Kareena Kapoor: ‘ಒಮ್ಮೆ ನಿಮ್ಮನ್ನು ಮುಟ್ತೀನಿ’: ಕರೀನಾ ಕಪೂರ್ ಎದುರು ಮನವಿ ಮಾಡಿದ ಅಭಿಮಾನಿ: ನಟಿಯ ಪ್ರತಿಕ್ರಿಯೆ ಹೇಗಿತ್ತು?
Kareena Kapoor Khan Viral Video: ಈ ಸಂದರ್ಭದಲ್ಲಿ ಕರೀನಾ ಕಪೂರ್ ಖಾನ್ ಅವರಿಗೆ ಕೊಂಚ ಇರಿಸುಮುರುಸು ಆಯಿತು. ಈ ಒಟ್ಟಾರೆ ನಟಿಯ ವರ್ತನೆ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareena Kapoor Khan) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಅವರು ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾದರೂ ಕರೀನಾಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಅವರು ಎಲ್ಲೇ ಹೋದರೂ ಕೂಡ ಅಭಿಮಾನಿಗಳು (Kareena Kapoor Fans) ಮುತ್ತಿಕೊಳ್ಳುತ್ತಾರೆ. ತಮ್ಮ ನೆಚ್ಚಿನ ನಟಿಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಮುಂಬೈನಲ್ಲಿ ಅಭಿಮಾನಿಯೊಬ್ಬರು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ‘ಒಮ್ಮೆ ನಿಮ್ಮನ್ನು ಮುಟ್ಟುತ್ತೇನೆ’ ಎಂದು ಕೈ ಚಾಚಿದ್ದಾರೆ. ಆ ಕ್ಷಣದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳ ಕೋರಿಕೆಯನ್ನು ಕರೀನಾ ಕಪೂರ್ (Kareena Kapoor) ಅವರು ಒಪ್ಪಿಕೊಂಡಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ. ಕೆಲವರು ಅಭಿಮಾನಿಯ ಪರವಾಗಿ ಮಾತನಾಡಿದ್ದಾರೆ. ಇನ್ನೂ ಕೆಲವರು ಕರೀನಾಗೆ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗೆ ಕರೀನಾ ಕಪೂರ್ ಖಾನ್ ಅವರು ಸೈಫ್ ಅಲಿ ಖಾನ್ ಜೊತೆ ಮುಂಬೈನ ಒಂದು ರೆಸ್ಟೋರೆಂಟ್ಗೆ ತೆರಳಿದ್ದರು. ರಾತ್ರಿ ಊಟಕ್ಕಾಗಿ ಬಂದಿದ್ದ ಅವರು ರೆಸ್ಟೋರೆಂಟ್ ಎದುರು ಕಾರು ನಿಲ್ಲಿಸುತ್ತಿದ್ದಂತೆಯೇ ಮಹಿಳಾ ಅಭಿಮಾನಿಯೊಬ್ಬರು ಅಡ್ಡ ಬಂದರು. ಹ್ಯಾಂಡ್ ಶೇಕ್ ಕೊಡುವ ರೀತಿಯಲ್ಲಿ ಕೈ ಮುಂದೆ ಚಾಚಿದರು. ‘ಒಮ್ಮೆ ನಿಮ್ಮನ್ನು ಮುಟ್ಟುತ್ತೀನಿ’ ಎಂದು ಮನವಿ ಮಾಡಿಕೊಂಡರು. ಆಗ ಅವರನ್ನು ನಟಿಯ ಬಾಡಿಗಾರ್ಡ್ ತಳ್ಳಿದರು.
View this post on Instagram
ಮಹಿಳಾ ಅಭಿಮಾನಿಗೆ ಹ್ಯಾಂಡ್ ಶೇಕ್ ನೀಡಲು ಕರೀನಾ ಕಪೂರ್ ಖಾನ್ ಒಪ್ಪಿಕೊಂಡಿಲ್ಲ. ಆ ವಾತಾವರಣದಲ್ಲಿ ಅವರಿಗೆ ಕೊಂಚ ಇರಿಸುಮುರುಸು ಆಯಿತು. ಕೂಡಲೇ ಅವರು ರೆಸ್ಟೋರೆಂಟ್ ಬಾಗಿಲಿನ ಕಡೆಗೆ ಸಾಗಿದರು. ಒಂದು ಕ್ಷಣ ಹಿಂತಿರುಗಿ ಆ ಅಭಿಮಾನಿಗಳ ಕಡೆಗೆ ನೋಡಿದರು. ಕರೀನಾ ಕಪೂರ್ ಅವರ ಈ ಒಟ್ಟಾರೆ ವರ್ತನೆ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Kareena Kapoor: 14 ವರ್ಷದ ಬಳಿಕ ಕರೀನಾ ಕಪೂರ್ ಅಪರೂಪದ ಫೋಟೋ ಬಹಿರಂಗ; ಇದು ಯಾವ ಚಿತ್ರದ ಲುಕ್ ಟೆಸ್ಟ್?
ಸೆಲೆಬ್ರಿಟಿಗಳು ಕೆಲವೊಮ್ಮೆ ಅವಸರದಲ್ಲಿ ಇರುತ್ತಾರೆ. ಅಂಥ ಸಂದರ್ಭದಲ್ಲಿ ಅಭಿಮಾನಿಗಳು ಮುತ್ತಿಕೊಂಡರೆ ಅವರಿಗೆ ಕಿರಿಕಿರಿ ಆಗುತ್ತದೆ. ಇತ್ತೀಚೆಗೆ ಶಾರುಖ್ ಖಾನ್ ವಿಚಾರದಲ್ಲೂ ಹಾಗೆಯೇ ಆಗಿತ್ತು. ಮುಂಬೈ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಶಾರುಖ್ ಖಾನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಪ್ರಯತ್ನಿಸಿದರು. ಆದರೆ ಅವರ ಕೈಯನ್ನು ಶಾರುಖ್ ತಳ್ಳಿದರು. ಆ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: Kareena Kapoor: ‘ಬೇರೆ ಯಾವ ನಟಿಯೂ ಮದುವೆ ಆಗದಿದ್ದಾಗ ಸೈಫ್ ಜತೆ ನಾನು ವಿವಾಹವಾದೆ’: ಕರೀನಾ ಕಪೂರ್ ಖಾನ್
ಹಲವು ಸಿನಿಮಾಗಳಲ್ಲಿ ಕರೀನಾ ಕಪೂರ್ ಖಾನ್ ಅವರು ಬ್ಯುಸಿ ಆಗಿದ್ದಾರೆ. ಕಳೆದ ವರ್ಷ ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗೆ ಅವರು ಹೊಸ ಸಿನಿಮಾದ ಶೂಟಿಂಗ್ ಆರಂಭಿಸಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.