AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

500 ಕೋಟಿ ರೂ. ಕಲೆಕ್ಷನ್ ಮಾಡಿದ ಈ ರೊಮ್ಯಾಂಟಿಕ್ ಚಿತ್ರ ಒಟಿಟಿಯಲ್ಲಿ; ಮಿಸ್ ಮಾಡಬೇಡಿ

ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿಗೂ ಅಧಿಕ ಗಳಿಕೆ ಮಾಡಿದ ರೊಮ್ಯಾಂಟಿಕ್ ಚಿತ್ರ ಈಗ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಿದೆ. ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ ಮುಖ್ಯ ಪಾತ್ರಗಳನ್ನು ಒಳಗೊಂಡ ಈ ಚಿತ್ರವು ಹೊಸ ಪೀಳಿಗೆಯ ಪ್ರೇಕ್ಷಕರನ್ನು ಬಹಳವಾಗಿ ಆಕರ್ಷಿಸಿದೆ. ಚಿತ್ರದ ಕಥಾವಸ್ತು, ಸಂಗೀತ ಹಾಗೂ ಭಾವುಕತೆ ಪ್ರೇಕ್ಷಕರನ್ನು ಒಲಿಸಿಕೊಂಡಿದೆ.

500 ಕೋಟಿ ರೂ. ಕಲೆಕ್ಷನ್ ಮಾಡಿದ ಈ ರೊಮ್ಯಾಂಟಿಕ್ ಚಿತ್ರ ಒಟಿಟಿಯಲ್ಲಿ; ಮಿಸ್ ಮಾಡಬೇಡಿ
ಸೈಯಾರ
ರಾಜೇಶ್ ದುಗ್ಗುಮನೆ
|

Updated on: Sep 13, 2025 | 8:49 AM

Share

ವೀಕೆಂಡ್​ ಬಂತೆಂದರೆ ಥಿಯೇಟರ್ ಮಾತ್ರವಲ್ಲ ಒಟಿಟಿಯಲ್ಲೂ ದೊಡ್ಡ ಸಂಖ್ಯೆಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತವೆ. ಕೆಲವು ಸಿನಿಮಾಗಳು ಥಿಯೇಟರ್​​ನಲ್ಲಿ ಹಿಟ್ ಆಗಿ ಒಟಿಟಿಗೆ ಬಂದರೆ, ಇನ್ನೂ ಕೆಲವು ವೆಬ್ ಸೀರಿಸ್​ಗಳು ಹಾಗೂ ಸಿನಿಮಾಗಳು ನೇರವಾಗಿ ಒಟಿಟಿಗೆ ಕಾಲಿಡುತ್ತವೆ. ಬಾಕ್ಸ್ ಆಫೀಸ್​​ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸೂಪರ್ ಹಿಟ್ ಚಿತ್ರವೊಂದು ಈಗ ಒಟಿಟಿಗೆ ಕಾಲಿಟ್ಟಿದೆ. ಇದು ಸಖತ್ ರೊಮ್ಯಾಂಟಿಕ್ ಸಿನಿಮಾ. ಅದುವೇ ‘ಸೈಯಾರ’ (Saiyaara).

‘ಸೈಯಾರ’ ಸಿನಿಮಾದಲ್ಲಿ ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಪ್ರೇಕ್ಷಕರಿಂದ ಅದರಲ್ಲೂ ಹೊಸ ಜನರೇಶನ್ ಮಂದಿ ಈ ಚಿತ್ರವನ್ನು ಸಾಕಷ್ಟು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಈಗ ಚಿತ್ರವು ಒಟಿಟಿಯಲ್ಲಿ ರಿಲೀಸ್ ಆಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ
Image
ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಆಕ್ರೋಶ; ಕಪಿಲ್ ಶೋ ನಿಲ್ಲಿಸೋ ಎಚ್ಚರಿಕೆ
Image
‘ನೀವು ಊಹಿಸಿದಂತೆ ಕಥೆ ನಡೆಯಲ್ಲ’; ‘ಕರ್ಣ’ ಬಗ್ಗೆ ಕಿರಣ್ ರಾಜ್ ಹಿಂಟ್
Image
ಜೀ ಕನ್ನಡ ವೇದಿಕೆ ಮೇಲೆ ಅನುಶ್ರೀ ಮಡಿಲು ತುಂಬಿದ ತಾರಾ; ಮಗಳಂತೆ ಭಾವುಕ
Image
‘ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ’; ಅನುಶ್ರೀ

