AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಯವಾಯ್ತು ಸಲ್ಮಾನ್ ಖಾನ್ ಇನ್​​ಸ್ಟಾಗ್ರಾಮ್ ಖಾತೆ; ಕಾರಣ ಏನು?

ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರ ಇನ್‌ಸ್ಟಾಗ್ರಾಮ್ ಖಾತೆ ಇತ್ತೀಚೆಗೆ ಅರ್ಧ ಗಂಟೆಗಳ ಕಾಲ ದಿಢೀರ್ ಕಣ್ಮರೆಯಾಗಿ, ಅಭಿಮಾನಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. 72 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಖಾತೆ 'ಮಾಯವಾದ' ನಂತರ, ಅಭಿಮಾನಿಗಳು ಆತಂಕಗೊಂಡಿದ್ದರು. ನಂತರ ಅದು ಯಥಾಸ್ಥಿತಿಗೆ ಮರಳಿದರೂ, ಈ ಕುರಿತು ಸಲ್ಮಾನ್ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.

ಮಾಯವಾಯ್ತು ಸಲ್ಮಾನ್ ಖಾನ್ ಇನ್​​ಸ್ಟಾಗ್ರಾಮ್ ಖಾತೆ; ಕಾರಣ ಏನು?
ಸಲ್ಮಾನ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: May 26, 2026 | 7:58 AM

Share

ಬಾಲಿವುಡ್‌ ನಟ ಸಲ್ಮಾನ್ ಖಾನ್ (Salman Khan), ಸದಾ ಸಿನಿಮಾಗಳ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ಸದ್ಯ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಹೊಸ ಸಿನಿಮಾ ‘ಮಾತೃಭೂಮಿ’ ಹಾಗೂ ಇತ್ತೀಚಿನ ಪಾಪರಾಜಿ ವಿವಾದಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಪಾಪರಾಜಿಗಳ ವರ್ತನೆಗೆ ತೀವ್ರ ಕೋಪ ವ್ಯಕ್ತಪಡಿಸಿದ್ದ ನಟ, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಕೆಲವು ನಿಗೂಢ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು.

ಅಭಿಮಾನಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್ ಖಾನ್ ಅವರ ಪ್ರೊಫೈಲ್ ಹುಡುಕಿದಾಗ, ಅವರ ಅಧಿಕೃತ ಖಾತೆ ಯಾರಿಗೂ ಕಾಣಿಸಲಿಲ್ಲ. ಬದಲಿಗೆ ‘ಕ್ಷಮಿಸಿ, ಈ ಪುಟ ಲಭ್ಯವಿಲ್ಲ’ ಎಂಬ ಸಂದೇಶವೊಂದು ಪರದೆಯ ಮೇಲೆ ಮೂಡಿಬರುತ್ತಿತ್ತು. ಇದನ್ನು ನೋಡಿದ ತಕ್ಷಣವೇ ಸಲ್ಮಾನ್ ಅಭಿಮಾನಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಭಾಯಿಜಾನ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಯಾರಾದರೂ ಹ್ಯಾಕ್ ಮಾಡಿದ್ದಾರೋ? ಅಥವಾ ಅವರೇ ಅದನ್ನು ಪರ್ಮನೆಂಟ್ ಆಗಿ ಡಿಲೀಟ್ ಮಾಡಿದ್ದಾರೋ? ಇಲ್ಲವೇ ಸದ್ಯದ ವಿವಾದಗಳಿಂದ ಬೇಸತ್ತು ಕೆಲವು ದಿನಗಳ ಮಟ್ಟಿಗೆ ತಾವೇ ಅಕೌಂಟ್ ಅನ್ನು ಡೀಆಕ್ಟಿವೇಟ್ (ನಿಷ್ಕ್ರಿಯ) ಮಾಡಿಕೊಂಡಿದ್ದಾರೋ? ಎಂಬ ಗೊಂದಲದಲ್ಲಿ ಮುಳುಗಿದ್ದರು.

