ಎಕ್ಸ್ ಬಾಯ್​ಫ್ರೆಂಡ್​ ಜತೆ ಮತ್ತೆ ಹುಟ್ಟಿತು ಪ್ರೀತಿ; ಪ್ರಿಯಕರನ ಫೋಟೋ ಪೋಸ್ಟ್ ಮಾಡಿದ ಜಾನ್ವಿ ಕಪೂರ್?

ಜಾನ್ವಿ ಅವರು ಅಕ್ಷತ್ ರಾಜನ್​ ಜತೆ ರಿಲೇಶನ್​ಶಿಪ್​ನಲ್ಲಿದ್ದರು ಎನ್ನಲಾಗಿತ್ತು. ಇಬ್ಬರೂ ಬಾಲ್ಯದ ಗೆಳೆಯರು. ಇವರ ಮಧ್ಯೆ ಪ್ರೀತಿ ಚಿಗುರಿತ್ತು. ಅನೇಕ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ.

ಎಕ್ಸ್ ಬಾಯ್​ಫ್ರೆಂಡ್​ ಜತೆ ಮತ್ತೆ ಹುಟ್ಟಿತು ಪ್ರೀತಿ; ಪ್ರಿಯಕರನ ಫೋಟೋ ಪೋಸ್ಟ್ ಮಾಡಿದ ಜಾನ್ವಿ ಕಪೂರ್?
ಅಕ್ಷತ್-ಜಾನ್ವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 16, 2022 | 10:11 AM

ನಟಿ ಜಾನ್ವಿ ಕಪೂರ್ (Janhvi Kapoor) ಅವರು ಬಾಲಿವುಡ್​ನಲ್ಲಿ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮೊದಲ ಸಿನಿಮಾ ‘ಧಡಕ್​’ ಚಿತ್ರ (Dhadak Movie) ಸಾಧಾರಣ ಯಶಸ್ಸು ಕಂಡಿದ್ದು ಹೊರತುಪಡಿಸಿ ಅವರ ಬೇರೆ ಯಾವುದೇ ಸಿನಿಮಾ ಹೇಳಿಕೊಳ್ಳುವಂತಹ ಗೆಲುವು ಕಂಡಿಲ್ಲ. ಸಿನಿಮಾ ಗೆಲ್ಲದೇ ಇರುವುದಕ್ಕೆ ಅನೇಕರು ಜಾನ್ವಿ ಅವರನ್ನು ದೂರಿದ್ದೂ ಇದೆ. ಇನ್ನು ರಿಲೇಶನ್​ಶಿಪ್​ ಸ್ಟೇಟಸ್ ವಿಚಾರದಲ್ಲಿ ಜಾನ್ವಿ ಗುಟ್ಟು ಕಾಯ್ದುಕೊಂಡಿದ್ದಾರೆ. ಆದರೆ, ಈಗ ಅವರು ಪೋಸ್ಟ್ ಮಾಡಿರುವ ಹೊಸ ಫೋಟೋ ಸಾಕಷ್ಟು ಗಮನ ಸೆಳೆಯುತ್ತಿದೆ. ಎಕ್ಸ್ ಬಾಯ್​ಫ್ರೆಂಡ್ ಫೋಟೋ ಪೋಸ್ಟ್ ಮಾಡಿರುವ ಜಾನ್ವಿ, ಲವ್​ ​ಯೂ ಎಂದಿದ್ದಾರೆ.

ಜಾನ್ವಿ ಅವರು ಅಕ್ಷತ್ ರಾಜನ್​ ಜತೆ ರಿಲೇಶನ್​ಶಿಪ್​ನಲ್ಲಿದ್ದರು ಎನ್ನಲಾಗಿತ್ತು. ಇಬ್ಬರೂ ಬಾಲ್ಯದ ಗೆಳೆಯರು. ಇವರ ಮಧ್ಯೆ ಪ್ರೀತಿ ಚಿಗುರಿತ್ತು. ಅನೇಕ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಆದರೆ, ಬಳಿಕ ಜಾನ್ವಿ ಹಾಗೂ ಅಕ್ಷತ್ ಬೇರೆ ಆದರು. ಈಗ ಅಚ್ಚರಿ ಎಂಬಂತೆ ರಾಜನ್​ಗೆ ಬರ್ತ್​ಡೇ ವಿಶ್ ಮಾಡಿದ್ದಾರೆ ಜಾನ್ವಿ.

