AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marata Mandir: ಕಬ್ಜ ಸಿನಿಮಾ ಬಗ್ಗೆ ಮುಂಬೈ ಹಿರಿಯ ಪ್ರದರ್ಶಕ ಮನೋಜ್ ಅಸಮಾಧಾನ

ಬಿಡುಗಡೆ ಆದ ಕೆಲವೇ ದಿನಗಳಿಗೆ ನೂರು ಕೋಟಿ ಕಲೆಕ್ಷನ್ ಮಾಡಿದ ಕಬ್ಜ ಸಿನಿಮಾ ಮುಂಬೈನಲ್ಲಿ ಅಷ್ಟಾಗಿ ಗಮನ ಸೆಳೆಯಲಿಲ್ಲ ಎಂದು ಅಲ್ಲಿನ ಹಿರಿಯ ಪ್ರದರ್ಶನ ಮನೋಜ್ ದೇಸಾಯಿ ಹೇಳಿದ್ದಾರೆ. ಸಿನಿಮಾ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Marata Mandir: ಕಬ್ಜ ಸಿನಿಮಾ ಬಗ್ಗೆ ಮುಂಬೈ ಹಿರಿಯ ಪ್ರದರ್ಶಕ ಮನೋಜ್ ಅಸಮಾಧಾನ
ಮನೋಜ್ ದೇಸಾಯಿ
ಮಂಜುನಾಥ ಸಿ.
|

Updated on: Mar 29, 2023 | 10:40 PM

Share

ಆರ್.ಚಂದ್ರು (R Chandru) ನಿರ್ದೇಶಿಸಿ ಉಪೇಂದ್ರ (Upendra) ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ (Kabzaa) ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿ ಬಾಕ್ಸ್ ಆಫೀಸ್​ನಲ್ಲಿ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾ ದೊಡ್ಡ ಯಶಸ್ಸು ಗಳಿಸಿದೆ ಎಂದು ಸ್ವತಃ ಆರ್.ಚಂದ್ರು ಹೇಳಿಕೊಂಡಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಯಶಸ್ಸಾದರೂ ಸಹ ಸಿನಿಮಾದ ಬಗ್ಗೆ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿದ್ದವು. ಕರ್ನಾಟಕದಲ್ಲಿ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಸಿನಿಮಾ ಅಷ್ಟಾಗಿ ಏನೂ ಗಳಿಕೆ ಮಾಡಲಿಲ್ಲ ಎಂದೇ ಹೇಳಲಾಗಿತ್ತು. ಇದೀಗ ಮುಂಬೈನ ಹಿರಿಯ ಹಾಗೂ ಜನಪ್ರಿಯ ಸಿನಿಮಾ ಪ್ರದರ್ಶಕರೊಬ್ಬರು ಕಬ್ಜ ಸಿನಿಮಾದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈನ ಹಳೆಯ, ಅತ್ಯಂತ ಜನಪ್ರಿಯ ಹಾಗೂ ದೊಡ್ಡ ಚಿತ್ರಮಂದಿರವಾದ ಮರಾಠ ಮಂದಿರ್​ನ ಮಾಲೀಕ ಹಾಗೂ ಗಯೇಟಿ ಗ್ಯಾಲೆಕ್ಸಿ ಹೆಸರಿನ ಮಲ್ಟಿಪ್ಲೆಕ್ಸ್ ಅನ್ನೂ ಹೊಂದಿರುವ ಮನೋಜ್ ದೇಸಾಯಿ ಕಬ್ಜ ಸಿನಿಮಾದ ಬಗ್ಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಸಿನಿಮಾವು ಮುಂಬೈನಲ್ಲಿ ಫ್ಲಾಪ್ ಆಗಿದೆ ಎಂದಿದ್ದಾರೆ.

