AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ಟಿಲೇರಿಯೇ ತಿಮ್ಮಪ್ಪನ ದರ್ಶನ ಮಾಡುವುದೇಕೆ ಜಾನ್ಹವಿ: ಅದ್ಭುತ ಕಾರಣ ಕೊಟ್ಟ ನಟಿ

Janhvi Kapoor: ಸಿನಿಮಾಗಳಲ್ಲಿ ಮಾಡರ್ನ್ ಯುವತಿಯಾಗಿ ಕಾಣಿಸಿಕೊಳ್ಳುವ ಜಾನ್ಹವಿ ಕಪೂರ್, ಅಪ್ಪಟ ದೈವ ಭಕ್ತೆ. ಅದರಲ್ಲೂ ತಿರುಪತಿ ತಿಮ್ಮಪ್ಪನ ಪರಮ ಭಕ್ತೆ. ವರ್ಷದಲ್ಲಿ ಹಲವು ಭಾರಿ ಅವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡಿದ ಪ್ರತಿಬಾರಿ ಅವರು ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಿಯೇ ದರ್ಶನ ಪಡೆಯುತ್ತಾರೆ. ತಾವು ಹೀಗೆ ಮಾಡುವುದು ಏಕೆ ಎಂಬುದನ್ನು ಸಹ ಜಾನ್ಹವಿ ಕಪೂರ್ ವಿವರಿಸಿದ್ದಾರೆ. ಜಾನ್ಹವಿ ಕೊಟ್ಟಿರುವ ಉತ್ತರ ತಿಮ್ಮಪ್ಪನ ಭಕ್ತರ ಮಾತ್ರವಲ್ಲ ಎಲ್ಲರ ಹೃದಯ ಗೆಲ್ಲುವಂತಿದೆ.

ಮೆಟ್ಟಿಲೇರಿಯೇ ತಿಮ್ಮಪ್ಪನ ದರ್ಶನ ಮಾಡುವುದೇಕೆ ಜಾನ್ಹವಿ: ಅದ್ಭುತ ಕಾರಣ ಕೊಟ್ಟ ನಟಿ
Janhvi Kapoor
ಮಂಜುನಾಥ ಸಿ.
|

Updated on: Apr 05, 2026 | 5:17 PM

Share

ಜಾನ್ಹವಿ ಕಪೂರ್ (Janhvi Kapoor), ಬಾಲಿವುಡ್​​ನ ಬಲು ಜನಪ್ರಿಯ ಮತ್ತು ಬೇಡಿಕೆಯ ಯುವನಟಿ. ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಸಹ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಜಾನ್ಹವಿ ಕಪೂರ್, ಬಾಲಿವುಡ್​​ನ ಗ್ಲಾಮರಸ್ ನಟಿಯರಲ್ಲಿ ಒಬ್ಬರು. ಸಿನಿಮಾಗಳಲ್ಲಿ ಮಾಡರ್ನ್ ಯುವತಿಯಾಗಿ ಕಾಣಿಸಿಕೊಳ್ಳುವ ಜಾನ್ಹವಿ, ಅಪ್ಪಟ ದೈವ ಭಕ್ತೆ. ಅದರಲ್ಲೂ ತಿರುಪತಿ ತಿಮ್ಮಪ್ಪನ ಪರಮ ಭಕ್ತೆ. ವರ್ಷದಲ್ಲಿ ಹಲವು ಭಾರಿ ಅವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡಿದ ಪ್ರತಿಬಾರಿ ಅವರು ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಿಯೇ ದರ್ಶನ ಪಡೆಯುತ್ತಾರೆ. ತಾವು ಹೀಗೆ ಮಾಡುವುದು ಏಕೆ ಎಂಬುದನ್ನು ಸಹ ಜಾನ್ಹವಿ ಕಪೂರ್ ವಿವರಿಸಿದ್ದಾರೆ. ಜಾನ್ಹವಿ ಕೊಟ್ಟಿರುವ ಉತ್ತರ ತಿಮ್ಮಪ್ಪನ ಭಕ್ತರ ಮಾತ್ರವಲ್ಲ ಎಲ್ಲರ ಹೃದಯ ಗೆಲ್ಲುವಂತಿದೆ.

