Nayanthara: ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು

Nayanthara | Shah Rukh Khan: ಮುಂಬೈನಲ್ಲಿ ಶಾರುಖ್​ ಖಾನ್ ನಟನೆಯ ‘ಜವಾನ್​’ ಚಿತ್ರಕ್ಕೆ ಶೂಟಿಂಗ್​ ನಡೆಯುತ್ತಿದೆ. ಜುಲೈ ಮಧ್ಯದವರೆಗೂ ನಯನತಾರಾ ಅವರು ಕ್ಯಾಮೆರಾ ಎದುರಿಸಲಿದ್ದಾರೆ.

Nayanthara: ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು
ನಯನತಾರಾ, ಶಾರುಖ್ ಖಾನ್
Updated By: ಮದನ್​ ಕುಮಾರ್​

Updated on: Jun 28, 2022 | 1:03 PM

ನಟಿ ನಯನತಾರಾ (Nayanthara) ಅವರು ಮದುವೆ ಸಲುವಾಗಿ ನಟನೆಯಿಂದ ಕೊಂಚ ಬ್ರೇಕ್​ ಪಡೆದುಕೊಂಡಿದ್ದರು. ಬಹುಕಾಲದ ಗೆಳೆಯ ವಿಘ್ನೇಶ್​ ಶಿವನ್​ ಜೊತೆ ಅವರು ಹಸೆಮಣೆ ಏರಿದರು. ಜೂನ್​ 9ರಂದು ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆಯಿತು. ಬಳಿಕ ನವದಂಪತಿ ಹನಿಮೂನ್​ಗೆ (Honeymoon) ತೆರಳಿದರು. ಈಗ ಅವರು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ನಯನತಾರಾ ಅವರಿಗೆ ಸಖತ್​ ಬೇಡಿಕೆ ಇದೆ. ಅವರ ಕಾಲ್​ಶೀಟ್​ಗಾಗಿ ಅನೇಕ ನಿರ್ಮಾಪಕರು ಕಾದಿದ್ದಾರೆ. ಸದ್ಯ ಶಾರುಖ್​ ಖಾನ್​ (Shah Rukh Khan) ನಟನೆಯ ‘ಜವಾನ್’ ಸಿನಿಮಾದಲ್ಲಿ ನಯನತಾರಾ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್​ನಲ್ಲಿ ಅವರು ಭಾಗಿ ಆಗಿದ್ದಾರೆ. ಹನಿಮೂನ್​ ಮುಗಿಸಿ, ಹೊಸ ಉತ್ಸಾಹದೊಂದಿಗೆ ಅವರು ಚಿತ್ರೀಕರಣಕ್ಕೆ ಮರಳಿದ್ದಾರೆ. ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

ಶಾರುಖ್​ ಖಾನ್​ ಅವರು ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್​ಮೆಂಟ್​’ ಬ್ಯಾನರ್​ ಮೂಲಕ ‘ಜವಾನ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಪ್ರಾಜೆಕ್ಟ್​ ಬಗ್ಗೆ ಸ್ವತಃ ಶಾರುಖ್​ ಖಾನ್​ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ‘ಜವಾನ್​’ ಚಿತ್ರದ ಫಸ್ಟ್ ಲುಕ್​ ಪೋಸ್ಟರ್​ ಬಿಡುಗಡೆ ಆಯಿತು. ವಿಭಿನ್ನ ಗೆಟಪ್​ನಲ್ಲಿ ಶಾರುಖ್​ ಗಮನ ಸೆಳೆದಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ರಿಲೀಸ್​ ಆಗಲಿದೆ ಎಂಬುದು ವಿಶೇಷ.

ನಯನತಾರಾ ಮತ್ತು ಶಾರುಖ್​ ಖಾನ್​ ಜೊತೆಯಾಗಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಪ್ರಸ್ತುತ ಮುಂಬೈನಲ್ಲಿ ಈ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಜುಲೈ ಮಧ್ಯದವರೆಗೂ ನಯನತಾರಾ ಅವರು ಈ ಚಿತ್ರಕ್ಕಾಗಿ ಕ್ಯಾಮೆರಾ ಎದುರಿಸಲಿದ್ದಾರೆ. ದೀಪಿಕಾ ಪಡುಕೋಣೆ ಅವರು ಈ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಇದನ್ನೂ ಓದಿ
Shah Rukh Khan: ಶಾರುಖ್​ ಖಾನ್​ ಬಾಲಿವುಡ್​ಗೆ ಕಾಲಿಟ್ಟು ಕಳೆಯಿತು 30 ವರ್ಷ; 14 ಬಾರಿ ‘ಫಿಲ್ಮ್​ಫೇರ್’​ ಪಡೆದ ಕಿಂಗ್​ ಖಾನ್
Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್​ ಕಿಡ್​
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?
ದೀಪಿಕಾ ಪಡುಕೋಣೆ ಬಿಕಿನಿ ಫೋಟೋಗಳು ಲೀಕ್​; ಶಾರುಖ್​ ಕೂಡ ಇದ್ದಾರೆ ಅಂತ ಪತ್ತೆಹಚ್ಚಿದ ಫ್ಯಾನ್ಸ್​

ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದ ಶಾರುಖ್​ ಖಾನ್​ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ‘ಜವಾನ್​ ಸಿನಿಮಾ ಬಗ್ಗೆ ಈಗಲೇ ಮಾತನಾಡಲು ಹೆಚ್ಚೇನೂ ಇಲ್ಲ. ನಟನಾಗಿ ನಾನು ಒಳ್ಳೆಯ ಸಮಯ ಕಳೆಯುತ್ತಿದ್ದೇನೆ. ನಿರ್ದೇಶಕ ಅಟ್ಲಿ ಬೇರೆ ರೀತಿಯ ಸಿನಿಮಾ ಮಾಡುತ್ತಿದ್ದಾರೆ. ನನಗೆ ಇದು ಹೊಸದು. ನನ್ನ ಮತ್ತು ಅಟ್ಲಿ ನಡುವೆ ಉತ್ತಮ ಕೆಮಿಸ್ಟ್ರಿ ಇದೆ’ ಎಂದು ಅವರು ಹೇಳಿದ್ದಾರೆ. ಇದಲ್ಲದೇ ‘ಡಂಕಿ’ ಮತ್ತು ‘ಪಟಾಣ್​’ ಸಿನಿಮಾದಲ್ಲೂ ಶಾರುಖ್​ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಶಾರುಖ್​ ಖಾನ್​ 8 ಪ್ಯಾಕ್​ ಬಾಡಿ ಫೋಟೋ ವೈರಲ್​; ‘ಪಠಾಣ್​’ ಚಿತ್ರದಲ್ಲಿ ಹೊಸ ಗೆಟಪ್​

ಶಾರುಖ್​ ಖಾನ್​-ಅಟ್ಲೀ ಹೊಸ ಸಿನಿಮಾ ಅನೌನ್ಸ್​; ಟೈಟಲ್ ಘೋಷಣೆ ಮಾಡಿದ ಕಿಂಗ್ ಖಾನ್

Published On - 1:03 pm, Tue, 28 June 22