ಕಬ್ಜ ಸಿನಿಮಾ ಪ್ರೇಕ್ಷಕರನ್ನು ಕಬ್ಜ ಮಾಡಿಕೊಳ್ಳುವಲ್ಲಿ ಸೋತಿತು. ನಾವು ಲಾಭ ಮಾಡಿಕೊಳ್ಳಲು ಆಗಲಿಲ್ಲ. ಚಿತ್ರವನ್ನು ತೆಗೆದು ಬೇರೆ ಸಿನಿಮಾ ಹಾಕಬೇಕಾಯಿತು ಎಂದಿದ್ದಾರೆ. ಸಿನಿಮಾದ ಕತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮನೋಜ್, ದೇಶಪ್ರೇಮಿಯಾಗಿದ್ದ ವ್ಯಕ್ತಿ ಭೂಗತ ಪಾತಕಿ ಆಗಿ ತಲೆಗಳನ್ನು ತುಂಡರಿಸುತ್ತಾ ಹೋಗುತ್ತಾನೆ. ವಿಪರೀತ ಹಿಂಸೆಗಳುಳ್ಳ ದೃಶ್ಯಗಳು ಸಿನಿಮಾದಲ್ಲಿವೆ. ಅದು ಜನರಿಗೆ ಇಷ್ಟವಾಗಲಿಲ್ಲ ಎನಿಸುತ್ತದೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ, ಜನರು ಆ ಸಿನಿಮಾವನ್ನು ತಿರಸ್ಕರಿಸಿದರು ಎಂದಿದ್ದಾರೆ ಮನೋಜ್.

ಮನೋಜ್ ದೇಸಾಯಿ, ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ತಮ್ಮದೇ ಚಿತ್ರಮಂದಿರದಲ್ಲಿ 777 ಚಾರ್ಲಿ, ಕೆಜಿಎಫ್, ಕಾಂತಾರ ಕನ್ನಡ ಸಿನಿಮಾಗಳ ಹಿಂದಿ ಆವೃತ್ತಿಗಳನ್ನು ಪ್ರದರ್ಶಿಸಿ ಜನರಿಗೆ ಸಿನಿಮಾ ತಲುಪುವಂತೆ ಮಾಡಿದ್ದಾರೆ. ಆದರೆ ಈ ಬಾರಿ ಕಬ್ಜ ಸಿನಿಮಾ ಅವರಿಗೆ ನಿರಾಸೆ ಮೂಡಿಸಿದೆ.

ಮನೋಜ್ ದೇಸಾಯಿ ಒಡೆತನದ ಮರಾಠ ಚಿತ್ರಮಂದಿರ ಮಹಾರಾಷ್ಟ್ರದ ಹಳೆಯ ಚಿತ್ರಮಂದಿರಗಳಲ್ಲಿ ಒಂದು 1958 ರಲ್ಲಿ ಪ್ರಾರಂಭವಾದ ಈ ಚಿತ್ರಮಂದಿರದಲ್ಲಿ ಬರೋಬ್ಬರಿ 1000 ಮಂದಿ ಒಟ್ಟಿಗೆ ಕೂತು ಸಿನಿಮಾ ನೋಡಬಹುದು. ಶಾರುಖ್ ಖಾನ್ ನಟನೆಯ ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ ಸಿನಿಮಾ ಸತತ 28 ವರ್ಷಗಳಿಂದಲೂ ಈ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಲೇ ಇದೆ.

ಇದನ್ನೂ ಓದಿ: Kabzaa Movie: ‘ಕಬ್ಜ 2’ ಸಿನಿಮಾ ಹೇಗಿರಲಿದೆ? ಉತ್ತರ ಕೊಟ್ಟ ನಿರ್ದೇಶಕ ಆರ್. ಚಂದ್ರು

ಇನ್ನು ಕಬ್ಜ ಸಿನಿಮಾದ ವಿಷಯಕ್ಕೆ ಮರಳುವುದಾದರೆ, ಕನ್ನಡದ ಈ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಚ್ 17 ರಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಉಪೇಂದ್ರ ನಾಯಕನಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಶ್ರಿಯಾ ಶರಣ್ ನಾಯಕಿ. ಸಿನಿಮಾ ನಿರ್ದೇಶನ ಮಾಡಿದ್ದ ಆರ್.ಚಂದ್ರು ಸಹ ನಿರ್ಮಾಪಕರೂ ಆಗಿದ್ದರು. ರವಿ ಬಸ್ರೂರು ಸಂಗೀತ ಸಿನಿಮಾಕ್ಕಿತ್ತು. 4000 ಸ್ಕ್ರೀನ್​ಗಳಲ್ಲಿ ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿಕೊಂಡಿತು. ಇನ್ನು ಕೆಲವೇ ದಿನಗಳಲ್ಲಿ ಒಟಿಟಿಗೆ ಸಹ ಬರಲಿದೆ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು