿನಿಮಾ ಆಗಿತ್ತು. ನಂತರ ಅವರು ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬಾಹುಬಲಿ’ ಸಿನಿಮಾ ಬಳಿಕ ಅವರ ಖ್ಯಾತಿ ಹೆಚ್ಚಾಗಿದೆ. ಸದ್ಯ ಅವರು ಮಲಯಾಳಂ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಮದುವೆ ಆಗಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇವರ ಸಂಬಂಧದ ಕುರಿತು ಹಲವು ವದಂತಿಗಳು ಹಬ್ಬಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