ಅಯೋಧ್ಯೆಯಲ್ಲೇ ‘ಆದಿಪುರುಷ್’ ಚಿತ್ರದ ಟೀಸರ್ ಲಾಂಚ್; ಸಿಎಂ ಯೋಗಿ ಆದಿತ್ಯನಾಥ್ ಭಾಗಿ?

| Updated By: ರಾಜೇಶ್ ದುಗ್ಗುಮನೆ

Updated on: Sep 21, 2022 | 3:02 PM

‘ಆದಿಪುರುಷ್​’ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ರಾವಣನ ಪಾತ್ರಕ್ಕೆ ಸೈಫ್ ಅಲಿ ಖಾನ್ ಜೀವ ತುಂಬಿದ್ದಾರೆ. ಕೃತಿ ಸನನ್ ಅವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ದಿನ ಕಳೆದಂತೆ ನಿರೀಕ್ಷೆ ಹೆಚ್ಚುತ್ತಲೇ ಇದೆ.

ಅಯೋಧ್ಯೆಯಲ್ಲೇ ‘ಆದಿಪುರುಷ್’ ಚಿತ್ರದ ಟೀಸರ್ ಲಾಂಚ್; ಸಿಎಂ ಯೋಗಿ ಆದಿತ್ಯನಾಥ್ ಭಾಗಿ?
ಪ್ರಭಾಸ್
Follow us on

ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಪೋಸ್ಟರ್ ಹೊರತುಪಡಿಸಿ ಈವರೆಗೆ ಮತ್ತಾವುದೇ ಅಪ್​​ಡೇಟ್​ ಸಿಕ್ಕಿಲ್ಲ. ಪ್ರಭಾಸ್ ಅವರು ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ರಾಮನ ಜನ್ಮಸ್ಥಳ ಅಯೋಧ್ಯೆ ಎಂದು ರಾಮಾಯಣದಲ್ಲಿ ಉಲ್ಲೇಖ ಆಗಿದೆ. ಈ ಕಾರಣದಿಂದ ಅಯೋಧ್ಯೆಯಲ್ಲೇ ಈ ಸಿನಿಮಾದ ಟೀಸರ್ ಲಾಂಚ್ ಮಾಡಲು ಚಿತ್ರತಂಡ ಪ್ಲ್ಯಾನ್ ರೂಪಿಸಿದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ‘ಆದಿಪುರುಷ್’ ಟೀಸರ್ (Adipurush Teaser) ಲಾಂಚ್​ಗೆ ಅಯೋಧ್ಯೆಯನ್ನೇ ಆಯ್ಕೆ ಮಾಡಿಕೊಂಡಿರುವುದರಿಂದ ಚಿತ್ರಕ್ಕೆ ಮತ್ತಷ್ಟು ಹೈಪ್ ಸಿಗುವ ಸಾಧ್ಯತೆ ದಟ್ಟವಾಗಿದೆ.

‘ಆದಿಪುರುಷ್​’ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ರಾವಣನ ಪಾತ್ರಕ್ಕೆ ಸೈಫ್ ಅಲಿ ಖಾನ್ ಜೀವ ತುಂಬಿದ್ದಾರೆ. ಕೃತಿ ಸನನ್ ಅವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ಗೆ ದಿನ ಕಳೆದಂತೆ ನಿರೀಕ್ಷೆ ಹೆಚ್ಚುತ್ತಲೇ ಇದೆ. ಹೀಗಿರುವಾಗಲೇ ಸಿನಿಮಾದ ಟೀಸರ್ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ.

ಇನ್ನು ಕೆಲವೇ ದಿನಗಳಲ್ಲಿ ದಸರಾ ಉತ್ಸವ ಆರಂಭ ಆಗಲಿದೆ. ಈ ಸಂದರ್ಭದಲ್ಲಿ ಪ್ರಭಾಸ್ ಅವರು ಅಯೋಧ್ಯೆಗೆ ತೆರಳಿ ರಾಮನ ಪ್ರತಿಕೃತಿಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿ ‘ಆದಿಪುರುಷ್​’ ಟೀಸರ್ ಲಾಂಚ್ ಮಾಡಲು ಚಿಂತನೆ ನಡೆದಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ಟೀಸರ್ ಲಾಂಚ್ ಮಾಡುವ ಸಾಧ್ಯತೆ ಇದೆಯಂತೆ.

ಇದನ್ನೂ ಓದಿ
‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ನೋಡಿ ಪತ್ನಿ ಎದುರು ಅಕ್ಷಯ್​ ಕುಮಾರ್​ ರೀತಿ ಡೈಲಾಗ್​ ಹೊಡೆದ ಅಮಿತ್​ ಶಾ
 ಹರ್ಷನ ಮದುವೆ ಆಗಲು ವರುಧಿನಿ ಹೊಸ ಪ್ಲ್ಯಾನ್​; ಕೊನೇ ಕ್ಷಣದಲ್ಲಿ ವಧು ಬದಲು?
Ilaiyaraaja Best Kannada Songs: ಎಂದೂ ಮರೆಯದ ಗೀತೆಗಳನ್ನು ನೀಡಿದ ಇಳಯರಾಜ; ಇಲ್ಲಿದೆ ಸೂಪರ್ ಹಿಟ್ ಹಾಡುಗಳ ಪಟ್ಟಿ
Bairagee Movie: ಶಿವಣ್ಣ, ಶರಣ್​ ಕಂಠದಲ್ಲಿ ‘ರಿದಂ ಆಫ್​ ಶಿವಪ್ಪ’ ಹಾಡು; ಹೊಸ ಸಾಂಗ್​ ಮೂಲಕ ಹೈಪ್​ ಹೆಚ್ಚಿಸಿದ ‘ಬೈರಾಗಿ’

ಇದನ್ನೂ ಓದಿ: Adipurush budget: ಪ್ರಭಾಸ್ ನಟನೆಯ ‘ಆದಿಪುರುಷ್’ಗೆ ಬಾಹುಬಲಿಗಿಂತಲೂ ಹೆಚ್ಚು ದುಡ್ಡು ಸುರಿದ ನಿರ್ಮಾಪಕರು; ಅಚ್ಚರಿಯ ವಿಚಾರ ಬಹಿರಂಗ

ಪ್ರಭಾಸ್ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಇತ್ತೀಚೆಗೆ ನಿಧನ ಹೊಂದಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಪ್ರಭಾಸ್ ಭಾಗಿ ಆಗಿದ್ದರು. ಕೃಷ್ಣಂ ರಾಜು ಅವರ 13 ದಿನಗಳ ಕಾರ್ಯಮುಗಿಸಿ ನಂತರ ಚಿತ್ರದ ಕೆಲಸಗಳಲ್ಲಿ ಪ್ರಭಾಸ್ ಬ್ಯುಸಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ‘ಆದಿಪುರುಷ್​’ ಚಿತ್ರ ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಹೀಗಾಗಿ, ಸಿನಿಮಾದ ಟೀಸರ್ ಹೇಗಿರಲಿದೆ ಎಂಬುದು ತಿಳಿಯುವ ಕೌತುಕ ಫ್ಯಾನ್ಸ್​ಗೆ ಮೂಡಿದೆ.

 

 

Published On - 2:40 pm, Wed, 21 September 22