ವೇದಿಕೆ ಮೇಲೆ ಗಿಟಾರ್ನಿಂದ ಹಲ್ಲೆ ಮಾಡಿದ ಕಾರ್ತಿಕ್ ಆರ್ಯನ್; ವೈರಲ್ ವಿಡಿಯೋದ ಅಸಲಿಯತ್ತು ಏನು?
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರ ಕೆಲವು ವಿಡಿಯೋಗಳು ವೈರಲ್ ಆಗಿದೆ. ಈ ವಿಡಿಯೋಗಳಲ್ಲಿ ನಟಿ ಶ್ರೀಲೀಲಾ ಕೂಡ ಇದ್ದಾರೆ. ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಸೆಟ್ನಿಂದ ವಿಡಿಯೋಗಳು ಲೀಕ್ ಆಗಿವೆ. ಅದರ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬಿ-ಟೌನ್ ನಟ ಕಾರ್ತಿಕ್ ಆರ್ಯನ್ (Kartik Aaryan) ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ‘ಭೂಲ್ ಭುಲಯ್ಯ 3’, ‘ಚಂದು ಚಾಂಪಿಯನ್’ ಮುಂತಾದ ಸಿನಿಮಾಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಈಗ ಕಾರ್ತಿಕ್ ಆರ್ಯನ್ ಅವರು ಹೊಸ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಕನ್ನಡದ ನಟಿ ಶ್ರೀಲೀಲಾ (Sreeleela) ಅವರು ಹೀರೋಯಿನ್ ಆಗಿದ್ದಾರೆ. ಈ ನಡುವೆ ಒಂದು ವಿಡಿಯೋ ವೈರಲ್ ಆಗಿದೆ. ವೇದಿಕೆ ಮೇಲೆ ವ್ಯಕ್ತಿಯೊಬ್ಬನ ಮೇಲೆ ಕಾರ್ತಿಕ್ ಆರ್ಯನ್ ಅವರು ಗಿಟಾರ್ ಹಿಡಿದು ಹಲ್ಲೆ ಮಾಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ವೈರಲ್ ಆಗಿರುವ ವಿಡಿಯೋ (Kartik Aaryan Viral Video) ಬಗ್ಗೆ ಇಲ್ಲಿದೆ ಮಾಹಿತಿ..
ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಜೋಡಿಯ ಸಿನಿಮಾಗೆ ಮೊದಲು ‘ಆಶಿಕಿ 3’ ಎಂದು ಶೀರ್ಷಿಕೆ ಇಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಲವು ವಿಘ್ನಗಳು ಎದುರಾಗಿದ್ದರಿಂದ ಟೈಟಲ್ ಬದಲಾಯಿಸಲು ಚಿತ್ರತಂಡ ತೀರ್ಮಾನಿಸಿದಂತಿದೆ. ‘ತು ಮೇರಿ ಜಿಂದಗಿ ಹೈ’ ಎಂದು ಶೀರ್ಷಿಕೆ ಇಡುವ ಸಾಧ್ಯತೆ ದಟ್ಟವಾಗಿದೆ. ಈ ಸಿನಿಮಾದ ಶೂಟಿಂಗ್ ಸೆಟ್ನಿಂದ ಕೆಲವು ವಿಡಿಯೋಗಳು ಲೀಕ್ ಆಗಿವೆ.
ಮೊದಲ ವಿಡಿಯೋದಲ್ಲಿ ಕಾರ್ತಿಕ್ ಆರ್ಯನ್ ಅವರು ಗಿಟಾರ್ ನಡಿಸುತ್ತಾ, ವೇದಿಕೆಯಲ್ಲಿ ಹಾಡುತ್ತಿರುವ ದೃಶ್ಯವಿದೆ. ಅವರ ಹಿಂದೆ ಶ್ರೀಲೀಲಾ ಕೂಡ ಗಿಟಾರ್ ಹಿಡಿದು ನಿಂತಿದ್ದಾರೆ. ನಿರ್ದೇಶಕ ಅನುರಾಗ್ ಬಸು ಅವರು ವೇದಿಕೆ ಮುಂಭಾಗ ನಿಂತಿರುವ ಪ್ರೇಕ್ಷಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶೂಟಿಂಗ್ ಸೆಟ್ನಿಂದ ಈ ರೀತಿ ವಿಡಿಯೋ ಲೀಕ್ ಆಗಿರುವುದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.
@TheAaryanKartik is 🔥💯❤️ Killing It .#Aashiqui3 #tumerizindagihai #KartikAaryan #Trending #Reels #LatestNews #news #Sreeleela #anuragbasu #Bollywood pic.twitter.com/fhVw9vBeuM
— VASU KAPOOR (@moviereview1684) April 1, 2025
ಮತ್ತೊಂದು ವಿಡಿಯೋದಲ್ಲಿ ಹಲ್ಲೆಯ ದೃಶ್ಯವಿದೆ. ಕಾರ್ತಿಕ್ ಆರ್ಯನ್ ಅವರು ವ್ಯಕ್ತಿಯೊಬ್ಬನಿಗೆ ಗಿಟಾರ್ನಿಂದ ಹೊಡೆಯುತ್ತಾರೆ. ಬಳಿಕ ಆತನಿಗೆ ಒದ್ದು ವೇದಿಕೆಯಿಂದ ಕೆಳಗೆ ಬೀಳಿಸುತ್ತಾರೆ. ಇದು ರಿಯಲ್ ಅಲ್ಲ. ಸಿನಿಮಾ ಶೂಟಿಂಗ್ ಅಷ್ಟೇ. ಆದರೆ ಈ ರೀತಿಯ ಪ್ರಮುಖ ದೃಶ್ಯಗಳು ಲೀಕ್ ಆದರೆ ಸಿನಿಮಾದಲ್ಲಿ ನೋಡಲು ಏನು ಉಳಿದಿರುತ್ತದೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ಹೀರೋ ಕಾರ್ತಿಕ್ ಆರ್ಯನ್
ಈ ಸಿನಿಮಾಗಾಗಿ ಕಾರ್ತಿಕ್ ಆರ್ಯನ್ ಅವರು ಗೆಟಪ್ ಬದಲಾಯಿಸಿಕೊಂಡಿದ್ದಾರೆ. ಲವರ್ ಬಾಯ್ ಅವತಾರ ಬಿಟ್ಟು ಸಿಕ್ಕಾಪಟ್ಟೆ ಮಾಸ್ ಗೆಟಪ್ ಧರಿಸಿದ್ದಾರೆ. ಅವರನ್ನು ನೋಡಿದರೆ ‘ಅನಿಮಲ್’ ಹಾಗೂ ‘ಕಬೀರ್ ಸಿಂಗ್’ ಸಿನಿಮಾಗಳು ನೆನಪಾಗುತ್ತಿವೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.