ಓವರ್ ಕಾನ್ಫಿಡೆನ್ಸ್​ನಿಂದ ಸಿಕ್ಕ ಅವಕಾಶ ಕಳೆದುಕೊಂಡ ಗುರೂಜಿ; ಮನೆಯಿಂದ ಹೊರಹೋಗಲು ಇದೂ ಕಾರಣ ಆಗಬಹುದು

‘ಬಿಗ್ ಬಾಸ್’ ಮನೆಗೆ ಆರ್ಯವರ್ಧನ್ ಎಂಟ್ರಿಕೊಟ್ಟಾಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಅವರು ಹೇಳುವ ಸಂಖ್ಯಾಶಾಸ್ತ್ರ ವರ್ಕ್​ ಆಗಲ್ಲ ಎಂಬುದು ಅನೇಕರ ಅಭಿಪ್ರಾಯ. ಈ ಕಾರಣದಿಂದಲೂ ಅವರು ಟ್ರೋಲ್ ಆಗಿದ್ದರು. ಅ

ಓವರ್ ಕಾನ್ಫಿಡೆನ್ಸ್​ನಿಂದ ಸಿಕ್ಕ ಅವಕಾಶ ಕಳೆದುಕೊಂಡ ಗುರೂಜಿ; ಮನೆಯಿಂದ ಹೊರಹೋಗಲು ಇದೂ ಕಾರಣ ಆಗಬಹುದು
ಆರ್ಯವರ್ಧನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 13, 2022 | 9:05 PM

ಆರ್ಯವರ್ಧನ್​ ಗುರೂಜಿ (Aryvardhan Guruji) ಅವರು ಸೈಲೆಂಟ್ ವ್ಯಕ್ತಿಯಾಗಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಯಾರ ತಂಟೆಗೂ ಅಷ್ಟಾಗಿ ಹೋಗುವುದಿಲ್ಲ. ಅವರಿಗೆ ಯಾರೇ ಬೈದರೂ ತಿರುಗಿ ಬೈಯ್ಯೋಕೆ ಹೋಗುವುದಿಲ್ಲ. ಮನೆ ಮಂದಿಯ ಜತೆ ವೈರತ್ವ ಕಟ್ಟಿಕೊಳ್ಳುವುದು ಎಂದರೆ ಅವರಿಗೆ ಇಷ್ಟ ಆಗುವುದಿಲ್ಲ. ಆದರೆ, ಎಲ್ಲರಿಗಿಂತ ಮನೆಯಲ್ಲಿ ತಾವು ಬುದ್ಧಿವಂತರು ಎಂಬುದನ್ನು ಸಾಬೀತು ಮಾಡಿದ್ದಾರೆ. ಇದರಿಂದ ಅವರಿಗೆ ಓವರ್​ ಕಾನ್ಫಿಡೆನ್ಸ್​ ಬಂದಿದೆ. ಇದರಿಂದ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

‘ಬಿಗ್ ಬಾಸ್’ ಮನೆಗೆ ಆರ್ಯವರ್ಧನ್ ಎಂಟ್ರಿಕೊಟ್ಟಾಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಅವರು ಹೇಳುವ ಸಂಖ್ಯಾಶಾಸ್ತ್ರ ವರ್ಕ್​ ಆಗಲ್ಲ ಎಂಬುದು ಅನೇಕರ ಅಭಿಪ್ರಾಯ. ಈ ಕಾರಣದಿಂದಲೂ ಅವರು ಟ್ರೋಲ್ ಆಗಿದ್ದರು. ಅವರು ಮನೆ ಒಳಗೆ ಬಂದಾಗ ಬೇರೆಯದೇ ಮುಖ ಅನಾವರಣ ಆಯ್ತು. ಅವರ ಮುಗ್ಧ ಮುಖವನ್ನು ಜನರು ನೋಡಿದರು. ಇದರ ಜತೆಗೆ ಅವರು ಎಷ್ಟು ಬ್ರಿಲಿಯಂಟ್ ಎಂಬುದೂ ಗೊತ್ತಾಗಿದೆ.