ಕ್ರಿಶ್ ಕಪೂರ್ (ಅಹಾನ್ ಪಾಂಡೆ) ಒಳ್ಳೆಯ ಸಿಂಗರ್ ಆಗಬೇಕು, ಸಾಕಷ್ಟು ಹೆಸರು ಮಾಡಬೇಕು ಎಂದು ಕನಸು ಕಂಡವನು. ಆಗ ವಾಣಿ ಬಾತ್ರಾ (ಅನೀತ್ ಪಡ್ಡಾ) ಸಿಗುತ್ತಾಳೆ. ಆಕೆಯ ಜೀವನದಲ್ಲೂ ಒಂದು ಪಾಸ್ಟ್ ಇರುತ್ತದೆ, ಕ್ರಿಶ್ ಜೀವನದಲ್ಲೂ ಒಂದು ಪಾಸ್ಟ್ ಇರುತ್ತದೆ. ಇವರಿಬ್ಬರ ಮಧ್ಯೆ ಪ್ರೀತಿ ಆಗುತ್ತದೆ. ವಾಣಿ ಹಾಡುಗಳಿಗೆ ಸಾಲುಗಳನ್ನು ಬರೆದರೆ, ಕ್ರಿಶ್ ಹಾಡುತ್ತಾನೆ. ಆದರೆ, ವಿಧಿಯಾಟ ಬೇರೆಯದೇ ಇರುತ್ತದೆ. ನಂತರ ಏನಾಗುತ್ತದೆ ಎಂಬುದೇ ಸಿನಿಮಾದ ಕಥೆ.

ಇದನ್ನೂ ಓದಿ: ‘ಸೈಯಾರ’ ಹೀರೋ-ಹೀರೋಯಿನ್ ಮಧ್ಯೆ ನಿಜ ಜೀವನದಲ್ಲಿ ಮೂಡಿತು ಪ್ರೀತಿ?

‘ಸೈಯಾರ’ ಸಿನಿಮಾ ಸಖತ್ ಎಮೋಷನಲ್​ ಆಗಿದೆ ಎಂದು ಅನೇಕರು ಹೇಳಿದ್ದಾರೆ. ಈ ಚಿತ್ರದಲ್ಲಿ ಪ್ರೀತಿ ಇದೆ, ಪ್ರೀತಿಯನ್ನು ಕಳೆದುಕೊಳ್ಳೋ ನೋವಿದೆ. ಈ ಚಿತ್ರವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಭಾವುಕರಾಗಿದ್ದಾರೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಸಿನಿಮಾ ಥಿಯೇಟರ್​​ನಲ್ಲಿ ಹಿಟ್ ಆದ ಮಾತ್ರಕ್ಕೆ ಒಟಿಟಿಯಲ್ಲಿ ಯಶಸ್ಸು ಕಾಣಬೇಕು ಎಂಬ ಯಾವ ನಿಯಮವೂ ಇಲ್ಲ. ಈ ಮೊದಲು ಕೂಡ ಈ ರೀತಿ ಆದ ಸಾಕಷ್ಟು ಉದಾಹರಣೆ ಇದೆ. ‘ಸೈಯಾರ’ ಸಿನಿಮಾನ ಜನರು ಒಟಿಟಿಯಲ್ಲಿ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.