AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ‘ಟಾಕ್ಸಿಕ್’ ವಿರುದ್ಧ ಸೆಣೆಸಲು ವಿವಾದ ಬಗೆಹರಿಸಿಕೊಂಡ ಶ್ರದ್ಧಾ ಕಪೂರ್

ಬಾಲಿವಿಡ್ ನಟಿ ಶ್ರದ್ಧಾ ಕಪೂರ್ ಅವರ 'ಈಥಾ' ಸಿನಿಮಾ ಬಿಡುಗಡೆಗೂ ಮುನ್ನವೇ ಎದುರಿಸುತ್ತಿದ್ದ ಶೀರ್ಷಿಕೆ ವಿವಾದಕ್ಕೆ ಈಗ ತೆರೆ ಬಿದ್ದಿದೆ. ವಿಠಾಬಾಯಿ ಅವರ ಕುಟುಂಬಸ್ಥರು ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ಚಿತ್ರಕ್ಕಿದ್ದ ಆರಂಭಿಕ ವಿಘ್ನವನ್ನು ನಿವಾರಿಸಿದ್ದಾರೆ. ವಿವಾದ ಮುಕ್ತವಾಗಿರುವ ಈ ಚಿತ್ರವು ಆಗಸ್ಟ್ 28 ರಂದು ಬಿಡುಗಡೆಯಾಗಲಿದ್ದು, ಆಗಸ್ಟ್ 26 ಕ್ಕೆ ಬರಲಿರುವ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಮುಖಾಮುಖಿಯಾಗಲು ಸಜ್ಜಾಗಿದೆ.

ಯಶ್ ‘ಟಾಕ್ಸಿಕ್’ ವಿರುದ್ಧ ಸೆಣೆಸಲು ವಿವಾದ ಬಗೆಹರಿಸಿಕೊಂಡ ಶ್ರದ್ಧಾ ಕಪೂರ್
ಯಶ್-ಶ್ರದ್ಧಾ
TV9 Web
| Edited By: |

Updated on: Jul 03, 2026 | 12:33 PM

Share

ಮುಖ್ಯಾಂಶಗಳು

  • ಶ್ರದ್ಧಾ ಕಪೂರ್ 'ಈಥಾ' ಚಿತ್ರದ ಶೀರ್ಷಿಕೆ ವಿವಾದಕ್ಕೆ ಮುಕ್ತಿ
  • ವದಂತಿಗಳಿಗೆ ಬ್ರೇಕ್ ಹಾಕಿದ ವಿಠಾಬಾಯಿ ನಾರಾಯಣಗಾಂವ್ಕರ್ ಕುಟುಂಬ
  • ಯಶ್ 'ಟಾಕ್ಸಿಕ್' ಎದುರು ಸೆಣೆಸಲು ಬಾಲಿವುಡ್ ಅಖಾಡ ಸಿದ್ಧ

ಆಗಸ್ಟ್ ತಿಂಗಳ ಕೊನೆಯಲ್ಲಿ ಭಾರತೀಯ ಚಿತ್ರರಂಗದಲ್ಲಿ ಒಂದು ದೊಡ್ಡ ಬಾಕ್ಸ್ ಆಫೀಸ್ ಸಮರ ನಿರೀಕ್ಷಿಸಲಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ವರ್ಡ್​ ಸಿನಿಮಾ ‘ಟಾಕ್ಸಿಕ್’ (Toxic) ಆಗಸ್ಟ್ 26 ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಆಗಸ್ಟ್ 28ರಂದು ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯಲ್ಲಿರುವ ‘ಈಥಾ’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡೂ ಸಿನಿಮಾಗಳ ಮಧ್ಯೆ ಭಾರಿ ಕ್ಲ್ಯಾಶ್ ನಡೆಯುವುದು ಗ್ಯಾರಂಟಿ ಎನ್ನಲಾಗಿದೆ. ‘ಟಾಕ್ಸಿಕ್’ ಎದುರು ಅಖಾಡಕ್ಕೆ ಇಳಿಯುವ ಮುನ್ನವೇ ಶ್ರದ್ಧಾ ಕಪೂರ್ ಅವರ ‘ಈಥಾ’ ಚಿತ್ರಕ್ಕೆ ಒಂದು ದೊಡ್ಡ ವಿಘ್ನ ಎದುರಾಗಿತ್ತು. ಈಗ ಆ ವಿವಾದ ಸಂಪೂರ್ಣವಾಗಿ ಬಗೆಹರಿದಿದ್ದು, ಚಿತ್ರತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಚಿತ್ರದ ಶೀರ್ಷಿಕೆಗೆ ವ್ಯಕ್ತವಾಗಿತ್ತು ಭಾರಿ ವಿರೋಧ