ದೇಶದ ಹಲವಾರು ದೇವಾಲಯಗಳಲ್ಲಿ ವಿಐಪಿ ಸಂಸ್ಕೃತಿ ಇದೆ. ಸಾಮಾನ್ಯ ಭಕ್ತರು ಗಂಟೆ ಗಟ್ಟಲೆ ಸಾಲಿನಲ್ಲಿ ನಿಂತು ಹೋಗಿ ದೇವರ ದರ್ಶನ ಮಾಡಬೇಕು ಆದರೆ ಹಣ ಇದ್ದರು ಅಥವಾ ಪ್ರಭಾವಿಗಳು ಹಣ ನೀಡಿದರೆ ಅವರಿಗೆ ವಿಶೇಷ ದರ್ಶನ ಸಿಗುತ್ತದೆ. ತಿರುಪತಿಯಲ್ಲೂ ಈ ವಿಶೇಷ ದರ್ಶನ ಸೌಲಭ್ಯ ಇದೆ. ಅದರಲ್ಲೂ ವಿವಿಐಪಿಗಳು ಕೆಲ ಸಮಯವೂ ಕಾಯುವಂತಿಲ್ಲ ಅವರಿಗೆ ನೇರ ದರ್ಶನ ವ್ಯವಸ್ಥೆ ಇದೆ. ನಟಿ ಜಾನ್ಹವಿ ಹೇಳಿರುವಂತೆ ಅವರೂ ಸಹ ಅದೇ ವಿಐಪಿ ದರ್ಶನದ ಮೂಲಕವೇ ದರ್ಶನ ಮಾಡುತ್ತಾರೆ.

ಆದರೆ, ‘ಸಾವಿರಾರು ಮಂದಿ ಗಂಟ್ಟೆಗಟ್ಟಲೆ ದೇವರ ದರ್ಶನಕ್ಕಾಗಿ ಕಾದು ದರ್ಶನ ಪಡೆಯುತ್ತಾರೆ, ಆದರೆ ನಾನು ಸುಲಭವಾಗಿ ಹಣ ಕೊಟ್ಟು ವಿಶೇಷ ದರ್ಶನ ಪಡೆಯುತ್ತೇನೆ. ಆದರೆ ಇದು ಸರಿಯಲ್ಲ, ಹಾಗೆಂದು ನಾನು ಕೆಲವು ಕಾರಣಗಳಿಗೆ (ಸೆಲೆಬ್ರಿಟಿ ಆಗಿರುವುದರಿಂದ) ಸಾಮಾನ್ಯ ಜನರ ಜೊತೆಗೆ ಹೋಗಿ ದರ್ಶನ ಮಾಡುವಂತೆಯೂ ಇಲ್ಲ. ಹಾಗಾಗಿ ನನ್ನ ಶ್ರಮ ದಾಖಲಾಗಲಿ ಎಂಬ ಕಾರಣಕ್ಕೆ ನಾನು ಪ್ರತಿ ಬಾರಿ ಮೆಟ್ಟಿಲುಗಳನ್ನು ಹತ್ತಿ, ಕಷ್ಟಪಟ್ಟು, ಶ್ರಮಪಟ್ಟು ದರ್ಶನಕ್ಕೆ ಹೋಗುತ್ತೇನೆ’ ಎಂದಿದ್ದಾರೆ ಜಾನ್ಹವಿ.

ಇದನ್ನೂ ಓದಿ:ಹುಟ್ಟುಹಬ್ಬದಂದು ತಿರುಪತಿ ಬೆಟ್ಟ ಹತ್ತಿ ದರ್ಶನ ಪಡೆದ ನಟಿ ಜಾನ್ಹವಿ ಕಪೂರ್

ಕಾರಿನಲ್ಲಿ ಬೆಟ್ಟಕ್ಕೆ ಹೋಗಿ, ಅಲ್ಲಿ ಹಣ ಕೊಟ್ಟು ವಿಐಪಿ, ವಿವಿಐಪಿ ದರ್ಶನ ಮಾಡುವುದು ಜಾನ್ಹವಿಗೆ ಬಹಳ ಸುಲಭ. ಆದರೆ ತಾನು ವಿಐಪಿ ಆಗಿ ಅಲ್ಲ ಬದಲಿಗೆ ಭಕ್ತಳಾಗಿ ದರ್ಶನಕ್ಕೆ ಹೋಗಬೇಕು ಎಂಬ ಕಾರಣಕ್ಕೆ ಜಾನ್ಹವಿ ಕಪೂರ್ ಅವರು ತಿರುಪತಿ ಬೆಟ್ಟದ 3500 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನಕ್ಕೆ ಹೋಗುತ್ತಾರೆ.

ಜಾನ್ಹವಿ ಕಪೂರ್ ಬಹಳ ವರ್ಷಗಳಿಂದಲೂ ತಿರುಪತಿ ತಿಮ್ಮಪ್ಪನ ಭಕ್ತೆ. ಅವರ ತಾಯಿ ಶ್ರೀದೇವಿ ಸಹ ತಿಮ್ಮಪ್ಪನ ಭಕ್ತೆ ಆಗಿದ್ದರು. ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದಂತೆ, ಅವರಿಗೆ ತಿರುಪತಿಯಲ್ಲಿಯೇ ಮನೆ ಮಾಡಿಕೊಂಡು ತನ್ನ ಪತಿ, ಮಕ್ಕಳೊಟ್ಟಿಗೆ ನೆಲೆಸುವ ಆಸೆಯೂ ಇದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