‘ಬಿಗ್ ಬಾಸ್​ ಒಟಿಟಿ’ ಫಿನಾಲೆ ವೀಕ್​ನಲ್ಲಿ ಹಲವು ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಮೊದಲ ಟಾಸ್ಕ್​​ ಗೆದ್ದ ಗುರೂಜಿ ಅವರು ಪ್ರತಿ ಸ್ಪರ್ಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸ್ವಿಮ್ಮಿಂಗ್​ಪೂಲ್ ಟಾಸ್ಕ್ ಬಂದಿದ್ದರಿಂದ ಗುರೂಜಿ ಅವರು ಪ್ರತಿಸ್ಪರ್ಧಿಯಾಗಿ ಸೋಮಣ್ಣ ಅವರನ್ನು ಸೆಲೆಕ್ಟ್ ಮಾಡಿದರು. ಸೋಮಣ್ಣಗೆ ಈಜುಕೊಳದಲ್ಲಿ ಹೆಚ್ಚು ಸಮಯ ಇರೋಕೆ ಆಗುವುದಿಲ್ಲ. ಈ ಕಾರಣದಿಂದಲೇ ಗುರೂಜಿ ಅವರು ಸೋಮಣ್ಣ ಅವರನ್ನು ಪ್ರತಿಸ್ಪರ್ಧಿಯಾಗಿ ಆಯ್ಕೆ ಮಾಡಿದರು ಮತ್ತು ಈ ಆಟ ಗೆದ್ದರು. ನಂತರದ ಆಟದಲ್ಲಿ ಎದುರಾಳಿಯಾಗಿ ಜಯಶ್ರೀಯನ್ನು ಆಯ್ಕೆ ಮಾಡಿಕೊಂಡರು ಗುರೂಜಿ. ಆ ಆಟ ಕೂಡ ಗೆದ್ದರು. ಆರ್ಯವರ್ಧನ್ ಸ್ಮಾರ್ಟ್​​ನೆಸ್​ನೋಡಿ ಮನೆ ಮಂದಿ ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

ಇದನ್ನೂ ಓದಿ: ‘ಕಳ್ಳ ಸ್ವಾಮೀಜಿ ಎನ್ನಬೇಕೆ?’ ಎಂದ ಸೋನು; ಆರ್ಯವರ್ಧನ್​ ಗುರೂಜಿ ತಿರುಗೇಟಿಗೆ ವೈರಲ್ ಹುಡುಗಿ ಗಪ್​ಚುಪ್​​

ಈ ವಿಚಾರದಿಂದ ಆರ್ಯವರ್ಧನ್ ಅವರಿಗೆ ಓವರ್ ಕಾನ್ಫಿಡೆನ್ಸ್ ಬಂದಿತ್ತು. ಹೀಗಾಗಿ, ಮತ್ತೊಂದು ಗೇಮ್​ನಲ್ಲಿ ಫೌಲ್ ಮಾಡಿ ಆಟ ಸೋತಿದ್ದಾರೆ. ಈ ಕಾರಣಕ್ಕೆ ಅವರು ಆಟದಿಂದ ಹೊರಹೋಗಬೇಕಾಯಿತು. ಗುರೂಜಿ ಆಟದಲ್ಲಿ ಗೆದ್ದಾಗ ಒಂದು ರೀತಿ ಇರುತ್ತಾರೆ ಹಾಗೂ ಸೋತಾಗ ಒಂದು ರೀತಿ ಆಡುತ್ತಾರೆ ಎಂದು ಅನೇಕರು ಹೇಳಿದ್ದಾರೆ. ಇದೇ ವಿಚಾರದಿಂದ ಅವರು ಎಲಿಮಿನೇಟ್ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