‘ಈಥಾ’ ಚಿತ್ರದ ಟೀಸರ್ ಬಿಡುಗಡೆಯಾದಾಗ ಶ್ರದ್ಧಾ ಕಪೂರ್ ಅವರ ಲುಕ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಮಹಾರಾಷ್ಟ್ರದ ಹೆಸರಾಂತ ಲಾವಣಿ ನೃತ್ಯಗಾರ್ತಿ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಬಯೋಪಿಕ್ ಇದಾಗಿದೆ. ಆದರೆ, ಈ ಚಿತ್ರಕ್ಕೆ ವಿಠಾಬಾಯಿ ಅವರ ಹೆಸರಿಡದೆ ‘ಈಥಾ’ ಎಂದು ಹೆಸರಿಟ್ಟಿರುವುದಕ್ಕೆ ರಾಜಕೀಯ ಪಕ್ಷವಾದ ಎನ್‌ಸಿಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ, ವಿಠಾಬಾಯಿ ಅವರ ಕುಟುಂಬದವರಿಗೂ ಈ ಶೀರ್ಷಿಕೆ ಇಷ್ಟವಿಲ್ಲ ಎಂಬ ವದಂತಿಗಳು ಹರಡಿದ್ದವು.

ವಿಘ್ನ ನಿವಾರಿಸಿದ ವಿಠಾಬಾಯಿ ಹಿರಿಯ ಪುತ್ರಿ

ಚಿತ್ರದ ಟೈಟಲ್ ವಿವಾದ ದೊಡ್ಡದಾಗುತ್ತಿದ್ದಂತೆ ಸ್ವತಃ ವಿಠಾಬಾಯಿ ಅವರ ಹಿರಿಯ ಪುತ್ರಿ, 75 ವರ್ಷದ ರಾಷ್ಟ್ರಪ್ರಶಸ್ತಿ ಪುರಸ್ಕೃತ ತಮಾಷಾ ಕಲಾವಿದೆ ಮಂಗಳಾ ಬನ್ಸೋಡೆ ಕರಾವಡಿಕರ್ ಅವರು ಮೌನ ಮುರಿದಿದ್ದಾರೆ. ಚಿತ್ರಕ್ಕಿದ್ದ ವಿಘ್ನವನ್ನು ದೂರ ಮಾಡಿದ್ದಾರೆ.

‘ನಮ್ಮ ತಾಯಿಯ ಬಯೋಪಿಕ್ ಚಿತ್ರದ ಶೀರ್ಷಿಕೆಗೆ ನಮ್ಮ ಯಾವುದೇ ಆಕ್ಷೇಪವಿಲ್ಲ. ಆ ದಿನಗಳಲ್ಲಿ ನನ್ನ ತಾಯಿ ಹಳ್ಳಿಗಳಲ್ಲಿ ಪ್ರದರ್ಶನ ನೀಡಲು ಹೋದಾಗ, ಅಲ್ಲಿನ ಗ್ರಾಮೀಣ ಜನರು ಅವರನ್ನು ಪ್ರೀತಿಯಿಂದ ಈಥಾ ಎಂದೇ ಕರೆಯುತ್ತಿದ್ದರು. ಹಾಗಾಗಿ ಈ ಶೀರ್ಷಿಕೆ ಸೂಕ್ತವಾಗಿದೆ. ಈ ಚಿತ್ರದ ಮೂಲಕ ನನ್ನ ತಾಯಿಯ ಕಲಾ ಸೇವೆ ಜಗತ್ತಿಗೆ ತಿಳಿಯುತ್ತಿರುವುದಕ್ಕೆ ನಮಗೆ ಸಂತೋಷವಿದೆ’ ಎಂದು ಹೇಳುವ ಮೂಲಕ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ಸಿನಿಮಾ ಮಾಡುವ ಮುನ್ನವೇ ಕುಟುಂಬದವರನ್ನು ಸಂಪರ್ಕಿಸಿ ಈ ಹೆಸರನ್ನು ಇಟ್ಟಿದ್ದರು ಎನ್ನಲಾಗಿದೆ. ಈಗ ಕುಟುಂಬಸ್ಥರೇ ಕ್ಲಾರಿಟಿ ಕೊಟ್ಟಿರುವುದರಿಂದ ವಿವಾದ ಸಂಪೂರ್ಣ ಮುಕ್ತಾಯವಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್​​ನಲ್ಲಿ ಅಷ್ಟು ದೊಡ್ಡ ಎಚ್ಚರಿಕೆ ಕೊಡಲು ಇದೆ ದೊಡ್ಡ ಕಾರಣ