ಸಲ್ಮಾನ್ ಖಾನ್ ಅವರ ಇನ್‌ಸ್ಟಾಗ್ರಾಮ್ ಖಾತೆ ಮಾಯವಾಗುತ್ತಿದ್ದಂತೆಯೇ, ಅದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳು ಮತ್ತು ಅಭಿಮಾನಿಗಳ ಆತಂಕದ ಪ್ರತಿಕ್ರಿಯೆಗಳು ಇಡೀ ಇಂಟರ್ನೆಟ್‌ನಲ್ಲಿ ಕಾಳ್ಗಿಚ್ಚಿನಂತೆ ಹರಡಿದವು. ಇದರಿಂದ ಕಂಗಾಲಾದ ನಟನ ಕೋಟ್ಯಂತರ ಅಭಿಮಾನಿಗಳು ವೇದಿಕೆಯಲ್ಲಿ ಭಾಯಿಜಾನ್ ಅಕೌಂಟ್ ಬಗ್ಗೆಯೇ ನಿರಂತರವಾಗಿ ಚರ್ಚೆ ಆರಂಭಿಸಿದರು. ಪ್ರಾರ್ಥನೆಗಳ ಮೂಲಕ ಅವರ ಖಾತೆಗೆ ಏನೂ ಆಗಿರಬಾರದು ಎಂದು ಆಶಿಸಿದರು. ಖಾತೆ ಕಣ್ಮರೆಯಾದ ಕೇವಲ 30 ನಿಮಿಷಗಳಲ್ಲೇ ಸಲ್ಮಾನ್ ಅವರ ಇನ್‌ಸ್ಟಾಗ್ರಾಮ್ ಖಾತೆ ಮತ್ತೆ ಯಥಾಸ್ಥಿತಿಗೆ ಮರಳಿತು. ಇದು ಅಭಿಮಾನಿಗಳಿಗೆ ನಿರಾಳತೆ ತಂದರೂ, ಅಚ್ಚರಿ ಮೂಡಿಸಿದೆ.

ಇನ್‌ಸ್ಟಾಗ್ರಾಮ್ ಖಾತೆ ದಿಢೀರ್ ಮಾಯವಾಗಿ, ಅರ್ಧ ಗಂಟೆಯಲ್ಲೇ ವಾಪಸ್ ಬಂದ ಈ ಇಡೀ ಹೈಡ್ರಾಮಾ ಬಗ್ಗೆ ನಟ ಸಲ್ಮಾನ್ ಖಾನ್ ಆಗಲಿ ಅಥವಾ ಅವರ ಪಿಆರ್ (PR) ತಂಡವಾಗಲಿ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಹಾಗಾಗಿ, ಇನ್‌ಸ್ಟಾಗ್ರಾಮ್‌ನಲ್ಲಿ ಉಂಟಾದ ಯಾವುದಾದರೂ ತಾಂತ್ರಿಕ ದೋಷದಿಂದ ಹೀಗಾಯಿತೇ? ಅಥವಾ ಸಲ್ಮಾನ್ ಅವರೇ ಸ್ವತಃ ಅಕೌಂಟ್ ಕ್ಲೋಸ್ ಮಾಡಿದ್ದರೇ? ಅಥವಾ ಬೇರೆ ಯಾರಾದರೂ ಅವರ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದಾಗ ಇನ್‌ಸ್ಟಾಗ್ರಾಮ್ ಭದ್ರತಾ ಕಾರಣಗಳಿಗಾಗಿ ಅದನ್ನು ಬ್ಲಾಕ್ ಮಾಡಿತ್ತೇ? ಎಂಬ ಅಸಲಿ ಸತ್ಯ ಇನ್ನು ನಿಗೂಢವಾಗಿಯೇ ಉಳಿದಿದೆ.

ಇದನ್ನೂ ಓದಿ: ಆಸ್ಪತ್ರೆ ಎದುರು ಗಲಾಟೆ; ಮರುದಿನವೇ ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿ ರಾಜಿ ಮಾಡಿಕೊಂಡ ಪಾಪರಾಜಿಗಳು

ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, ಸಲ್ಮಾನ್ ಖಾನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 72 ಮಿಲಿಯನ್‌ಗಿಂತಲೂ 7.2 ಕೋಟಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅವರು ನಿಯಮಿತವಾಗಿ ತಮ್ಮ ಮುಂಬರುವ ಚಿತ್ರಗಳ ಅಪ್‌ಡೇಟ್‌ಗಳು, ಜಿಮ್ ಫಿಟ್‌ನೆಸ್ ವಿಡಿಯೋಗಳು ಮತ್ತು ಕುಟುಂಬದ ಜೊತೆಗಿನ ಸುಂದರ ಕ್ಷಣಗಳನ್ನು ಈ ವೇದಿಕೆಯ ಮೂಲಕವೇ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ಪ್ರಭಾವಿ ಖಾತೆ ದಿಢೀರ್ ಕಣ್ಮರೆಯಾಗಿರುವುದು ಸದ್ಯ ಬಾಲಿವುಡ್ ಅಂಗಳದಲ್ಲಿ ದೊಡ್ಡ ಇಂಟರೆಸ್ಟಿಂಗ್ ಸುದ್ದಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ
‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್
‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್