AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮಿಷ್ಟದ ಒಬ್ಬರಿಗೆ ವೋಟ್ ಮಾಡಿ; ಫಿನಾಲೆಯಲ್ಲಿ ಯಾರನ್ನು ಗೆಲ್ಲಿಸುತ್ತೀರಿ ಅನ್ನೋದು ನಿಮ್ಮ ಕೈಲಿದೆ..

ಆರು ಮಂದಿ ಬಿಗ್ ಬಾಸ್ ಫಿನಾಲೆ ವಾರ ತಲುಪಿದ್ದಾರೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ವಿನಯ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಮಹೇಶ್ ಮಧ್ಯೆ ಸ್ಪರ್ಧೆ ಜೋರಾಗಿದೆ. ಈಗ ವೋಟಿಂಗ್ ಮಾಡೋಕೆ ಬಿಗ್ ಬಾಸ್ ಅವಕಾಶ ನೀಡಿದ್ದಾರೆ.

ನಿಮ್ಮಿಷ್ಟದ ಒಬ್ಬರಿಗೆ ವೋಟ್ ಮಾಡಿ; ಫಿನಾಲೆಯಲ್ಲಿ ಯಾರನ್ನು ಗೆಲ್ಲಿಸುತ್ತೀರಿ ಅನ್ನೋದು ನಿಮ್ಮ ಕೈಲಿದೆ..
ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 23, 2024 | 7:46 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಫಿನಾಲೆ ವಾರ ತಲುಪಿದೆ. ಸದ್ಯ ಇರೋ 6 ಸ್ಪರ್ಧಿಗಳ ಪೈಕಿ ಒಬ್ಬರು ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಆ ಮೂಲಕ ಫಿನಾಲೆಗೆ ಐದು ಜನ ತೆರಳಲಿದ್ದಾರೆ. ಈಗ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್​ನ ಆರೂ ಸ್ಪರ್ಧಿಗಳ ಫೋಟೋ ಹಾಕಲಾಗಿದೆ. ಶನಿವಾರ (ಜನವರಿ 17) ಮಧ್ಯಾಹ್ನ 2 ಗಂಟೆವರೆಗೆ ವೋಟ್ ಮಾಡೋಕೆ ಅವಕಾಶ ಇದೆ. ಜಿಯೋ ಸಿನಿಮಾ ಮೂಲಕ ಮತ ಚಲಾಯಿಸುವ ಹಕ್ಕನ್ನು ಬಿಗ್ ಬಾಸ್ ನೀಡಿದ್ದಾರೆ.

ಕಳೆದ ವಾರ ನಮ್ರತಾ ಗೌಡ ಅವರು ಬಿಗ್ ಬಾಸ್​ನಿಂದ ಎಲಿಮಿನೇಟ್ ಆದರು. ಫಿನಾಲೆ ವಾರ ತಲುಪಬೇಕು ಎನ್ನುವ ಅವರ ಕನಸು ನುಚ್ಚು ನೂರಾಯಿತು. ಈಗ ದೊಡ್ಮನೆಯಲ್ಲಿ ವರ್ತೂರು ಸಂತೋಷ್, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ವಿನಯ್ ಗೌಡ, ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ಇದ್ದಾರೆ. ಜಿಯೋ ಸಿನಿಮಾದಲ್ಲಿ ವೋಟಿಂಗ್ ಲೈನ್ ಆರಂಭಿಸಲಾಗಿದೆ. ಈ ಮೂಲಕ ವೋಟ್ ಮಾಡೋಕೆ ಅವಕಾಶ ನೀಡಲಾಗಿದೆ.

ಕಡಿಮೆ ವೋಟ ಪಡೆದವರ ಪೈಕಿ ಒಬ್ಬರು ನಾಳೆ (ಜನವರಿ 24) ಔಟ್ ಆಗೋ ಸಾಧ್ಯತೆ ಇದೆ. ಈ ಎಲಿಮಿನೇಷನ್ ಹೇಗೆ ನಡೆಯುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಹೀಗಾಗಿ, ಈ ಎಲಿಮಿನೇಷನ್ ಸರ್​ಪ್ರೈಸ್ ಆಗಿರಲಿದೆ ಎನ್ನಲಾಗುತ್ತಿದೆ. ಈ ಮೊದಲ ಎಪಿಸೋಡ್​​ಗಳಲ್ಲಿ ಮಿಡ್ ವೀಕ್ ಎಲಿಮಿನೇಷನ್​ಗಳನ್ನು ಸರ್​ಪ್ರೈಸ್ ಆಗುವ ರೀತಿಯಲ್ಲೇ ನಡೆಸಲಾಗಿದೆ. ಈ ಸೀಸನ್ ಕೂಡ ಹಾಗೆಯೇ ಇರಬಹುದು ಎನ್ನಲಾಗುತ್ತಿದೆ. ಇನ್ನೂ ಕೆಲವರು ಕೇವಲ ವೋಟಿಂಗ್ ಆಧಾರದ ಮೇಲೆ ಎಲಿಮಿನೇಷನ್ ನಡೆಯೋದಿಲ್ಲ ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಎಲಿಮಿನೇಷನ್​ನಲ್ಲಿ ಇರಲಿದೆ ಟ್ವಿಸ್ಟ್; ಯಾವಾಗ ಹೊರ ಹೋಗಲಿದ್ದಾರೆ ಇಬ್ಬರು ಸ್ಪರ್ಧಿಗಳು?

ಸಿಗ್ತಿರೋದೇನು?

ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿ ಬಹುಮಾನ ಮೊತ್ತ. ಇದರ ಜೊತೆ ಅವಾರ್ಡ್. ಮಾರುತಿ ಸುಜುಕಿ ಬ್ರೇಜಾ ಕಾರು ಹಾಗೂ ಇಲೆಕ್ಟ್ರಿಕ್ ಬೈಕ್ ಸಿಗಲಿದೆ. ಯಾರು ಕಪ್ ಗೆಲ್ಲುತ್ತಾರೆ ಅನ್ನೋ ಕುತೂಹಲ ಮೂಡಿದೆ. ಈ ವರ್ಷ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಇದರ ಜೊತೆಗೆ ಜಿಯೋ ಸಿನಿಮಾದಲ್ಲಿ 24 ಗಂಟೆ ಉಚಿತವಾಗಿ ಲೈವ್ ನೋಡೋ ಅವಕಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