AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಯಾವುದಕ್ಕೂ ಕೇರ್ ಮಾಡಲ್ಲ: ಪಾಕಿಸ್ತಾನಿ ಕಲಾವಿದರ ಬಗ್ಗೆ ಅರಿಜಿತ್ ಸಿಂಗ್ ಹೇಳಿಕೆ

Arijit Singh songs: ಅದ್ಭುತವಾದ ಕಂಠ ಹೊಂದಿರುವ, ಆದರೆ ತಮ್ಮ ಸರಳತೆ, ವಿನಯತೆಯಿಂದಲೂ ಜನಪ್ರಿಯತೆಗಳಿಸಿರುವ ಅರಿಜಿತ್ ಸಿಂಗ್, ಕೆಲ ತಿಂಗಳ ಹಿಂದಷ್ಟೆ ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ಹಿನ್ನೆಲೆ ಗಾಯನ ಮಾಡುವುದಿಲ್ಲ ಎಂದು ಘೋಷಿಸಿದ್ದರು. ಆದರೆ ಕಾನ್ಸರ್ಟ್​​ಗಳನ್ನು ಮುಂದುವರೆಸುವುದಾಗಿ ಹೇಳಿದ್ದರು. ಇದೀಗ ಅಬುದಾಬಿಯಲ್ಲಿ ಲೈವ್ ಕಾನ್ಸರ್ಟ್ ನೀಡಿರುವ ಅರಿಜಿತ್ ಸಿಂಗ್ ಪಾಕ್ ಗಾಯಕರ ಬಗ್ಗೆ ಮಾತನಾಡಿರುವುದು ಸಖತ್ ವೈರಲ್ ಆಗಿದೆ.

‘ನಾನು ಯಾವುದಕ್ಕೂ ಕೇರ್ ಮಾಡಲ್ಲ: ಪಾಕಿಸ್ತಾನಿ ಕಲಾವಿದರ ಬಗ್ಗೆ ಅರಿಜಿತ್ ಸಿಂಗ್ ಹೇಳಿಕೆ
Arijit Singh
ಮಂಜುನಾಥ ಸಿ.
|

Updated on: May 26, 2026 | 5:19 PM

Share

ಅರಿಜಿತ್ ಸಿಂಗ್ (Arijit Singh) ಭಾರತದ ಟಾಪ್ ಗಾಯಕ. ಸ್ಪಾಟಿಫೈನಲ್ಲಿ ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಅತಿ ಹೆಚ್ಚು ಫಾಲೋವರ್​​ಗಳನ್ನು ಹೊಂದಿರುವ ಗಾಯಕ ಅರಿಜಿತ್. ಅದ್ಭುತವಾದ ಕಂಠ ಹೊಂದಿರುವ, ಆದರೆ ತಮ್ಮ ಸರಳತೆ, ವಿನಯತೆಯಿಂದಲೂ ಜನಪ್ರಿಯತೆಗಳಿಸಿರುವ ಅರಿಜಿತ್ ಸಿಂಗ್, ಕೆಲ ತಿಂಗಳ ಹಿಂದಷ್ಟೆ ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ಹಿನ್ನೆಲೆ ಗಾಯನ ಮಾಡುವುದಿಲ್ಲ ಎಂದು ಘೋಷಿಸಿದ್ದರು. ಆದರೆ ಕಾನ್ಸರ್ಟ್​​ಗಳನ್ನು ಮುಂದುವರೆಸುವುದಾಗಿ ಹೇಳಿದ್ದರು. ಇದೀಗ ಅಬುದಾಬಿಯಲ್ಲಿ ಲೈವ್ ಕಾನ್ಸರ್ಟ್ ನೀಡಿರುವ ಅರಿಜಿತ್ ಸಿಂಗ್ ಪಾಕ್ ಗಾಯಕರ ಬಗ್ಗೆ ಮಾತನಾಡಿರುವುದು ಸಖತ್ ವೈರಲ್ ಆಗಿದೆ.

ಭಾರತ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಗಾಯಕ ಅರಿಜಿತ್ ಸಿಂಗ್, ಅಬುದಾಬಿ ಕಾನ್ಸರ್ಟ್​​ನಲ್ಲಿ ‘ಪೆಹಲಿ ನಜರ್ ಮೇ’ ಹಾಡು ಹಾಡಿದರು. ಅಸಲಿಗೆ ಆ ಹಾಡು ಪಾಕಿಸ್ತಾನಿ ಗಾಯಕ ಅತೀಪ್ ಅಸ್ಲಂ ಹಾಡಿದ್ದ ಹಾಡಾಗಿತ್ತು. ಬಳಿಕ ಮಾತನಾಡಿದ ಅರಿಜಿತ್ ಸಿಂಗ್, ‘ಭಾರತದಲ್ಲಿ ಏನಾಗುತ್ತಿದೆ, ಪಾಕಿಸ್ತಾನಿ ಹಾಡುಗಾರರ ಮೇಲೆ ನಿಷೇಧ ಹೇರಲಾಗಿದೆಯೇ?, ಇದು ಸರಿಯೇ?’ ಎಂದು ಪ್ರಶ್ನೆ ಮಾಡಿದರು. ಬಳಿಕ ‘ನಾನು ಇಂಥಹಾ ವಿವಾದಕ್ಕೆಲ್ಲ ಕೇರ್ ಮಾಡುವವನಲ್ಲ’ ಎಂದ ಅರಿಜಿತ್ ಸಿಂಗ್, ‘ನಾನಂತೂ ಆತಿಫ್ ಅಸ್ಲಂ ಮತ್ತು ಶಫ್ಕತ್ ಅಮಾನತ್ ಅವರುಗಳ ಫ್ಯಾನ್’ ಎಂದರು.

