ಸಲ್ಮಾನ್-ರಶ್ಮಿಕಾ ಮಧ್ಯೆ ಕೆಮಿಸ್ಟ್ರಿಯೇ ಇಲ್ಲ; ‘ಸಿಖಂದರ್’ ಹೊಸ ಹಾಡು ಸಪ್ಪೆ ಸಪ್ಪೆ

ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಸಿಖಂದರ್’ ಚಿತ್ರದ ಹೊಸ ಹಾಡು ಬಿಡುಗಡೆಯಾದ ನಂತರ ಟ್ರೋಲ್‌ಗಳಿಗೆ ಗುರಿಯಾಗಿದೆ. ಸಲ್ಮಾನ್ ಮತ್ತು ರಶ್ಮಿಕಾ ನಡುವೆ ಕೆಮಿಸ್ಟ್ರಿ ಕೊರತೆಯಿರುವುದು ಅಭಿಮಾನಿಗಳನ್ನು ನಿರಾಶೆಗೊಳಿಸಿದೆ. ಹಾಡಿನಲ್ಲಿನ ಕಳಪೆ ನೃತ್ಯ ಮತ್ತು ಅಸಮರ್ಪಕ ಕೆಮಿಸ್ಟ್ರಿ ಟೀಕೆಗೆ ಕಾರಣವಾಗಿದೆ.

ಸಲ್ಮಾನ್-ರಶ್ಮಿಕಾ ಮಧ್ಯೆ ಕೆಮಿಸ್ಟ್ರಿಯೇ ಇಲ್ಲ; ‘ಸಿಖಂದರ್’ ಹೊಸ ಹಾಡು ಸಪ್ಪೆ ಸಪ್ಪೆ
ಸಲ್ಮಾನ್-ರಶ್ಮಿಕಾ

Updated on: Mar 05, 2025 | 7:33 AM

ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ‘ಸಿಖಂದರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ, ಈ ನಿರೀಕ್ಷೆ ಹುಸಿ ಆಗುವ ಸೂಚನೆ ಸಿಕ್ಕಿದೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಧ್ಯೆ ಯಾವುದೇ ಕೆಮಿಸ್ಟ್ರಿ ಕಾಣಿಸುತ್ತಿಲ್ಲ. ಇದಕ್ಕೆ ಕಾರಣ ಆಗಿದ್ದು, ‘ಸಿಖಂದರ್’ ಚಿತ್ರದ ಹೊಸ ಹಾಡು. ಇತ್ತೀಚೆಗೆ ಈ ಚಿತ್ರದ ಹಾಡು ರಿಲೀಸ್ ಆಗಿದ್ದು, ಟ್ರೋಲ್​ ಮಾಡೋರಿಗೆ ಆಹಾರ ಆಗಿದೆ. ಇದಕ್ಕೆ ರಶ್ಮಿಕಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

‘ಸಿಖಂದರ್’ ಚಿತ್ರದ ‘ಜೊಹ್ರಾ ಜಬೀನ್..’ ಹಾಡು ರಿಲೀಸ್ ಆಗಿದೆ. ಈ ಚಿತ್ರದ ಮೊದಲ ಹಾಡು ಇದಾಗಿದೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಡ್ಯಾನ್ಸ್ ಮಾಡೋದು ಈ ಹಾಡಿನಲ್ಲಿ ಇದೆ. ಈ ಹಾಡು ಟ್ರೆಂಡ್ ಏನೋ ಆಗುತ್ತಿದೆ. ಆದರೆ, ಟ್ರೋಲ್​ಗಳ ಕಾರಣಕ್ಕೆ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಇದನ್ನೂ ಓದಿ
ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
ಅಬ್ಬರಿಸುತ್ತ ಬಂದ ಸಿಕಂದರ್ ಟೀಸರ್; ಖುಷಿಯಾದ ಸಲ್ಮಾನ್ ಖಾನ್ ಫ್ಯಾನ್ಸ್
ಸಲ್ಮಾನ್-ಅಟ್ಲಿ ಚಿತ್ರಕ್ಕೆ ಬ್ರೇಕ್; ಆ ನಟನಿಂದ ಅರ್ಧಕ್ಕೆ ನಿಂತಿತು ಸಿನಿಮಾ
ರಶ್ಮಿಕಾ ಮಂದಣ್ಣಗೆ ಗುಲಾಬಿ ಹೂವು ನೀಡಿದ ಪ್ರೇಮಿ: ಆ ವ್ಯಕ್ತಿ ಮೇಲೆ ಅನುಮಾನ

ಹಾಡಿನ ಉದ್ದಕ್ಕೂ ಎಲ್ಲಿಯೂ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಧ್ಯೆ ಕೆಮಿಸ್ಟ್ರಿ ಕಾಣಿಸಿಯೇ ಇಲ್ಲ. ಕೇವಲ ಅದ್ದೂರಿ ಸೆಟ್​ನಲ್ಲಿ ಶೂಟ್ ಮಾಡಲಾಗಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಅನೇಕರು ಸಲ್ಮಾನ್ ಖಾನ್​ಗೆ ಬುದ್ಧಿವಾದ ಹೇಳಿದ್ದಾರೆ. ‘ತಂಗಿ ವಯಸ್ಸಿನವರನ್ನು ತಂದು ನಾಯಕಿಯರನ್ನಾಗಿ ಮಾಡಿದರೆ ಹೀಗೆ ಆಗೋದು’ ಎಂದು ಬರೆದುಕೊಂಡಿದ್ದಾರೆ.

ಈ ಮೊದಲು ಸಲ್ಮಾನ್ ಖಾನ್ ಅವರು ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಡ್ಯಾನ್ಸ್ ನೋಡಿ ಅನೇಕರು ಟೀಕೆ ಮಾಡಿದ್ದರು. ಈಗ ‘ಸಿಖಂದರ್’ ಚಿತ್ರದ ಹಾಡಿನ ಮೂಲಕ ಟ್ರೋಲ್​ಗೆ ಒಳಗಾಗಿದ್ದಾರೆ.

ಇದನ್ನೂ ಓದಿ: ‘ಸಿಖಂದರ್’ ಸಿನಿಮಾದಲ್ಲಿ ಆ್ಯಂಗ್ರಿ ಯಂಗ್​ಮ್ಯಾನ್ ಲುಕ್​ನಲ್ಲಿ ಸಲ್ಲು

‘ಸಿಖಂದರ್’ ಸಿನಿಮಾ ಈ ವರ್ಷ ಈದ್​ಗೆ ತೆರೆಗೆ ಬರಲಿದೆ. ರಿಲೀಸ್ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲ. ಈ ಚಿತ್ರವನ್ನು ಖ್ಯಾತ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.