AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರದ ಪರೀಕ್ಷೆಯಲ್ಲೂ ‘ಪಠಾಣ್’ ಪಾಸ್; ಭಾರತದಲ್ಲಿ 6 ದಿನಕ್ಕೆ 300 ಕೋಟಿ ರೂ. ಕಲೆಕ್ಷನ್​

Pathaan Movie Collection: ಸೋಮವಾರ ಚಿತ್ರವನ್ನು ಎಷ್ಟು ಜನರು ವೀಕ್ಷಿಸಿದರು? ಸಿನಿಮಾ ಎಷ್ಟು ಗಳಿಸಿತು ಎನ್ನುವುದರ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗುತ್ತದೆ.

ಸೋಮವಾರದ ಪರೀಕ್ಷೆಯಲ್ಲೂ ‘ಪಠಾಣ್’ ಪಾಸ್; ಭಾರತದಲ್ಲಿ 6 ದಿನಕ್ಕೆ 300 ಕೋಟಿ ರೂ. ಕಲೆಕ್ಷನ್​
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್
ರಾಜೇಶ್ ದುಗ್ಗುಮನೆ
|

Updated on:Jan 31, 2023 | 9:47 AM

Share

‘ಪಠಾಣ್​’ (Pathaan Movie Collection) ಸಿನಿಮಾದ ಕಲೆಕ್ಷನ್ ತಗ್ಗುವ ಲಕ್ಷಣ ಸದ್ಯಕ್ಕಂತೂ ಕಾಣುತ್ತಿಲ್ಲ. ಮೊದಲ ಐದು ದಿನ ಅಬ್ಬರದ ಕಲೆಕ್ಷನ್ ಮಾಡಿದ್ದ ಈ ಚಿತ್ರ ಸೋಮವಾರ (ಜನವರಿ 30) ಎಷ್ಟು ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಸೋಮವಾರವೂ ಶಾರುಖ್​ ಖಾನ್​ (Shah Rukh Khan) ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಈ ಮೂಲಕ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಶಾರುಖ್ ಖಾನ್ ವೃತ್ತಿಜೀವನದಲ್ಲಿ ಈ ಚಿತ್ರ ತುಂಬಾನೇ ವಿಶೇಷ ಎನಿಸಿಕೊಳ್ಳಲಿದೆ.

ಯಾವುದೇ ಚಿತ್ರಕ್ಕೆ ಸೋಮವಾರದ ಕಲೆಕ್ಷನ್ ತುಂಬಾನೇ ಮುಖ್ಯವಾಗುತ್ತದೆ. ಮೊದಲ ವೀಕೆಂಡ್​ನಲ್ಲಿ ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಾರೆ. ಆದರೆ, ಮೊದಲ ಸೋಮವಾರ ಚಿತ್ರವನ್ನು ಎಷ್ಟು ಜನರು ವೀಕ್ಷಿಸಿದರು? ಸಿನಿಮಾ ಎಷ್ಟು ಗಳಿಸಿತು ಎನ್ನುವುದರ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗುತ್ತದೆ. ‘ಪಠಾಣ್​’ ಸಿನಿಮಾ ಸೋಮವಾರ ಸುಮಾರು 25 ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ ಭಾರತದಲ್ಲಿ ಈ ಚಿತ್ರದ ಹಿಂದಿ ವರ್ಷನ್ ಕಲೆಕ್ಷನ್ 296 ಕೋಟಿ ರೂಪಾಯಿ ಆಗಿದೆ. ಈ ವಾರಾಂತ್ಯಕ್ಕೆ ಚಿತ್ರ 400 ಕೋಟಿ ಕ್ಲಬ್ ಸೇರಲಿದೆ.

‘ಪಠಾಣ್’ ಸಿನಿಮಾ ಹಿಂದಿ ಮಾತ್ರವಲ್ಲದೆ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗಿದೆ. ಅದರ ಕಲೆಕ್ಷನ್ ಸೇರಿದರೆ ಭಾರತದ ಬಾಕ್ಸ್ ಆಫೀಸ್ ಗಳಿಕೆ 330 ಕೋಟಿ ರೂಪಾಯಿ ದಾಟಿದೆ. ವಿಶ್ವಾದ್ಯಂತ ಚಿತ್ರದ ಗಳಿಕೆ 600 ಕೋಟಿ ರೂಪಾಯಿ ಆಗಿದೆ. ಇನ್ನೂ ಕೆಲ ವಾರ ‘ಪಠಾಣ್​’ ಸಿನಿಮಾ ಅಬ್ಬರದ ಗಳಿಕೆ ಮಾಡಲಿದೆ.

ಇದನ್ನೂ ಓದಿ
Image
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Image
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Image
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಇದನ್ನೂ ಓದಿ: ‘ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡಲಿ, ನಮ್ಮ ಉದ್ದೇಶ ಮನರಂಜನೆ ನೀಡೋದು’; ಬೈಕಾಟ್ ಬಗ್ಗೆ ಶಾರುಖ್​ ಮಾತು

‘ಪಠಾಣ್​’ ಚಿತ್ರ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರುವುದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ಈ ಕಾರಣಕ್ಕೆ ಸಿನಿಮಾ ತಂಡ ಸೋಮವಾರ ಸುದ್ದಿಗೋಷ್ಠಿ ನಡೆಸಿತ್ತು. ಈ ವೇಳೆ ಇಡೀ ತಂಡ ಎಲ್ಲರಿಗೂ ಧನ್ಯವಾದ ಅರ್ಪಿಸಿದೆ. ಶಾರುಖ್ ಖಾನ್ ಅವರು ಬೈಕಾಟ್ ವಿಚಾರವಾಗಿಯೂ ಮಾತನಾಡಿದ್ದಾರೆ. ಯಾರಿಗೂ ನೋಯಿಸುವ ಉದ್ದೇಶ ನಮ್ಮದಲ್ಲ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:22 am, Tue, 31 January 23

ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