ಇದನ್ನೂ ಓದಿ:ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?

ಅರಿಜಿತ್ ಹೇಳಿದ ಆತಿಫ್ ಅಸ್ಲಂ ಮತ್ತು ಶಫ್ಕತ್ ಅಮಾನತ್ ಇಬ್ಬರೂ ಸಹ ಪಾಕಿಸ್ತಾನಿ ಗಾಯಕರಾಗಿದ್ದು, ಅತೀಫ್ ಅಸ್ಲಂ ಅಂತೂ ಹಿಂದಿ ಸಿನಿಮಾಗಳಲ್ಲಿ ಹಲವಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ದಶಕಗಳಿಂದಲೂ ಪಾಕಿಸ್ತಾನದ ಹಲವಾರು ಗಾಯಕರುಗಳು ಹಿಂದಿ ಸಿನಿಮಾಗಳಲ್ಲಿ ಹಾಡುತ್ತಾ, ಸಂಗೀತ ನೀಡುತ್ತಾ ಬಂದಿದ್ದಾರೆ. ಪಾಕಿಸ್ತಾನಿ ಹಾಡುಗಳನ್ನು ಹಿಂದಿಗೆ ರೀಮೇಕ್ ಮಾಡುತ್ತಾ ಬರುತ್ತಿದ್ದಾರೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಬಿಗಡಾಯಿಸಿದ್ದು, ಎರಡೂ ದೇಶಗಳ ಕಲಾವಿದರು ಪರಸ್ಪರರ ದೇಶಗಳಲ್ಲಿ ಕೆಲಸ ಮಾಡದಂಥಹಾ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ ಅರಿಜಿತ್ ಸಿಂಗ್ ಅವರು ಇದೀಗ ಇದರ ವಿರುದ್ಧ ದನಿ ಎತ್ತಿದ್ದಾರೆ.

ಅರಿಜಿತ್ ಸಿಂಗ್, ಭಾರತದ ಟಾಪ್ ಗಾಯಕರಾಗಿದ್ದಾರೆ. ಹಲವರಿಗೆ ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನ ಹಾಗೂ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇತ್ತೀಚೆಗೆ ಅವರು ಸಿನಿಮಾ ಹಿನ್ನೆಲೆ ಗಾಯನದಿಂದ ನಿವೃತ್ತಿ ಹೊಂದಿದ್ದಾರೆ. ಸಿನಿಮಾ ಹಿನ್ನೆಲೆ ಗಾಯನ ತಮಗೆ ಆನಂದ ನೀಡುತ್ತಿಲ್ಲ, ನನ್ನ ಗಾಯನ ಪ್ರತಿಭೆಗೆ ಸವಾಲು ಹಾಕುತ್ತಿಲ್ಲ ಎಂಬ ಕಾರಣಕ್ಕೆ ಗಾಯನದಿಂದ ನಿವೃತ್ತಿ ಪಡೆದಿರುವ ಅವರು ಲೈವ್ ಕಾನ್ಸರ್ಟ್​​ಗಳನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ
ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ಮೇಲ್ ತಂತ್ರ ಗೊತ್ತಾಗಿದೆ: ಯತ್ನಾಳ್
ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ಮೇಲ್ ತಂತ್ರ ಗೊತ್ತಾಗಿದೆ: ಯತ್ನಾಳ್
ಗುರು ಸಂಚಾರ ಧನುಸ್ಸು ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಧನುಸ್ಸು ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಮುಸ್ಲಿಮರಿಂದ ಪ್ರತಿಭಟನೆ
ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಮುಸ್ಲಿಮರಿಂದ ಪ್ರತಿಭಟನೆ
ಗುರು ಸಂಚಾರದಿಂದ ಈ ಒಂದು ರಾಶಿಗೆ ಡಬಲ್ ಧಮಾಕ!
ಗುರು ಸಂಚಾರದಿಂದ ಈ ಒಂದು ರಾಶಿಗೆ ಡಬಲ್ ಧಮಾಕ!
ಪರಮೇಶ್ವರ್ ಸಿಎಂ ಆಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ!
ಪರಮೇಶ್ವರ್ ಸಿಎಂ ಆಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ!
ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ಸಭೆಯ ಕಾರಣ ಇನ್ನೂ ನಿಗೂಢ!
ಡಿಕೆಶಿ, ಸಿದ್ದರಾಮಯ್ಯ ಜೊತೆ ಹೈಕಮಾಂಡ್​​ ಸಭೆಯ ಕಾರಣ ಇನ್ನೂ ನಿಗೂಢ!
ರಾಜ್ಯದ ಜನತೆಗೆ ಸುಪ್ರೀಂ ಕೋರ್ಟ್‌ನಿಂದ ಸಿಕ್ತು ಬಂಪರ್ ಗುಡ್ ನ್ಯೂಸ್
ರಾಜ್ಯದ ಜನತೆಗೆ ಸುಪ್ರೀಂ ಕೋರ್ಟ್‌ನಿಂದ ಸಿಕ್ತು ಬಂಪರ್ ಗುಡ್ ನ್ಯೂಸ್