ಇನ್ಮೇಲೆ ಆಲಿಯಾ ಭಟ್ ಎಂದು ಕರೆಯುವಂತಿಲ್ಲ; ಹೆಸರು ಬದಲಿಸಿಕೊಂಡ ನಟಿ
Alia Bhatt: ಆಲಿಯಾ ಭಟ್ ತಮ್ಮ ಹೆಸರನ್ನು ಆಲಿಯಾ ಕಪೂರ್ ಎಂದು ಬದಲಿಸಿಕೊಂಡಿದ್ದಾರೆ. ಇದು ಅವರ ವಿವಾಹದ ನಂತರದ ಬೆಳವಣಿಗೆಯಾಗಿದೆ. ಹೋಟೆಲ್‌ನಲ್ಲಿ ಅವರ ಹೆಸರು ಆಲಿಯಾ ಕಪೂರ್ ಎಂದು ಬರೆಯಲ್ಪಟ್ಟಿರುವುದು ಇದಕ್ಕೆ ಪುರಾವೆಯಾಗಿದೆ. ಆದರೆ, ಅಭಿಮಾನಿಗಳು ಈ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ನಟಿ ಆಲಿಯಾ ಭಟ್ (Alia Bhatt) ಎಂದರೆ ಬಹುತೇಕರಿಗೆ ಗೊತ್ತಾಗುತ್ತದೆ. ಅವರ ಪರಿಚಯ ಬಹುತೇಕರಿಗೆ ಇದೆ. ಈಗ ಅವರು ಹೆಸರು ಬದಲಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದ ಬಳಿಕ ಅವರು ಹೆಸರನ್ನು ಬದಲಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ಆಲಿಯಾ ಅನ್ನೋದು ಹಾಗೆಯೇ ಇದೆ. ಆದರೆ, ಭಟ್ ಬದಲು ಅವರು ಕಪೂರ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಆಲಿಯಾ ಭಟ್ ಎಂದೇ ಇರಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.
ಆಲಿಯಾ ಭಟ್ ಅವರು ವಿವಾಹ ಆಗಿದ್ದು ಕಪೂರ್ ಕುಟುಂಬದ ಕುಡಿ ರಣಬೀರ್ನ. ವಿವಾಹದ ಬಳಿಕವೂ ಅವರನ್ನು ಆಲಿಯಾ ಭಟ್ ಎಂದೇ ಕರೆಯಲಾಗುತ್ತಿದೆ. ಈ ಮೊದಲು ಬಚ್ಚನ್ ಕುಟುಂಬ ಸೇರಿದ ಐಶ್ವರ್ಯಾ ರೈ ಅವರನ್ನು ಐಶ್ವರ್ಯಾ ರೈ ಬಚ್ಚನ್ ಎಂದು ಕರೆಯಲಾಗಿದೆ. ಕರೀನಾ ಕಪೂರ್ ಅವರನ್ನು ಕರೀನಾ ಕಪೂರ್ ಖಾನ್ ಎಂದು ಕರೆಯಲಾಗಿದೆ. ಆದರೆ, ಆಲಿಯಾನ ಎಂದಿಗೂ ಆಲಿಯಾ ಭಟ್ ಕಪೂರ್ ಎಂದು ಕರೆಯಲಾಗಿಲ್ಲ. ಆದರೆ, ಈಗ ಅವರು ಇದನ್ನು ಅಧಿಕೃತ ಮಾಡಿಕೊಂಡಂತಿದೆ.
ಆಲಿಯಾ ಭಟ್ ಅವರು ವ್ಲಾಗ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಹೋಟೆಲ್ ರೂಂನ ದೃಶ್ಯ ಕೂಡ ಇದೆ. ಹೋಟೆಲ್‌ನಲ್ಲಿ ‘ಆಲಿಯಾ ಕಪೂರ್’ ಎಂದು ಬರೆಯಲಾಗಿದೆ. ಹೀಗಾಗಿ, ಆಲಿಯಾ ಭಟ್ ಅವರು ಅಧಿಕೃತವಾಗಿ ಹೆಸರು ಬದಲಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಈ ಪೋಸ್ಟ್ಗೆ ನಾನಾ ಕಮೆಂಟ್ಗಳು ಬಂದಿವೆ. ಕೆಲವರು ‘ಅವರು ನನಗೆ ಯಾವಾಗಲೂ ಆಲಿಯಾ ಭಟ್. ಇದೇ ಬ್ರ್ಯಾಂಡ್. ಅವರ ಹೆಸರನ್ನು ಯಾರೂ ಬದಲಿಸಲು ಸಾಧ್ಯವಿಲ್ಲ’ ಎಂದು ಕೆಲವರು ಹೇಳಿದ್ದಾರೆ. ‘ಆಲಿಯಾ ಕಪೂರ್ ಎಂದು ಕರೆಯಲು ಮನಸ್ಸೇ ಬರುತ್ತಿಲ್ಲ. ದಯವಿಟ್ಟು ಆಲಿಯಾ ಭಟ್ ಎಂದೇ ಇಟ್ಟುಕೊಳ್ಳಿ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಇದು ಹೋಟೆಲ್ನವರ ತಪ್ಪಿರಬಹುದು ಎಂದು ಊಹಿಸಿದ್ದಾರೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ದಕ್ಷಿಣದ ನಟನ ಬಗ್ಗೆ ಆಲಿಯಾ ಭಟ್ ಮಾತು
ಆಲಿಯಾ ಕಪೂರ್ ಕುಟುಂಬದವರನ್ನು ವಿವಾಹ ಆಗಿದ್ದಾರೆ. ಈ ಕಾರಣದಿಂದಲೇ ಆಲಿಯಾ ಕಪೂರ್ ಎಂದು ಹೋಟೆಲ್ನವರು ಬದಲಿಸಿರಬಹುದು ಎಂಬುದು ಕೆಲವರ ಊಹೆ. ಸದ್ಯ ಆಲಿಯಾ ಅವರು ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಸಿನಿಮಾಗಳನ್ನು ಕೂಡ ಮಾಡುತ್ತಿದ್ದಾರೆ. ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಅವರು ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:27 am, Thu, 12 June 25