‘ಟಾಕ್ಸಿಕ್’ ಎದುರು ಸೆಣೆಸಲು ಅಖಾಡ ಸಜ್ಜು

ರಣದೀಪ್ ಹೂಡಾ ಮತ್ತು ಮೊಹಮ್ಮದ್ ಜೀಶನ್ ಅಯೂಬ್ ಅವರಂತಹ ಪ್ರತಿಭಾವಂತ ತಾರಾಗಣ ಹೊಂದಿರುವ ‘ಈಥಾ’ ಸಿನಿಮಾ, ಟೈಟಲ್ ವಿವಾದವನ್ನು ಬಗೆಹರಿಸಿಕೊಂಡು ಈಗ ನಿಶ್ಚಿಂತೆಯಾಗಿ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್26 ಕ್ಕೆ ಯಶ್ ಅವರ ‘ಟಾಕ್ಸಿಕ್’ ಭಾರತೀಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲು ಬರುತ್ತಿದ್ದರೆ, ಆಗಸ್ಟ್ 28 ಕ್ಕೆ ಶ್ರದ್ಧಾ ಕಪೂರ್ ಅವರ ‘ಈಥಾ’ ಬಾಲಿವಿಡ್ ಅಖಾಡದಿಂದ ಕೌಂಟರ್ ಕೊಡಲು ಸಿದ್ಧವಾಗುತ್ತಿದೆ. ಈ ಇಬ್ಬರು ಸ್ಟಾರ್‌ಗಳ ಬಾಕ್ಸ್ ಆಫೀಸ್ ಕ್ಲ್ಯಾಶ್ ಅಲ್ಲಿ ಅಂತಿಮವಾಗಿ ಗೆಲುವು ಯಾರಿಗೆ ಸಿಗುತ್ತದೆ ಎಂಬ ಕುತೂಹಲ ಮೂಡಿದೆ. ‘ಈಥಾ’ ರೇಸ್​ನಿಂದ ಹಿಂದೆ ಸರಿಯುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿತ್ರದುರ್ಗದ ಮಂಕಿಮ್ಯಾನ್ ಜ್ಯೋತಿರಾಜ್​​ಗೆ ಮದುವೆ ಫಿಕ್ಸ್: ಹುಡುಗಿ ಯಾರು?
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
'ಜಮ್ಮು ಕಾಶ್ಮೀರ, ಲಡಾಖ್​ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್‌; ಹಿಂಬಾಕಿ ಬಿಡುಗಡೆ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಯತೀಂದ್ರ ಸಿದ್ದರಾಮಯ್ಯನವರನ್ನ ವಿಶೇಷವಾಗಿ ಪರಿಚಯಿಸಿದ ಡಿಕೆಶಿ
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್!
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ
RSS ಚಟುವಟಿಕೆಗಳಿಗೆ ಬ್ರೇಕ್ ಆರೋಪ: ವಿಧೇಯಕದ ಅಂಶ ಬಿಚ್ಚಿಟ್ಟ ಗೃಹ ಸಚಿವ
‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್
‘ಮುಂಗಾರು ಮಳೆ’ ಸಿನಿಮಾ ಆಗಲು ಕಾರಣನಾದೆ: ನಾಗತಿಹಳ್ಳಿ ಚಂದ್ರಶೇಖರ್