ಜಾನ್ವಿ ಕಪೂರ್ ಅವರು ಇನ್​ಸ್ಟಾಗ್ರಾಮ್ ಸ್ಟೇಟಸ್​​ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅಕ್ಷತ್ ಅವರು ಕೇಕ್ ಕಟ್ ಮಾಡುತ್ತಿದ್ದಾರೆ. ಇದಕ್ಕೆ ‘ನನ್ನ ಹೃದಯವೇ ನಿನಗೆ ಹುಟ್ಟು ಹಬ್ಬದ ಶುಭಾಶಯ. ನಿನಗೆ ಒಂದು ಮುತ್ತು. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ’ ಎಂದು ಜಾನ್ವಿ ಬರೆದುಕೊಂಡಿದ್ದಾರೆ. ಈ ಸ್ಟೇಟಸ್ ರೀ-ಪೋಸ್ಟ್ ಮಾಡಿಕೊಂಡಿರುವ ಅಕ್ಷತ್ ‘ಐ ಲವ್​ ಯೂ ಟೂ’ ಎಂದಿದ್ದಾರೆ.

ಇದನ್ನೂ ಓದಿ
Image
Janhvi Kapoor: ‘ಅಮ್ಮನ ಒಳ್ಳೆಯ ಬುದ್ಧಿ ಮಗಳಿಗೆ ಯಾಕಿಲ್ಲ?’: ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ವರ್ತನೆಗೆ ನೆಟ್ಟಿಗರು ಗರಂ
Image
ಡಿಗ್ಲಾಮ್ ಲುಕ್​ನಲ್ಲಿ ನಟಿ ಜಾನ್ವಿ ಕಪೂರ್​; ಆದರೆ, ಈ ನಟಿ ನೀವಂದುಕೊಂಡ ಹಾಗಲ್ಲ
Image
Janhvi Kapoor: ಜಾನ್ವಿ ಕಪೂರ್​ ಫೋಟೋ ವೈರಲ್​; ಶ್ರೀದೇವಿ ಪುತ್ರಿಯ ಅಂದ-ಚಂದ ಕಂಡು ವಾವ್​ ಎಂದ ಅಭಿಮಾನಿಗಳು
Image
ದಿನದಿನಕ್ಕೂ ಹೆಚ್ಚುತ್ತಿದೆ ಜಾನ್ವಿ ಕಪೂರ್​ ಗ್ಲಾಮರ್​; ಫೋಟೋ ಕಂಡು ಟ್ರೋಲ್ ಮಾಡಿದ ನೆಟ್ಟಿಗರು

ಜಾನ್ವಿ ಕಪೂರ್ ಅವರು ಖಾಸಗಿ ಬದುಕನ್ನು ಫ್ಯಾನ್ಸ್ ಮುಂದೆ ತೆರೆದಿಡಲು ಹೆಚ್ಚು ಇಷ್ಟಪಡುವುದಿಲ್ಲ. ಈ ಕಾರಣಕ್ಕೆ ಅವರು ರಿಲೇಶನ್​ಶಿಪ್​ನಲ್ಲಿದ್ದಾರೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ. ಆದರೆ, ಈಗ ಜಾನ್ವಿ ಕಪೂರ್ ಅವರ ಹೊಸ ಪೋಸ್ಟ್ ಸಾಕಷ್ಟು ಅನುಮಾನ ಮೂಡಿಸಿದೆ. ಇವರಿಬ್ಬರ ಮಧ್ಯೆ ಗೆಳೆತನ ಇದೆಯೋ ಅಥವಾ ಪ್ರೀತಿಯೋ ಎಂಬ ಗೊಂದಲ ಮೂಡಿದೆ.

ಇದನ್ನೂ ಓದಿ: 44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?

ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಕಪೂರ್ ಅವರು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಗುಡ್​ಲಕ್​ ಜೆರ್ರಿ’ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲಿ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ವರುಣ್ ಧವನ್​ ಜತೆ ‘ಬವಾಲ್​’ ಸಿನಿಮಾದಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ‘ಮಿಸ್ಟರ್​ ಆ್ಯಂಡ್ ಮಿಸಸ್​ ಮಾಹಿ’ ಚಿತ್ರದ ಕೆಲಸದಲ್ಲೂ ಅವರು ಬ್ಯುಸಿ ಆಗಿದ್ದಾರೆ.

Published On - 6:55 pm, Thu, 15 September 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್